ಆಸ್ಕರ್ ವೇದಿಕೆಯ ಕಪಾಳಮೋಕ್ಷಕ್ಕೆ ಅಲೋಪೆಸಿಯಾ ಕಾರಣ?! ವಿಲ್ ಸ್ಮಿತ್ ಪತ್ನಿಯ ಕೂದಲು ಹಾಗಿರುವುದೇಕೆ?

ಕ್ರಿಸ್ ಜಾಡಾ ಅವರ ಚಿಕ್ಕ ಕೂದಲಿನ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇದರಿಂದ ಸಿಟ್ಟಾದ ವಿಲ್ ಸ್ಮಿತ್ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ಹಿನ್ನೆಲೆ ಕ್ರಿಸ್ ಜಾಡಾಳ ಕೂದಲ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಜಾಡಾಳ ಕೂದಲು ಯಾಕೆ ಹಾಗಿದೆ? ಅದಕ್ಕೆ ಕಾರಣವೇನು? ಈ ಪ್ರಶ್ನೆಗೆ ಉತ್ತರ ಇಲ್ಲಿ ನೀಡಲಾಗಿದೆ.

ಆಸ್ಕರ್ ವೇದಿಕೆಯ ಕಪಾಳಮೋಕ್ಷಕ್ಕೆ ಅಲೋಪೆಸಿಯಾ ಕಾರಣ?! ವಿಲ್ ಸ್ಮಿತ್ ಪತ್ನಿಯ ಕೂದಲು ಹಾಗಿರುವುದೇಕೆ?
Follow us
TV9 Web
| Updated By: ganapathi bhat

Updated on:Mar 28, 2022 | 9:11 PM

ಹಾಲಿವುಡ್ ನಟ ವಿಲ್ ಸ್ಮಿತ್ ಆಸ್ಕರ್ ವೇದಿಕೆಯಲ್ಲಿ ಹಾಸ್ಯನಟ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕಿಂಗ್ ರಿಚರ್ಡ್ ಚಿತ್ರಕ್ಕಾಗಿ ವಿಲ್ ಸ್ಮಿತ್​ಗೆ 2022 ರ ಅತ್ಯುತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿ ನೀಡಲಾಗಿದೆ. ಆದರೆ, ಈ ಘಟನೆಯು ಆಸ್ಕರ್ ಪ್ರಶಸ್ತಿ ಸ್ವೀಕರಿಸುವ ಮೊದಲು ಸಂಭವಿಸಿದೆ. ಈ ಘಟನೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ವಾಸ್ತವವಾಗಿ, ಕ್ರಿಸ್ ರಾಕ್ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು. ಈ ಸಮಯದಲ್ಲಿ, ಅವರು ವಿಲ್ ಸ್ಮಿತ್ ಪತ್ನಿ ಪಿಂಕೆಟ್ ಅವರ ಬಗ್ಗೆ ಆಡಿಕೊಂಡಿದ್ದಾರೆ. ಕ್ರಿಸ್ ಜಾಡಾ ಅವರ ಚಿಕ್ಕ ಕೂದಲಿನ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇದರಿಂದ ಸಿಟ್ಟಾದ ವಿಲ್ ಸ್ಮಿತ್ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ಹಿನ್ನೆಲೆ ಕ್ರಿಸ್ ಜಾಡಾರ ಕೂದಲು ಉದುರುವಿಕೆಯ ಸಮಸ್ಯೆ ಬಗ್ಗೆ ನಾವು ತಿಳಿದುಕೊಳ್ಳೋಣ. ಜಾಡಾರ ಕೂದಲು ಯಾಕೆ ಹಾಗಿದೆ? ಅದಕ್ಕೆ ಕಾರಣವೇನು? ಈ ಪ್ರಶ್ನೆಗೆ ಉತ್ತರ ಇಲ್ಲಿ ನೀಡಲಾಗಿದೆ.

ಜಾಡಾ ಕೂದಲು ಹಾಗಾಗಲು ಕಾರಣವೇನು?

