Viral Video: ಗುರುತ್ವಾಕರ್ಷಣೆ ನಿಯಮವೇ ಇಲ್ಲ ಎಂದ ನೆಟ್ಟಿಗರು; 7 ಸೆಕೆಂಡ್​ನಲ್ಲಿ ಬೆಕ್ಕು ಏನು ಮಾಡಿತು ನೋಡಿ!

ಬೆಕ್ಕು ಎಂದರೆ ಎಂತಹ ಪ್ರಾಣಿ ಎಂದು ನೀವು ತಿಳಿದೇ ಇರುತ್ತೀರಿ. ಅದರ ಸ್ವಭಾವ, ಅದರ ಆಟಾಟೋಪಗಳು ಕಂಡಿರುತ್ತೀರಿ. ಕೆಲವೊಮ್ಮೆ ಸುಮ್ಮನಿದ್ದರೆ ಇನ್ನು ಕೆಲವು ಸಲ ನಾವು ಮೂಗಿನ ಮೇಲೆ ಬೆರಳಿಡುವಂತಹ ಕೆಲಸ ಮಾಡುತ್ತವೆ.

Viral Video: ಗುರುತ್ವಾಕರ್ಷಣೆ ನಿಯಮವೇ ಇಲ್ಲ ಎಂದ ನೆಟ್ಟಿಗರು; 7 ಸೆಕೆಂಡ್​ನಲ್ಲಿ ಬೆಕ್ಕು ಏನು ಮಾಡಿತು ನೋಡಿ!
ಬೆಕ್ಕಿನ ಕಸರತ್ತು
Follow us
TV9 Web
| Updated By: ganapathi bhat

Updated on:Mar 28, 2022 | 7:01 PM

ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಲ್ಲಿ ಅಂತಹುದೇ ಒಂದು ವಿಡಿಯೋ ನೆಟ್ಟಿಗರಿಂದ ಬಹಳ ಮೆಚ್ಚುಗೆ ಪಡೆದಿದೆ. ಈ ವಿಡಿಯೋ ನೋಡಿ ನೀವೂ ಚಕಿತಗೊಳ್ಳುವುದು ಖಚಿತ. ಬೆಕ್ಕು ಎಂದರೆ ಎಂತಹ ಪ್ರಾಣಿ ಎಂದು ನೀವು ತಿಳಿದೇ ಇರುತ್ತೀರಿ. ಅದರ ಸ್ವಭಾವ, ಅದರ ಆಟಾಟೋಪಗಳು ಕಂಡಿರುತ್ತೀರಿ. ಕೆಲವೊಮ್ಮೆ ಸುಮ್ಮನಿದ್ದರೆ ಇನ್ನು ಕೆಲವು ಸಲ ನಾವು ಮೂಗಿನ ಮೇಲೆ ಬೆರಳಿಡುವಂತಹ ಕೆಲಸ ಮಾಡುತ್ತವೆ. ಇಲ್ಲಿ ಅಂತಹ ಅಚ್ಚರಿಯ ಘಟನೆ ನಡೆದಿದೆ. ಇದರಲ್ಲಿ ಬೆಕ್ಕು ಗುರುತ್ವಾಕರ್ಷಣೆಯ ನಿಯಮವನ್ನೇ ಸುಳ್ಳು ಮಾಡಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬೆಕ್ಕು ಕೆಳಗಿನಿಂದ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ನೀವು ನೋಡಬಹುದು. ಬೆಕ್ಕಿನ ಈ ಕೃತ್ಯವು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಈ ವಿಡಿಯೋ ನೋಡಿ ಜನ ಇದನ್ನು ಸ್ಪೈಡರ್ ಕ್ಯಾಟ್ ಎಂದು ಕರೆದಿದ್ದಾರೆ. ನ್ಯೂಟನ್​ನ ಗುರುತ್ವಾಕರ್ಷಣೆಯ ನಿಯಮ ಬೆಕ್ಕಿಗೆ ಇಲ್ಲವೇ ಎಂದು ಕೇಳಿದ್ದಾರೆ.

ಬೆಕ್ಕಿನ ಕಸರತ್ತಿನ ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಬ್ಯುಟೆಂಗೆಬೀಡೆನ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸುದ್ದಿ ಬರೆಯುವ ವೇಳೆಗಾಗಲೇ ಸುಮಾರು 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಇದಕ್ಕೆ ನೆಟ್ಟಿಗರು ತಮ್ಮದೇ ಪ್ರತಿಕ್ರಿಯೆ, ವ್ಯಾಖ್ತಾನ ನೀಡುತ್ತಿದ್ದಾರೆ.

ಈ ಬೆಕ್ಕು ನಿಂಜಾ ಬಳಿ ಕಸರತ್ತು ಕಲಿತಿರಬೇಕು ಇದೆಲ್ಲವೂ ನಿಂಜಾ ತಂತ್ರದಿಂದ ನಡೆಯುತ್ತಿದೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ಇದು ಗುರುತ್ವಾಕರ್ಷಣೆಯ ನಿಯಮವನ್ನೇ ಮುರಿದುಬಿಟ್ಟಿದೆ ಎಂದು ಕಮೆಂಟ್ ಮಾಡಿದ್ದಾರೆ. ನಮ್ಮ ಮನೆಯ ಬೆಕ್ಕು ಕೂಡ ಈ ವಿಡಿಯೋವನ್ನು ತುಂಬಾ ಇಷ್ಟಪಟ್ಟು ನೋಡುತ್ತಿದೆ ಎಂದು ಪೆಟ್ ಲವರ್ ಒಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಆನೆಗಳ ಹಿಂಡನ್ನು ಕಾಡಿಗಟ್ಟಲು ಮೈಸೂರಿನಿಂದ ಚಿಕ್ಕಮಗಳೂರಿಗೆ ಬಂದ ದಸರಾ ಆನೆಗಳು; ವಿಡಿಯೋ ನೋಡಿ

ಇದನ್ನೂ ಓದಿ: ಪತ್ನಿ ಬಗ್ಗೆ ಜೋಕ್​ ಮಾಡಿದ್ದಕ್ಕೆ ಆಸ್ಕರ್​ ವೇದಿಕೆ ಮೇಲೆ ನಟನ ಕೆನ್ನೆಗೆ ಬಾರಿಸಿದ ವಿಲ್​ ಸ್ಮಿತ್​; ವಿಡಿಯೋ ವೈರಲ್​

Published On - 6:59 pm, Mon, 28 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