Oscar Nominations 2022: ಆಸ್ಕರ್ ಫೈನಲ್ ರೇಸ್ನಲ್ಲಿ ಯಾರೆಲ್ಲಾ? ಇಲ್ಲಿದೆ ಪೂರ್ಣ ಪಟ್ಟಿ
The Academy Awards 2022: 94ನೇ ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ತಲುಪಿದ ಆಯ್ಕೆಗಳನ್ನು ಘೋಷಿಸಲಾಗಿದೆ. ಪಟ್ಟಿಯಲ್ಲಿ ಭಾರತದ ಒಂದು ಸಾಕ್ಷ್ಯಚಿತ್ರ ಸ್ಥಾನ ಪಡೆದಿದೆ. ‘ದಿ ಪವರ್ ಆಫ್ ದಿ ಡಾಗ್’ ಮತ್ತು ‘ಡ್ಯೂನ್’ ಹಲವು ವಿಭಾಗಗಳಲ್ಲಿ ನಾಮಾಂಕಿತಗೊಂಡಿವೆ. ಪೂರ್ಣ ಪಟ್ಟಿ ಇಲ್ಲಿದೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 94 ನೇ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶಿತರನ್ನು (Oscars Nominations 2022) ಇಂದು (ಮಂಗಳವಾರ) ಸಂಜೆ ಘೋಷಿಸಲಾಯಿತು. ಬ್ಲ್ಯಾಕ್-ಇಶ್ ಸ್ಟಾರ್ ಟ್ರೇಸಿ ಎಲ್ಲಿಸ್ ರಾಸ್ ಮತ್ತು ನಟ ಲೆಸ್ಲಿ ಜೋರ್ಡಾನ್ ಅಂತಿಮ ಹಂತಕ್ಕೆ ತಲುಪಿದ ನಾಮನಿರ್ದೇಶನಗೊಂಡ ಚಿತ್ರಗಳ ಹೆಸರನ್ನು ಘೋಷಿಸಿದರು. ನಾಮನಿರ್ದೇಶನಗೊಂಡ ಪಟ್ಟಿಯಲ್ಲಿನ ವಿಜೇತರನ್ನು ಮಾರ್ಚ್ 27ರಂದು ಲಾಸ್ ಏಂಜಲೀಸ್‌ನಲ್ಲಿ ಘೋಷಿಸಲಾಗುತ್ತದೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಲವು ಆಯ್ಕೆಗಳು ಸರ್ಪ್ರೈಸ್ ಆಗಿ ಪಟ್ಟಿಗೆ ಎಂಟ್ರಿ ಕೊಟ್ಟಿವೆ. ಅವುಗಳಲ್ಲಿ ಆಡಮ್ ಮೆಕೆ ಅವರ ‘ಡೋಂಟ್ ಲುಕ್ ಅಪ್’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಾಮಾಂಕಿತಗೊಂಡಿರುವುದು ಹಾಗೂ ಭೂತಾನ್ ಚಲನಚಿತ್ರ ‘ಲುನಾನಾ: ಎ ಯಾಕ್ ಇನ್ ದಿ ಕ್ಲಾಸ್‌ರೂಮ್’ ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಚಿತ್ರಕ್ಕೆ ನಾಮನಿರ್ದೇಶನಗೊಂಡಿರುವುದು ಪ್ರಮುಖ ಹೆಸರುಗಳಾಗಿವೆ. ನೆಟ್‌ಫ್ಲಿಕ್ಸ್ ಚಲನಚಿತ್ರ ‘ದಿ ಪವರ್ ಆಫ್ ದಿ ಡಾಗ್’ (The Power of Dog) ಈ ವರ್ಷದ ಆಸ್ಕರ್ ನಾಮನಿರ್ದೇಶನಗಳಲ್ಲಿ 12 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಅಗ್ರಸ್ಥಾನದಲ್ಲಿದೆ. ಸೈ-ಫೈ ಚಿತ್ರ ‘ಡ್ಯೂನ್’ (Dune) 10 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದು, ಪ್ರಶಸ್ತಿ ರೇಸ್ನಲ್ಲಿರುವ ಮತ್ತೊಂದು ಮಹತ್ತರ ಚಿತ್ರವಾಗಿದೆ. ಭಾರತದ ‘ರೈಟಿಂಗ್ ವಿತ್ ಫೈರ್’ (Write With Fire) ಸಾಕ್ಷ್ಯಚಿತ್ರ ವಿಭಾಗದಲ್ಲಿ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡಿದೆ. ‘ಜೈ ಭೀಮ್’ ಪ್ರಶಸ್ತಿ ಸುತ್ತು ತಲುಪಿಲ್ಲ.
