ಆಸ್ಕರ್​ ರೇಸ್​ನಿಂದ ‘ಜೈ ಭೀಮ್​’ ಚಿತ್ರ ಹೊರಬಿದ್ದರೂ ಸೂರ್ಯ ಫ್ಯಾನ್ಸ್​ ಖುಷಿ ಕಡಿಮೆ ಆಗಿಲ್ಲ; ಕಾರಣ ಏನು?

‘ಆಸ್ಕರ್​ ರೇಸ್​ನಿಂದ ಜೈ ಭೀಮ್​ ಚಿತ್ರ ಹೊರಬಿದ್ದಿರಬಹುದು. ಆದರೆ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಇದು ಯಾವಾಗಲೂ ನಂಬರ್​ ಒನ್​ ಆಗಿರಲಿದೆ’ ಎಂದು ಸೂರ್ಯ ಫ್ಯಾನ್ಸ್​ ಹೆಮ್ಮೆ ಪಡುತ್ತಿದ್ದಾರೆ.

ಆಸ್ಕರ್​ ರೇಸ್​ನಿಂದ ‘ಜೈ ಭೀಮ್​’ ಚಿತ್ರ ಹೊರಬಿದ್ದರೂ ಸೂರ್ಯ ಫ್ಯಾನ್ಸ್​ ಖುಷಿ ಕಡಿಮೆ ಆಗಿಲ್ಲ; ಕಾರಣ ಏನು?
ಸೂರ್ಯ
Follow us
TV9 Web
| Updated By: ಮದನ್​ ಕುಮಾರ್​

Updated on: Feb 10, 2022 | 8:16 AM

ಪ್ರತಿ ಬಾರಿಯಂತೆ ಈ ವರ್ಷವೂ ಆಸ್ಕರ್​ (Oscars 2022) ಅಖಾಡದಲ್ಲಿ ನೂರಾರು ಸಿನಿಮಾಗಳು ಹಣಾಹಣಿ ನಡೆಸುತ್ತಿವೆ. ಭಾರತದಿಂದ ನಾಮನಿರ್ದೇಶನಗೊಂಡಿದ್ದ ‘ಜೈ ಭೀಮ್​’ (Jai Bhim Movie) ಸಿನಿಮಾ ಬಗ್ಗೆ ಸಿನಿಪ್ರಿಯರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದರು. ಸೂರ್ಯ (Suriya) ಅಭಿನಯದ ಈ ಸಿನಿಮಾ ಸಾಮಾಜಿಕ ಕಳಕಳಿಯ ಹಥಾಹಂದರ ಹೊಂದಿದೆ. ಒಟಿಟಿಯಲ್ಲಿ ರಿಲೀಸ್​ ಆಗಿ ಜನಮೆಚ್ಚುಗೆ ಗಳಿಸಿದ ಈ ಸಿನಿಮಾ ಈಗ ಆಸ್ಕರ್​ ರೇಸ್​ನಿಂದ ಹೊರಬಿದ್ದಿದೆ. ಅಂತಿಮ ಸುತ್ತಿಗೆ ಆಯ್ಕೆ ಆಗಲು ‘ಜೈ ಭೀಮ್​’ ವಿಫಲವಾಗಿದೆ. ಈ ಬಾರಿಯಾದರೂ ಭಾರತಕ್ಕೆ ಒಂದು ಆಸ್ಕರ್​ ಪ್ರಶಸ್ತಿ ಸಿಗಲಿದೆ ಎಂದು ಕನಸು ಕಾಣುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ. ಆದರೂ ಕೂಡ ಸೂರ್ಯ ಅಭಿಮಾನಿಗಳ ಖುಷಿ ಕಡಿಮೆ ಆಗಿಲ್ಲ. ಈ ಸಿನಿಮಾ ಆಸ್ಕರ್​ ಗೆಲ್ಲದೇ ಇರಬಹುದು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ ಎಂಬ ಕಾರಣಕ್ಕೆ ಸೂರ್ಯ ಫ್ಯಾನ್ಸ್​ ಹೆಮ್ಮೆ ಪಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸೂರ್ಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

