ಪತ್ನಿ ಬಗ್ಗೆ ಜೋಕ್ ಮಾಡಿದ್ದಕ್ಕೆ ಆಸ್ಕರ್ ವೇದಿಕೆ ಮೇಲೆ ನಟನ ಕೆನ್ನೆಗೆ ಬಾರಿಸಿದ ವಿಲ್ ಸ್ಮಿತ್; ವಿಡಿಯೋ ವೈರಲ್
Will Smith | Chris Rock: ಪತ್ನಿ ಜೇಡಾ ಪಿಂಕೆಟ್ ಸ್ಮಿತ್ ಬಗ್ಗೆ ಜೋಕ್ ಮಾಡಿದ್ದಕ್ಕಾಗಿ ಕ್ರಿಸ್ ರಾಕ್ ಕೆನ್ನೆಗೆ ವಿಲ್ ಸ್ಮಿತ್ ಬಾರಿಸಿದ್ದಾರೆ. ಇದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಟ ವಿಲ್ ಸ್ಮಿತ್ (Will Smith) ಅವರು ಎರಡು ಕಾರಣಕ್ಕಾಗಿ ಸುದ್ದಿ ಆಗಿದ್ದಾರೆ. ‘ಕಿಂಗ್ ರಿಚರ್ಡ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ಹಾಗೆಯೇ, ಹಾಸ್ಯ ನಟನ ಕೆನ್ನೆಗೆ ಬಾರಿಸುವ ಮೂಲಕ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎಂದಿನಂತೆ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಖುಷಿಖುಷಿಯಾಗಿ ನಡೆಯುತ್ತಿತ್ತು. ವೇದಿಕೆ ಮೇಲೆ ಹಾಸ್ಯ ನಟ ಕ್ರಿಸ್ ರಾಕ್ ಮಾತನಾಡುತ್ತಿದ್ದರು. ಅವರ ಮಾತು ವಿಲ್ ಸ್ಮಿತ್ ಪತ್ನಿ ಜೇಡಾ ಪಿಂಕೆಟ್ ಸ್ಮಿತ್ (Jada Pinkett Smith) ಕಡೆಗೆ ತಿರುಗಿತು. ಜೇಡಾ ಪಿಂಕೆಟ್ ಸ್ಮಿತ್ ಬಗ್ಗೆ ಅವರು ಜೋಕ್ ಮಾಡಿದರು. ಅದನ್ನು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು. ಒಂದು ಕ್ಷಣ ವಿಲ್ ಸ್ಮಿತ್ ಕೂಡ ನಕ್ಕರು. ಆದರೆ ಅಲ್ಲಿ ಮರುಕ್ಷಣ ನಡೆದಿದ್ದು ನಿಜಕ್ಕೂ ಶಾಕಿಂಗ್. ಕೂಡಲೇ ವೇದಿಕೆ ಏರಿದ ವಿಲ್ ಸ್ಮಿತ್ ಅವರು ಕ್ರಿಸ್ ರಾಕ್ (Chris Rock) ಮುಖಕ್ಕೆ ಬಾರಿಸಿದರು. ಇಡೀ ಸಭಾಂಗಣದಲ್ಲಿ ಮೌನ ಆವರಿಸಿತು. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್ ರಾಕ್ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ಜೇಡಾ ಪಿಂಕೆಟ್ ಸ್ಮಿತ್ ಬಗ್ಗೆ ಕಾಮಿಡಿ ಮಾಡಿದರು. ಅದು ವಿಲ್ ಸ್ಮಿತ್ ಅವರಿಗೆ ಸರಿ ಎನಿಸಲಿಲ್ಲ. ಪತ್ನಿಯ ಬಗ್ಗೆ ಜೋಕ್ ಮಾಡಿದ್ದಕ್ಕಾಗಿ ಕ್ರಿಸ್ ರಾಕ್ ಕೆನ್ನೆಗೆ ವಿಲ್ ಸ್ಮಿತ್ ಬಾರಿಸಿದರು. ಇದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.
ಇಡೀ ಸನ್ನಿವೇಶ ಸ್ಕ್ರಿಪ್ಟೆಡ್ ಇರಬಹುದಾ? ವೇದಿಕೆಯಲ್ಲಿ ಬೇಕಂತಲೇ ಈ ರೀತಿ ನಾಟಕ ಮಾಡಿರಬಹುದಾ ಎಂಬ ಪ್ರಶ್ನೆ ಕೂಡ ಜನರ ಮನದಲ್ಲಿ ಮೂಡಿದೆ. ಒಟ್ಟಿನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ರೀತಿ ಆಗಿದ್ದರ ಬಗ್ಗೆ ಸ್ವತಃ ವಿಲ್ ಸ್ಮಿತ್ ಅವರಿಗೂ ಬೇಸರ ಇದೆ. ಈಗ ಅವರು ಕ್ಷಮೆ ಕೇಳಿದ್ದಾರೆ. ‘ನಾನು ಅಕಾಡೆಮಿಯ ಕ್ಷಮೆ ಕೇಳುತ್ತೇನೆ. ನಾಮನಿರ್ದೇಶಕಗೊಂಡ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ’ ಎಂದು ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಕೂಡ ವೈರಲ್ ಆಗುತ್ತಿದೆ.
#badboys3 #gijane2 #willsmith #chrisrock #oscars #besttvever
Can’t believe what I just saw live on screen pic.twitter.com/YiijPRQENt
— Guy Springthorpe (the pistol slug) (@GuySpringthorpe) March 28, 2022
‘ದಿ ಐಸ್ ಆಫ್ ಟ್ಯಾಮಿ ಫೇ’ ಸಿನಿಮಾದಲ್ಲಿನ ನಟನೆಗಾಗಿ ಜೆಸ್ಸಿಕಾ ಚಾಸ್ಟೇನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು (ರೆಜಿನಾ ಹಾಲ್, ಎಮಿ ಶೂಮಾರ್, ವೊಂಡಾ ಸ್ಕೈಸ್) ಆಸ್ಕರ್ ಸಮಾರಂಭವನ್ನು ಹೋಸ್ಟ್ ಮಾಡಿದ್ದಾರೆ. ಶಾನ್ ಹೆಡರ್ ನಿರ್ದೇಶನದ ‘ಕೋಡಾ’ ಚಿತ್ರವು ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ:
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್’ ಪ್ರಿಯಾಂಕಾ ಚೋಪ್ರಾ
ಆಸ್ಕರ್ ರೇಸ್ನಿಂದ ‘ಜೈ ಭೀಮ್’ ಚಿತ್ರ ಹೊರಬಿದ್ದರೂ ಸೂರ್ಯ ಫ್ಯಾನ್ಸ್ ಖುಷಿ ಕಡಿಮೆ ಆಗಿಲ್ಲ; ಕಾರಣ ಏನು?
Published On - 11:53 am, Mon, 28 March 22