Oscars 2022: ಆಸ್ಕರ್​​​ ಪ್ರಶಸ್ತಿಗಳಿಗೆ ಇಂದು ನಾಮನಿರ್ದೇಶನ; ಎಷ್ಟು ಗಂಟೆಗೆ? ವೀಕ್ಷಿಸೋದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

Oscar 2022 Nominations: 94ನೇ ಆಸ್ಕರ್ ಪ್ರಶಸ್ತಿಗಳಿಗೆ ಇಂದು ನಾಮ ನಿರ್ದೇಶನ ನಡೆಯಲಿದೆ. ಸಂಭಾವ್ಯ ಪಟ್ಟಿ, ನಾಮನಿರ್ದೇಶನ ಮಾಡುವ ಸಮಯ, ಆಯ್ಕೆಯಾಗಬಹುದಾದ ಭಾರತೀಯ ಚಿತ್ರಗಳು, ಪ್ರಶಸ್ತಿ ಘೋಷಣೆಯ ದಿನಾಂಕ.. ಮೊದಲಾದವುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Oscars 2022: ಆಸ್ಕರ್​​​ ಪ್ರಶಸ್ತಿಗಳಿಗೆ ಇಂದು ನಾಮನಿರ್ದೇಶನ; ಎಷ್ಟು ಗಂಟೆಗೆ? ವೀಕ್ಷಿಸೋದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Feb 08, 2022 | 2:19 PM

ಕೊರೊನಾ ಸಾಂಕ್ರಾಮಿಕವು ವಿಶ್ವದಲ್ಲಿ ಕಾಣಿಸಿಕೊಂಡ ನಂತರ ಆಸ್ಕರ್ ಪ್ರಶಸ್ತಿಯ (Oscar Awards) ಸಮಯ- ಸಂದರ್ಭಗಳು ತುಸು ಬದಲಾಗಿವೆ. ಅಂತಿಮವಾಗಿ 94ನೇ ಅಕಾಡೆಮಿ ಪ್ರಶಸ್ತಿಗಳಿಗೆ ಇಂದು (ಮಂಗಳವಾರ, ಫೆ.08) ನಾಮನಿರ್ದೇಶನಗಳು (Oscar 2022 Nominations) ನಡೆಯಲಿವೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 94 ನೇ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶಿತರನ್ನು ಪೆಸಿಫಿಕ್ ಸಮಯ 5:18 ಕ್ಕೆ (ಭಾರತೀಯ ಕಾಲಮಾನ ಸಂಜೆ 6:48) ಘೋಷಿಸಲಾಗುತ್ತದೆ. ಬ್ಲ್ಯಾಕ್-ಇಶ್ ಸ್ಟಾರ್ ಟ್ರೇಸಿ ಎಲ್ಲಿಸ್ ರಾಸ್ ಮತ್ತು ನಟ ಲೆಸ್ಲಿ ಜೋರ್ಡಾನ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ. ಎಲ್ಲಾ 23 ಅಕಾಡೆಮಿ ಪ್ರಶಸ್ತಿ ವಿಭಾಗಗಳಲ್ಲಿ 2022 ನಾಮನಿರ್ದೇಶಿತರನ್ನು ಇಂದು ಘೋಷಿಸಲಾಗುತ್ತದೆ. ಪ್ರಕಟಣೆಯನ್ನು Oscar.com, Oscars.org ಮತ್ತು ಚಲನಚಿತ್ರ ಅಕಾಡೆಮಿಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ (ಟ್ವಿಟರ್, ಯೂಟ್ಯೂಬ್ ಮತ್ತು ಫೇಸ್‌ಬುಕ್) ವೀಕ್ಷಿಸಬಹುದು. ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನ ಇಂದು ನಡೆದರೆ, ಪ್ರಶಸ್ತಿ ಘೋಷಣೆ ಯಾವಾಗ? ಇಂದು ಯಾರೆಲ್ಲಾ ನಟರು, ಚಿತ್ರಗಳು ಆಸ್ಕರ್​ ರೇಸ್​ನಲ್ಲಿ ಕಾಣಿಸಿಕೊಳ್ಳಬಹುದು? ಈ ಕುರಿತ ಮಾಹಿತಿ ಇಲ್ಲಿದೆ.

View this post on Instagram

A post shared by The Academy (@theacademy)

ಆಸ್ಕರ್ 2022r ಪ್ರಶಸ್ತಿಗಳಿಗೆ ಯಾವಾಗ ನಾಮನಿರ್ದೇಶನಗಳನ್ನು ಘೋಷಿಸಲಾಗುತ್ತದೆ? 94ನೇ ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನಗಳನ್ನು ಇಂದು (ಮಂಗಳವಾರ) ಸಂಜೆ ಭಾರತೀಯ ಕಾಲಮಾಣ 6.30ಕ್ಕೆ ಪ್ರಕಟಿಸಲಾಗುವುದು.

