AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕುದುರೆಯ ಒಂದೇ ಒದೆತಕ್ಕೆ ಹಿಂದೆ ಹಿಂದೆ ಹೋಗಿ ಜೋರಾಗಿ ಬೊಗಳುತ್ತಿದ್ದ ನಾಯಿ ಗಪ್​ಚುಪ್!

ನಾಯಿಯ ಬೊಗಳುವಿಕೆ ಕುದುರೆಗೆ ಸಿಟ್ಟು ತರಿಸಿದೆ. ಮತ್ತೆ ಸುಮ್ಮನಿರದೆ ಆ ಕುದುರೆ ಬೊಗಳುತ್ತಿರುವ ನಾಯಿ ಒಂದಕ್ಕೆ ಬಲವಾದ ಒದೆ ಕೊಟ್ಟಿದೆ. ಏಟು ತಿಂದ ನಾಯಿ ಮತ್ತೆ ತೆಪ್ಪಗೆ ಕುಳಿತದ್ದು ಅಲ್ಲಾಡಲಿಲ್ಲ.

Viral Video: ಕುದುರೆಯ ಒಂದೇ ಒದೆತಕ್ಕೆ ಹಿಂದೆ ಹಿಂದೆ ಹೋಗಿ ಜೋರಾಗಿ ಬೊಗಳುತ್ತಿದ್ದ ನಾಯಿ ಗಪ್​ಚುಪ್!
ಕುದುರೆಯ ಒಂದೇ ಒದೆತಕ್ಕೆ ನಾಯಿ ಗಪ್​ಚುಪ್!
TV9 Web
| Edited By: |

Updated on: Mar 28, 2022 | 11:07 PM

Share

ನಾಯಿಗಳು ಅನಗತ್ಯವಾಗಿ ಬೊಗಳುವುದನ್ನು ನೀವು ನೋಡಿರುತ್ತೀರಿ. ಅದು ಮನುಷ್ಯರಾಗಲಿ ಅಥವಾ ಪ್ರಾಣಿಗಲ ಮೇಲಾಗಿರಲಿ, ನಾಯಿಗಳು ಕೆಲವೊಮ್ಮೆ ಅತಿಯಾಗಿ ಬೊಗಳುತ್ತವೆ. ಅದರಲ್ಲೂ ಅಪರಿಚಿತರು ಕಂಡುಬಂದರೆ ಕೇಳುವುದೇ ಬೇಡ. ಕೆಲವು ನಾಯಿಗಳು ಬೈಕ್ ಅಥವಾ ಕಾರ್ ಇತ್ಯಾದಿ ವಾಹನಗಳ ಹಿಂದೆ ಓಡಲು ಶುರು ಮಾಡುವುದೂ ಇದೆ. ಆಗಲೂ ಬೊಗಳುತ್ತಲೇ ಇರುವುದನ್ನು ನೀವು ನೋಡಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಕೆಲವು ಅಪಘಾತ ಸಂಭವಿಸುವುದು ಕೂಡ ಇದೆ. ದ್ವಿಚಕ್ರ ವಾಹನ ಸವಾರರಿಗೆ ಇಲ್ಲಿ ಭಯ ಹೆಚ್ಚು, ನಿಲ್ಲಿಸಿದರೆ ನಾಯಿ ಕಚ್ಚಬಹುದು ಎಂದು ವೇಗವಾಗಿ ಹೋದರೆ ಸಮಸ್ಯೆ ಆಗಬಹುದು ಎಂದು. ಹೀಗೆ ಘಟನೆಗಳು ಒಂದೆರಡಲ್ಲ. ಅಷ್ಟಕ್ಕೂ ಇಲ್ಲಿ ನಾಯಿಗಳ ಬಗ್ಗೆ ಮಾತನಾಡುವುದಕ್ಕೆ ಕಾರಣವಿದೆ. ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ನಾಯಿಗಳ ಬೊಗಳುವಿಕೆ ಮತ್ತು ಪೇಚಾಟದ ಪ್ರಸಂಗ ಇದೆ.