ಈ ವರ್ಷ ಪ್ರಶಸ್ತಿ ಸುತ್ತಿಗೆ ನಾಮನಿರ್ದೇಶನಗೊಂಡ ಆಯ್ಕೆಗಳ ಪಟ್ಟಿ ಇಲ್ಲಿದೆ:
ಅತ್ಯುತ್ತಮ ಚಿತ್ರ:
ಬೆಲ್‌ಫಾಸ್ಟ್ (Belfast) ಕೋಡಾ (CODA) ಡೋನ್ಟ್ ಲುಕ್ ಅಪ್ (Don’t Look Up) ಟ್ರೈವ್ ಮೈ ಕಾರ್ (Drive My Car) ಡ್ಯೂನ್ (Dune) ಕಿಂಗ್ ರಿಚರ್ಡ್ (King Richard) ಲಿಕೋರೈಸ್ ಪಿಜ್ಜಾ (Licorice Pizza) ನೈಟ್ಮೇರ್ ಅಲೆ (Nightmare Alley) ದಿ ಪವರ್ ಆಫ್ ದಿ ಡಾಗ್ (The Power of the Dog) ವೆಸ್ಟ್ ಸೈಡ್ ಸ್ಟೋರಿ (West Side Story)
ಅತ್ಯುತ್ತಮ ನಿರ್ದೇಶಕ:
ಪಾಲ್ ಥಾಮಸ್ ಆಂಡರ್ಸನ್ (ಲೈಕೋರೈಸ್ ಪಿಜ್ಜಾ) ಕೆನ್ನೆತ್ ಬ್ರನಾಗ್ (ಬೆಲ್‌ಫಾಸ್ಟ್) ಜೇನ್ ಕ್ಯಾಂಪಿಯನ್ (ದಿ ಪವರ್ ಆಫ್ ದಿ ಡಾಗ್) ಸ್ಟೀವನ್ ಸ್ಪೀಲ್ಬರ್ಗ್ (ವೆಸ್ಟ್ ಸೈಡ್ ಸ್ಟೋರಿ) ರೈಸುಕೆ ಹಮಗುಚಿ (ಡ್ರೈವ್ ಮೈ ಕಾರ್)
ಅತ್ಯುತ್ತಮ ನಟ:
ಜೇವಿಯರ್ ಬಾರ್ಡೆಮ್ (ಬಿಯಿಂಗ್ ದಿ ರಿಕಾರ್ಡೋಸ್) ಬೆನೆಡಿಕ್ಟ್ ಕಂಬರ್ಬ್ಯಾಚ್ (ದಿ ಪವರ್ ಆಫ್ ದಿ ಡಾಗ್) ಆಂಡ್ರ್ಯೂ ಗಾರ್ಫೀಲ್ಡ್ (ಟಿಕ್, ಟಿಕ್ … ಬೂಮ್!) ವಿಲ್ ಸ್ಮಿತ್ (ಕಿಂಗ್ ರಿಚರ್ಡ್) ಡೆನ್ಜೆಲ್ ವಾಷಿಂಗ್ಟನ್ (ದಿ ಟ್ರ್ಯಾಜಡಿ ಆಫ್ ಮ್ಯಾಕ್‌ಬೆತ್)
ಅತ್ಯುತ್ತಮ ನಟಿ:
ಜೆಸ್ಸಿಕಾ ಚಸ್ಟೈನ್ (ದಿ ಐಸ್ ಆಫ್ ಟಮ್ಮಿ ಫಾಯೆ) ಒಲಿವಿಯಾ ಕೋಲ್ಮನ್ (ದಿ ಲಾಸ್ಟ್ ಡಾಟರ್) ಪೆನೆಲೋಪ್ ಕ್ರೂಜ್ (ಪ್ಯಾರಲಲ್ ಮದರ್ಸ್) ನಿಕೋಲ್ ಕಿಡ್ಮನ್ (ಬೀಯಿಂಗ್ ರಿಕಾರ್ಡೋಸ್) ಕ್ರಿಸ್ಟನ್ ಸ್ಟೀವರ್ಟ್ (ಸ್ಪೆನ್ಸರ್)
ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಚಿತ್ರ:
ಡ್ರೈವ್ ಮೈ ಕಾರ್(ಜಪಾನ್) ಫ್ಲೀ (ಡೆನ್ಮಾರ್ಕ್) ದಿ ಹ್ಯಾಂಡ್ ಆಫ್ ಗಾಡ್ (ಇಟಲಿ) ಲುನಾನಾ: ಎ ಯಾಕ್ ಇನ್ ದಿ ಕ್ಲಾಸ್ ರೂಮ್ (ಭೂತಾನ್) ದಿ ವರ್ಸ್ಟ್ ಪರ್ಸನ್ ಇನ್ ದಿ ವರ್ಲ್ಡ್ (ನಾರ್ವೆ)
ಅತ್ಯುತ್ತಮ ಸಾಕ್ಷ್ಯಚಿತ್ರ:
ಅಸೆನ್ಶನ್ ಅಟ್ಟಿಕಾ ಫ್ಲೀ ಸಮ್ಮರ್ ಆಫ್ ಸೋಲ್ ರೈಟಿಂಗ್ ವಿತ್ ಫೈರ್
ಸಂಪೂರ್ಣ ಪಟ್ಟಿ ಇಲ್ಲಿದೆ:
ಇದನ್ನೂ ಓದಿ:
Oscars 2022 Nominations: ಆಸ್ಕರ್ ನಾಮನಿರ್ದೇಶನ ಪಟ್ಟಿ ಪ್ರಕಟ; ಪ್ರಶಸ್ತಿ ರೇಸ್ನಲ್ಲಿದೆ ಭಾರತದ ಈ ಡಾಕ್ಯುಮೆಂಟರಿ!
Alia Bhatt: ರಿಲೀಸ್ಗೂ ಮುನ್ನವೇ ‘ಗಂಗೂಬಾಯಿ ಕಾಠಿಯಾವಾಡಿ’ ವಿರುದ್ಧ ಆಕ್ರೋಶದ ಸುರಿಮಳೆ; ಕಾರಣ ಒಂದೆರಡಲ್ಲ!