ಆಸ್ಕರ್ 2022 ನಾಮನಿರ್ದೇಶನಗಳನ್ನು ವೀಕ್ಷಿಸುವುದು ಹೇಗೆ? ಆಸ್ಕರ್ 2022 ನಾಮನಿರ್ದೇಶನಗಳನ್ನು ಲೈವ್ ಸ್ಟ್ರೀಮ್ ಮೂಲಕ ಘೋಷಿಸಲಾಗುತ್ತದೆ. ಇದನ್ನು ನೀವು Oscars.org, ABC, YouTube, Twitter ಮತ್ತು Facebook ನಲ್ಲಿ ವೀಕ್ಷಿಸಬಹುದು.

ಆಸ್ಕರ್ 2022 ಪ್ರಶಸ್ತಿ ಸಮಾರಂಭ ಯಾವಾಗ? ಆಸ್ಕರ್ ನಾಮನಿರ್ದೇಶನಗಳನ್ನು ಮಂಗಳವಾರ ಪ್ರಕಟಿಸಲಾಗುವುದು. ಆದರೆ ವಿಜೇತರನ್ನು ಮಾರ್ಚ್ 27 ರಂದು ನಡೆಯುವ ಸಮಾರಂಭದಲ್ಲಿ ಘೋಷಿಸಲಾಗುತ್ತದೆ.

ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಯಾವೆಲ್ಲಾ ಚಿತ್ರಗಳು ನಾಮನಿರ್ದೇಶನಗೊಳ್ಳಬಹುದು? ಜೇನ್ ಕ್ಯಾಂಪಿಯನ್ ಅವರ ದಿ ಪವರ್ ಆಫ್ ದಿ ಡಾಗ್, ಕೆನ್ನೆತ್ ಬ್ರನಾಗ್ ಅವರ ಬೆಲ್‌ಫಾಸ್ಟ್ ಮತ್ತು ರೆನಾಲ್ಡೊ ಮಾರ್ಕಸ್ ಗ್ರೀನ್ ಅವರ ಟೆನಿಸ್ ಬಯೋಪಿಕ್ ಕಿಂಗ್ ರಿಚರ್ಡ್ ಅತ್ಯುತ್ತಮ ಚಿತ್ರಗಳ ವಿಭಾಗಕ್ಕೆ ನಾಮನಿರ್ದೇಶನವಾಗುವ ಪಡೆಯುವ ನಿರೀಕ್ಷೆ ಇದೆ. ಸ್ಟೀವನ್ ಸ್ಪೀಲ್‌ಬರ್ಗ್‌ನ ವೆಸ್ಟ್ ಸೈಡ್ ಸ್ಟೋರಿ ರಿಮೇಕ್ ಮತ್ತು ಪಾಲ್ ಥಾಮಸ್ ಆಂಡರ್ಸನ್‌ರ ಲೈಕೋರೈಸ್ ಪಿಜ್ಜಾ, ಡೆನಿಸ್ ವಿಲ್ಲೆನ್ಯೂವ್‌ ಅವರ ಸ್ಪೆಕ್ಟ್ಯಾಕಲ್ ಡ್ಯೂನ್‌, ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಮೊದಲಾದವುಗಳು ಪ್ರಶಸ್ತಿ ರೇಸ್​ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ನೆಟ್​ಫ್ಲಿಕ್ಸ್​​​ನ ಮೂರು ಚಿತ್ರಗಳು ಪ್ರಶಸ್ತಿ ರೇಸ್​​ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಪ್ರಶಸ್ತಿ ರೇಸ್​ನಲ್ಲಿ ಭಾರತದ ಚಿತ್ರಗಳು: ತಮಿಳು ಚಿತ್ರ ‘ಕೂಳಂಗಳ್’ ಅಧಿಕೃತವಾಗಿ ಆಸ್ಕರ್ ರೇಸ್​ಗೆ ‘ಅಂತಾರಾಷ್ಟ್ರೀಯ ಚಲನಚಿತ್ರ’ ವಿಭಾಗದಲ್ಲಿ ಎಂಟ್ರಿ ಪಡೆದಿದ್ದ ಭಾರತದ ಚಿತ್ರ. ಆದರೆ ಅದು ಈಗ ಪ್ರಶಸ್ತಿ ರೇಸ್​ನಲ್ಲಿಲ್ಲ. ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ರೈಟಿಂಗ್ ವಿತ್ ಫೈರ್’ ನಾಮನಿರ್ದೇಶನವಾಗುವ ರೇಸ್​ನಲ್ಲಿದೆ. ‘ಜೈ ಭೀಮ್’ ಹಾಗೂ ‘ಮರಕ್ಕಾರ್: ಅರಬ್ಬೀ ಕಡಲಿಂಟೆ ಸಿಂಹಮ್’, ‘ಇಂಡಿಯಾ ಸ್ವೀಟ್ ಆಂಡ್ ಸ್ಪೈಸಸ್’ ಅತ್ಯುತ್ತಮ ಚಿತ್ರ ವಿಭಾಗದ 276 ಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಇಂದು ಈ ಚಿತ್ರಗಳು ನಾಮನಿರ್ದೇಶನಗೊಳ್ಳಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಾಂಕಿತಗೊಳ್ಳಬಹುದಾದ ಕಲಾವಿದರು: ಅತ್ಯುತ್ತಮ ನಟಿ ವಿಭಾಗದಲ್ಲಿ ಒಲಿವಿಯಾ ಕೋಲ್ಮನ್ (ದಿ ಲಾಸ್ಟ್ ಡಾಟರ್), ಲೇಡಿ ಗಾಗಾ (ಹೌಸ್ ಆಫ್ ಗುಸ್ಸಿ), ಜೆನ್ನಿಫರ್ ಹಡ್ಸನ್ (ರೆಸ್ಪೆಕ್ಟ್), ನಿಕೋಲ್ ಕಿಡ್ಮನ್ (ಬೀಯಿಂಗ್ ದಿ ರಿಕಾರ್ಡೋಸ್), ಕ್ರೂಜ್, ಜೆಸ್ಸಿಕಾ ಚಸ್ಟೇನ್ (ದಿ ಐಸ್ ಆಫ್ ಟಮ್ಮಿ ಫಾಯೆ), ಕ್ರಿಸ್ಟನ್ ಸ್ಟೀವರ್ಟ್ (ಸ್ಪೆನ್ಸರ್) ಮತ್ತು ಅಲಾನಾ ಹೈಮ್ (ಲೈಕೋರೈಸ್ ಪಿಜ್ಜಾ) ಪ್ರಶಸ್ತಿ ರೇಸ್​ಗೆ ನಾಮಾಂಕಿತಗೊಳ್ಳುವ ನಿರೀಕ್ಷೆ ಇದೆ.

