ಬೆಂಗಳೂರಲ್ಲಿ ಕಳುವಾಗಿದ್ದ ಮಿನಿ ಟ್ರಕ್ ಮಂಡ್ಯದ ಗ್ಯಾರೇಜೊಂದರಲ್ಲಿ ಬಿಡಿ ಬಾಗಗಳಲ್ಲಿ ಪತ್ತೆಯಾಯಿತು!!
ಕದ್ದ ವಾಹನವನ್ನು ಡಿಸ್ ಮ್ಯಾಂಟಲ್ ಮಾಡಿ ಬಿಡಿಭಾಗಗಳನ್ನು ಮಾರಿಕೊಳ್ಳುವ ಕಳ್ಳರ ಗ್ಯಾಂಗ್ ಕೂಡ ಇರುತ್ತವೆ. ಇಂಥ ತಂಡಗಳು ಸಾಮಾನ್ಯವಾಗಿ ಎಲ್ಲ ನಗರಗಳಲ್ಲಿ ಇರುತ್ತವೆ. ಅವರ ಪ್ರಕಾರ ಇದು ಸೇಫ್ ದಂಧೆ.
ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ (Bengaluru) ಕಳುವಾಗಿದ್ದ ವಾಹನವೊಂದು ಮಂಡ್ಯನಲ್ಲಿ (Mandya) ಪತ್ತೆಯಾಗಿದೆ. ಆದರೆ ಯಥಾಸ್ಥಿತಿಯಲ್ಲಿ ಅಲ್ಲ, ಬಿಡಿ ಭಾಗಗಳಲ್ಲಿ! ಕಳ್ಳರು ಒಂದು ಮಿನಿ ಟ್ರಕ್ (mini truck) ಕದ್ದುಕೊಂಡು ಮಂಡ್ಯಗೆ ಒಯ್ದಿದ್ದಾರೆ. ವಾಹನದ ಮಾಲೀಕ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಕಳುವಾದ ವಾಹನದ ಬಗ್ಗೆ ವಿವರಗಳನ್ನು ನೀಡುವಾಗ ಅವರು ಅದಕ್ಕೆ ಜಿಪಿಎಸ್ (GPS) ಅಳವಡಿಸಿದ್ದ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆ ಮಾಹಿತಿಯೇ ವಾಹನವನ್ನು ಪತ್ತೆ ಮಾಡಲು ನೆರವಾಗಿದೆ. ಆದರೆ ಕಳುವಾದ ವಾಹನ ಸಿಕ್ಕಿದ್ದು ಮಾತ್ರ ಬಿಡಿ ಭಾಗಗಳಲ್ಲಿ!
ವಾಹನ ಕಳ್ಳರ ಮೋಡಸ್ ಆಪರಂಡೈ ಬೇರೆ ಬೇರೆ ಆಗಿರುತ್ತದೆ ಮಾರಾಯ್ರೇ. ಕೆಲವರು ಅದರ ನಂಬರ್ ಮತ್ತು ಬಣ್ಣ ಬದಲಾಯಿಸಿ ಮಾರುತ್ತಾರೆ. ಮತ್ತೂ ಕೆಲವರಿಗೆ ಅಂತರರಾಜ್ಯ ಕಳ್ಳರ ತಂಡದೊಂದಿಗೆ ಸಂಪರ್ಕವಿರುತ್ತದೆ. ಅವರಿಗೆ ವಾಹನವನ್ನು ಮಾರಿಕೊಳ್ಳುತ್ತಾರೆ. ಈ ತಂಡ ಅವುಗಳನ್ನು ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರುತ್ತಾರೆ.
ಕದ್ದ ವಾಹನವನ್ನು ಡಿಸ್ ಮ್ಯಾಂಟಲ್ ಮಾಡಿ ಬಿಡಿಭಾಗಗಳನ್ನು ಮಾರಿಕೊಳ್ಳುವ ಕಳ್ಳರ ಗ್ಯಾಂಗ್ ಕೂಡ ಇರುತ್ತವೆ. ಇಂಥ ತಂಡಗಳು ಸಾಮಾನ್ಯವಾಗಿ ಎಲ್ಲ ನಗರಗಳಲ್ಲಿ ಇರುತ್ತವೆ. ಅವರ ಪ್ರಕಾರ ಇದು ಸೇಫ್ ದಂಧೆ. ಈ ತಂಡಗಳು ತಮ್ಮವೇ ಆದ ಗ್ಯಾರೇಜುಗಳನ್ನು ಇಟ್ಟುಕೊಂಡಿರುತ್ತವೆ ಇಲ್ಲದಿದ್ದರೆ ಸಮಾನಮನಸ್ಕ ಗ್ಯಾರೇಜ್ ಮಾಲೀಕನೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತವೆ. ಇಲ್ಲಿ ಕಾಣುತ್ತಿರುವ ಗ್ಯಾರೇಜ್ ಮತ್ತು ಡಿಸ್ ಮ್ಯಾಂಟಲ್ ಮಾಡಿರುವ ಮಿನಿ ಟ್ರಕ್ ನೋಡಿದರೆ ನಿಮಗೆ ಗೊತ್ತಾಗುತ್ತದೆ.
ಅಂದಹಾಗೆ, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಮಜರ್ ಅಹ್ಮದ್ ಎಂಬುವನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Viral Video: ಕುದುರೆಯ ಒಂದೇ ಒದೆತಕ್ಕೆ ಹಿಂದೆ ಹಿಂದೆ ಹೋಗಿ ಜೋರಾಗಿ ಬೊಗಳುತ್ತಿದ್ದ ನಾಯಿ ಗಪ್ಚುಪ್!