ವೈರಲ್ ಆಗುತ್ತಿರುವ ಈ ವಿಡಿಯೋ ನಾಯಿ ಹಾಗೂ ಕುದುರೆಗೆ ಸಂಬಂಧಿಸಿದ್ದು. ಇಲ್ಲಿ ಒಂದೆರಡು ನಾಯಿಗಳು ಕುದುರೆಯ ಹಿಂದೆ ಬೊಗಳುತ್ತಲೇ ಇರುತ್ತವೆ. ಕುದುರೆಗೆ ಮತ್ತೆ ಮತ್ತೆ ಕಿರಿಕಿರಿ ಉಂಟುಮಾಡಿದೆ. ಇದರಿಂದ ಸಿಟ್ಟಾದ ಕುದುರೆ ಒಂದು ಒದೆತ ಕೊಟ್ಟು ಸುಮ್ಮನಿರುವಂತೆ ಪಾಠ ಕಲಿಸಿದೆ. ಏಟು ತಿಂದ ನಾಯಿ ತೆಪ್ಪಗೆ ಕುಳಿತುಕೊಳ್ಳುವಂತೆ ಮಾಡಿದೆ. ಈ ವಿಡಿಯೋದಲ್ಲಿ ಕುದುರೆಯ ಹಿಂದೆ ಎರಡು ನಾಯಿಗಳು ಹೇಗೆ ಬೊಗಳುತ್ತಾ ಹೋಗುತ್ತಿವೆ ಎಂದು ನೀವು ನೋಡಬಹುದು. ನಾಯಿಯ ಬೊಗಳುವಿಕೆ ಕುದುರೆಗೆ ಸಿಟ್ಟು ತರಿಸಿದೆ. ಮತ್ತೆ ಸುಮ್ಮನಿರದೆ ಆ ಕುದುರೆ ಬೊಗಳುತ್ತಿರುವ ನಾಯಿ ಒಂದಕ್ಕೆ ಬಲವಾದ ಒದೆ ಕೊಟ್ಟಿದೆ. ಏಟು ತಿಂದ ನಾಯಿ ಮತ್ತೆ ತೆಪ್ಪಗೆ ಕುಳಿತದ್ದು ಅಲ್ಲಾಡಲಿಲ್ಲ. ಆದರೆ ಮತ್ತೊಂದು ನಾಯಿ ಮಾತ್ರ ಕುದುರೆಯ ಹಿಂದೆ ಬೊಗಳುತ್ತಲೇ ಹೋಗಿದೆ.

ಇದು ತುಂಬಾ ತಮಾಷೆಯ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಕಂಡುಬಂದಿದೆ. ಕೇವಲ 8 ಸೆಕೆಂಡ್​ಗಳ ವಿಡಿಯೋ ಇದು ಈವರೆಗೆ 90 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 3 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಏಟು ತಿಂದ ನಾಯಿ ಸತ್ತು ಹೋಯಿತೇ ಎಂದೂ ಒಬ್ಬರು ಕಮೆಂಟ್ ಮಾಡಿದ್ದಾರೆ. ಅಥವಾ ನಾಯಿ ಏಟು ತಿಂದು ಪ್ರಜ್ಞೆ ತಪ್ಪಿತೆ? ಎಂದೂ ಮತ್ತೊಬ್ಬರು ಕೇಳಿದ್ದಾರೆ. ಈ ವಿಡಿಯೋವನ್ನು ನೋಡಿ ಜನರು ಅನಾವಶ್ಯಕ ಬೊಗಳುವಿಕೆಗೆ ಏಟು ತಿಂದ ಬಗ್ಗೆ ಅಥವಾ ತಿನ್ನುವ ಬಗ್ಗೆ ನೆನೆಸಿಕೊಂಡಿರಬಹುದು.

ಇದನ್ನೂ ಓದಿ: Viral Video: ಗುರುತ್ವಾಕರ್ಷಣೆ ನಿಯಮವೇ ಇಲ್ಲ ಎಂದ ನೆಟ್ಟಿಗರು; 7 ಸೆಕೆಂಡ್​ನಲ್ಲಿ ಬೆಕ್ಕು ಏನು ಮಾಡಿತು ನೋಡಿ!

ಇದನ್ನೂ ಓದಿ: Viral Video: ಕೊಳಕ್ಕೆ ಬೀಳುತ್ತಿದ್ದ ಮಗುವಿನ ಪ್ರಾಣ ಉಳಿಸಿದ ಶ್ವಾನ; ಸಾಕು ನಾಯಿಯ ಜಾಣತನಕ್ಕೆ ನೆಟ್ಟಿಗರು ಫಿದಾ