ಅತ್ಯುತ್ತಮ ನಟ ವಿಭಾಗದಲ್ಲಿ ನಾಮಾಂಕಿತಗೊಳ್ಳಬಹುದಾದ ಕಲಾವಿದರು: ಬೆನೆಡಿಕ್ಟ್ ಕಂಬರ್ಬ್ಯಾಚ್ (ದ ಪವರ್ ಆಫ್ ದಿ ಡಾಗ್), ಆಂಡ್ರ್ಯೂ ಗಾರ್ಫೀಲ್ಡ್ (ಟಿಕ್, ಟಿಕ್ … ಬೂಮ್!), ವಿಲ್ ಸ್ಮಿತ್ (ಕಿಂಗ್ ರಿಚರ್ಡ್), ಡೆನ್ಜೆಲ್ ವಾಷಿಂಗ್ಟನ್ (ದಿ ಟ್ರ್ಯಾಜೆಡಿ ಆಫ್ ಮ್ಯಾಕ್‌ಬೆತ್), ಜೇವಿಯರ್ ಬಾರ್ಡೆಮ್ (ಬಿಯಿಂಗ್ ದಿ ರಿಕಾರ್ಡೋಸ್), ಮಹೆರ್ಶಾಲಾ ಅಲಿ (ಸ್ವಾನ್ ಸಾಂಗ್), ಲಿಯೊನಾರ್ಡೊ ಡಿಕಾಪ್ರಿಯೊ (ಡೋಂಟ್ ಲುಕ್ ಅಪ್), ನಿಕೋಲಸ್ ಕೇಜ್ (ಪಿಗ್) ಮತ್ತು ಬ್ರಾಡ್ಲಿ ಕೂಪರ್ (ನೈಟ್ಮೇರ್ ಅಲ್ಲೆ), ಪೀಟರ್ ಡಿಂಕ್ಲೇಜ್ (ಸಿರಾನೋ) ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ರೇಸ್​​ನಲ್ಲಿ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ:

ಹಾಟ್ ಆಗಿ ಪಡ್ಡೆಗಳ ಮನಗೆದ್ದ ಹೆಬಾ ಪಟೇಲ್

ರಜನಿಕಾಂತ್​ 169ನೇ ಸಿನಿಮಾಗೆ ನಿರ್ದೇಶಕ ಫಿಕ್ಸ್​; ‘ಬೀಸ್ಟ್’ ಡೈರೆಕ್ಟರ್​ ಜತೆ ಕೈ ಜೋಡಿಸಿದ ಸೂಪರ್​ ಸ್ಟಾರ್​

Published On - 2:16 pm, Tue, 8 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್