‘ಜೈ ಭೀಮ್​’ ಚಿತ್ರಕ್ಕೆ ಆಸ್ಕರ್​ ಗೆಲ್ಲುವ ಎಲ್ಲ ಸಾಮರ್ಥ್ಯ ಇದೆ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಂತ ಈ ಸಿನಿಮಾ ಮಾಡಿದ ಸಾಧನೆ ಸಣ್ಣದೇನಲ್ಲ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಕೆಲವು ಸೆಲೆಬ್ರಿಟಿಗಳು ಈ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ‘ಆಸ್ಕರ್​ ಯೂಟ್ಯೂಬ್​ ಲೈಬ್ರರಿ’ಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಿನಿಮಾ ಎಂಬ ಖ್ಯಾತಿಗೆ ‘ಜೈ ಭೀಮ್​’ ಪಾತ್ರವಾಗಿದೆ. ಈ ಬಗ್ಗೆ ಸೂರ್ಯ ಫ್ಯಾನ್ಸ್​ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ.

‘ಆಸ್ಕರ್​ನ ಅತ್ಯುತ್ತಮ ಸಿನಿಮಾ ಕ್ಯಾಟಗರಿ ರೇಸ್​ನಿಂದ ಜೈ ಭೀಮ್​ ಸಿನಿಮಾ ಹೊರಬಿದ್ದಿರಬಹುದು. ಆದರೆ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಇದು ಯಾವಾಗಲೂ ನಂಬರ್​ ಒನ್​ ಆಗಿರಲಿದೆ. ಇದು ನಮ್ಮ ಹೆಮ್ಮೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್​ ಮಾಡಿದ್ದಾರೆ. ಸೂರ್ಯ ನಟನೆಯ ಸಿನಿಮಾಗಳ ಕೆಲವು ಸ್ಫೂರ್ತಿದಾಯಕ ಡೈಲಾಗ್​ಗಳನ್ನು ಫ್ಯಾನ್ಸ್​ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಸಿನಿಮಾದಲ್ಲಿ ಸೂರ್ಯ ಇನ್ನಷ್ಟು ಸಾಧನೆ ಮಾಡುತ್ತಾರೆ ಎಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೆನ್ನು ತಟ್ಟುತ್ತಿದ್ದಾರೆ.

2021ರ ನವೆಂಬರ್​ನಲ್ಲಿ ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ‘ಜೈ ಭೀಮ್​’ ಚಿತ್ರ ತೆರೆಕಂಡಿತು. ರಿಯಲ್​ ಲೈಫ್​ ಘಟನೆಯನ್ನು ಆಧರಿಸಿ ತಯಾರಾದ ಈ ಸಿನಿಮಾದಲ್ಲಿ ಸೂರ್ಯ ಲಾಯರ್​ ಪಾತ್ರ ಮಾಡಿದ್ದಾರೆ. ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆಯಾದ ಈ ಸಿನಿಮಾ ಕುರಿತು ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಟಿ.ಜೆ. ಜ್ಞಾನವೇಲ್​ ನಿರ್ದೇಶನದ ಈ ಚಿತ್ರ ಹಲವು ಆಯಾಮಗಳಲ್ಲಿ ಜನಮನ ಗೆದ್ದಿದೆ.

ಇದನ್ನೂ ಓದಿ:

Oscar Nominations 2022: ಆಸ್ಕರ್​ ಫೈನಲ್ ರೇಸ್​ನಲ್ಲಿ ಯಾರೆಲ್ಲಾ? ಇಲ್ಲಿದೆ ಪೂರ್ಣ ಪಟ್ಟಿ

ಆತ್ಮಹತ್ಯೆ ಮಾಡಿಕೊಂಡ ಆಸ್ಕರ್​ ಪುರಸ್ಕೃತ ನಟಿಯ ಮಗ; ರೆಜೀನಾ ಕಿಂಗ್​ ಬಾಳಿನಲ್ಲಿ ಆವರಿಸಿತು ಕತ್ತಲು

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್