ಇಂಡಿಪೆಂಡೆಂಟ್ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ವಿಲ್ ಸ್ಮಿತ್ ಪತ್ನಿ ಜಾಡಾ ಅಲೋಪೇಸಿಯಾದೊಂದಿಗೆ ಹೋರಾಡುತ್ತಿದ್ದಾರೆ. ಇದೇ ಆಕೆಯ ಬೋಳು ತಲೆಗೆ ಕಾರಣವಾಗಿದೆ. ಅಲೋಪೇಸಿಯಾ ಎಂಬ ಸಮಸ್ಯೆಯಿಂದ ಕೂದಲು ಉದುರುವಿಕೆ ಆರಂಭವಾಗುತ್ತದೆ. ಅಮೆರಿಕಾದಲ್ಲಿ ಮಾತ್ರವೇ ಸುಮಾರು 68 ಲಕ್ಷ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಕೂದಲು ಉದುರುವುದು ಸಾಮಾನ್ಯ ಸಂಗತಿ ಎನ್ನುತ್ತಾರೆ ತಜ್ಞರು. ಕೂದಲುಗಳು ಒಡೆಯುತ್ತವೆ ಮತ್ತು ಅವುಗಳ ಸ್ಥಳದಲ್ಲಿ ಹೊಸ ಕೂದಲು ಬರುತ್ತವೆ. ಆದರೆ ಕೂದಲು ಒಡೆದ ನಂತರ ಅವುಗಳ ಸ್ಥಳದಲ್ಲಿ ಹೊಸ ಕೂದಲುಗಳು ಬರದಿದ್ದಾಗ ಅದನ್ನೇ ಅಲೋಪೇಸಿಯಾ ಎಂದು ಹೇಳುತ್ತಾರೆ. ಅದರ ರೋಗಿಗಳಲ್ಲಿ ಪರಿಣಾಮವು ವಿಭಿನ್ನ ರೀತಿಯಲ್ಲಿ ಕಂಡುಬರುತ್ತದೆ.

ಉದಾಹರಣೆಗೆ ಕೆಲವು ರೋಗಿಗಳಲ್ಲಿ ತಲೆಯ ಮೇಲೆ ಪ್ಯಾಚ್​ಗಳು ಕಾಣಲು ಆರಂಭವಾಗುತ್ತದೆ. ಅಂದರೆ, ಆ ಭಾಗದಲ್ಲಿ ಕೂದಲು ಬರುವುದಿಲ್ಲ. ಪ್ರತಿದಿನ ಅತಿಯಾಗಿ ಕೂದಲು ಉದುರುವುದನ್ನು ನೋಡುತ್ತೀರಿ. ಕೆಲವರಲ್ಲಿ ಸಂಪೂರ್ಣ ಕೂದಲು ಉದುರುವುದು ಆರಂಭವಾಗುತ್ತದೆ.

ಇದಕ್ಕೆ ಪರೀಕ್ಷೆ ಮತ್ತು ಚಿಕಿತ್ಸೆ ಹೇಗೆ?

ಚರ್ಮರೋಗ ತಜ್ಞರು ವ್ಯಕ್ತಿಯು ಈ ಸಮಸ್ಯೆಯಿಂದ ಬಳಲುತ್ತಿದ್ದಾನೆಯೇ ಇಲ್ಲವೇ ಎಂದು ಪರಿಸ್ಥಿತಿಗೆ ಅನುಗುಣವಾಗಿ ರಕ್ತ ಪರೀಕ್ಷೆ ಅಥವಾ ಬಯಾಪ್ಸಿ ಮೂಲಕ ಪತ್ತೆಮಾಡುತ್ತಾರೆ. ಇಲ್ಲಿಯವರೆಗೆ ಈ ಸಮಸ್ಯೆಗೆ ನಿಖರ ಔಷಧ ಕಂಡುಹಿಡಿದಿಲ್ಲ. ಅದಾಗ್ಯೂ ರೋಗಿಯ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ಕೆಲವು ಔಷಧಗಳು ಮತ್ತು ಲೋಷನ್​ಗಳನ್ನು ವೈದ್ಯರು ಶಿಫಾರಸು ಮಾಡಬಹುದು. ಅಲ್ಲದೆ ದೇಹದ ರೋಗನಿರೋಧಕ ಶಕ್ತಿ ವೃದ್ಧಿಸುವಂತ ಕೆಲವು ಔಷಧ ಕೊಡಬಹುದು.

ಇದನ್ನೂ ಓದಿ: Oscar: ಆಸ್ಕರ್ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಪಡೆದ ವಿಶ್ವದ ಇಬ್ಬರೇ ವ್ಯಕ್ತಿಗಳು ಇವರು! ಇಲ್ಲಿದೆ ಮಾಹಿತಿ

ಇದನ್ನೂ ಓದಿ: Oscars 2022 Winners: ವಿಲ್​ ಸ್ಮಿತ್​ಗೆ ಅತ್ಯುತ್ತಮ ನಟ ಆಸ್ಕರ್​ ಪ್ರಶಸ್ತಿ; ‘ಕೋಡಾ’ ಅತ್ಯುತ್ತಮ ಸಿನಿಮಾ

Published On - 9:09 pm, Mon, 28 March 22

ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