Oscars 2022 Winners: ವಿಲ್​ ಸ್ಮಿತ್​ಗೆ ಅತ್ಯುತ್ತಮ ನಟ ಆಸ್ಕರ್​ ಪ್ರಶಸ್ತಿ; ‘ಕೋಡಾ’ ಅತ್ಯುತ್ತಮ ಸಿನಿಮಾ

Oscars 2022 Winners List: 94ನೇ ಸಾಲಿನ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ವಿಲ್​ ಸ್ಮಿತ್​ ಅವರು ಅತ್ಯುತ್ತಮ ನಟ ಹಾಗೂ ಜೆಸ್ಸಿಕಾ ಚಾಸ್ಟೇನ್​ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Oscars 2022 Winners: ವಿಲ್​ ಸ್ಮಿತ್​ಗೆ ಅತ್ಯುತ್ತಮ ನಟ ಆಸ್ಕರ್​ ಪ್ರಶಸ್ತಿ; ‘ಕೋಡಾ’ ಅತ್ಯುತ್ತಮ ಸಿನಿಮಾ
ವಿಲ್ ಸ್ಮಿತ್
Follow us
TV9 Web
| Updated By: ಮದನ್​ ಕುಮಾರ್​

Updated on:Mar 28, 2022 | 5:04 PM

94ನೇ ವರ್ಷದ ಆಸ್ಕರ್​ ಪ್ರಶಸ್ತಿ (Oscars 2022) ಸಮಾರಂಭ ಅದ್ದೂರಿಯಾಗಿ ನಡೆದಿದೆ. ಕಳೆದೆರಡು ವರ್ಷಗಳಲ್ಲಿ ಕೊವಿಡ್​ನಿಂದ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಕಳೆ ಮಾಯವಾಗಿತ್ತು. ಆದರೆ ಈ ಬಾರಿ ಮತ್ತೆ ಹಳೆಯ ಚಾರ್ಮ್​ ಮರಳಿ ಬಂದಿದೆ. ರೆಡ್​ ಕಾರ್ಪೆಟ್​ ಮೇಲೆ ಸೆಲೆಬ್ರಿಟಿಗಳು ಹೆಜ್ಜೆ ಹಾಕಿದ್ದಾರೆ. ಝಗಮಗಿಸುವ ವೇದಿಕೆಯಲ್ಲಿ ನಿರೂಪಕರು ಈ ಇವೆಂಟ್​ ನಡೆಸಿಕೊಟ್ಟಿದ್ದಾರೆ. ಖ್ಯಾತ ನಟ ವಿಲ್​ ಸ್ಮಿತ್​ (Will Smith) ಅವರು ‘ಕಿಂಗ್​ ರಿಚರ್ಡ್​’ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ದಿ ಐಸ್​ ಆಫ್​ ಟ್ಯಾಮಿ ಫೇ’ ಸಿನಿಮಾದಲ್ಲಿನ ನಟನೆಗಾಗಿ ಜೆಸ್ಸಿಕಾ ಚಾಸ್ಟೇನ್​ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು (ರೆಜಿನಾ ಹಾಲ್​, ಎಮಿ ಶೂಮಾರ್, ವೊಂಡಾ ಸ್ಕೈಸ್​) ಆಸ್ಕರ್​ ಸಮಾರಂಭವನ್ನು ಹೋಸ್ಟ್​ ಮಾಡಿದ್ದಾರೆ. ಶಾನ್​ ಹೆಡರ್ ನಿರ್ದೇಶನದ ‘ಕೋಡಾ’ ಚಿತ್ರವು (CODA Movie) ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಬಾರಿಯ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭರಲ್ಲಿ ಕೆಲವು ವಿವಾದಗಳು ಕೂಡ ಆಗಿವೆ. 94ನೇ ಅಕಾಡೆಮಿ ಅವಾರ್ಡ್ಸ್​ನಲ್ಲಿ ಪ್ರಶಸ್ತಿ ಪಡೆದ ಸೆಲೆಬ್ರಿಟಿಗಳ ಲಿಸ್ಟ್​ ಇಲ್ಲಿದೆ..

ಅತ್ಯುತ್ತಮ ನಟ: ವಿಲ್​ ಸ್ಮಿತ್​ (ಸಿನಿಮಾ- ಕಿಂಗ್​ ರಿಚರ್ಡ್​)

ಅತ್ಯುತ್ತಮ ನಟಿ: ಜೆಸಿಕಾ ಚಾಸ್ಟೇನ್​ (ಸಿನಿಮಾ- ದಿ ಐಸ್​ ಆಫ್​ ಟ್ಯಾಮಿ ಫೇ)

ಅತ್ಯುತ್ತಮ ಸಿನಿಮಾ: ಕೋಡಾ (ನಿರ್ದೇಶನ- ಶಾನ್​ ಹೆಡರ್​)

ಅತ್ಯುತ್ತಮ ನಿರ್ದೇಶನ: ಜೇನ್​ ಕಾಂಪಿಯನ್​ (ಸಿನಿಮಾ- ದಿ ಪವರ್​ ಆಫ್ ದಿ​ ಡಾಗ್​)

ಅತ್ಯುತ್ತಮ ಒರಿಜಿನಲ್​ ಸಾಂಗ್​: ನೋ ಟೈಮ್​ ಟು ಡೈ

ಅತ್ಯುತ್ತಮ ಅಡಾಪ್ಟೆಡ್​ ಸ್ಕ್ರೀನ್​ ಪ್ಲೇ: ಶಾನ್​ ಹೆಡರ್​ (ಸಿನಿಮಾ- ಕೋಡಾ)

ಅತ್ಯುತ್ತಮ ವಸ್ತ್ರ ವಿನ್ಯಾಸ: ಜೆನ್ನಿ ಬೀವನ್​ (ಸಿನಿಮಾ: ಕ್ರುವೆಲ್ಲಾ)

ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ನಟ ವಿಲ್​ ಸ್ಮಿತ್​ ಅವರು ಎರಡು ಕಾರಣಕ್ಕಾಗಿ ಸುದ್ದಿ ಆಗಿದ್ದಾರೆ. ‘ಕಿಂಗ್​ ರಿಚರ್ಡ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ಹಾಗೆಯೇ, ಹಾಸ್ಯ ನಟನ ಕೆನ್ನೆಗೆ ಬಾರಿಸುವ ಮೂಲಕ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎಂದಿನಂತೆ ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಖುಷಿಖುಷಿಯಾಗಿ ನಡೆಯುತ್ತಿತ್ತು. ವೇದಿಕೆ ಮೇಲೆ ಹಾಸ್ಯ ನಟ ಕ್ರಿಸ್​ ರಾಕ್​ ಮಾತನಾಡುತ್ತಿದ್ದರು. ಅವರ ಮಾತು ವಿಲ್​ ಸ್ಮಿತ್​ ಪತ್ನಿ ಜೇಡಾ ಪಿಂಕೆಟ್​ ಸ್ಮಿತ್​ ಕಡೆಗೆ ತಿರುಗಿತು. ಜೇಡಾ ಪಿಂಕೆಟ್​​ ಸ್ಮಿತ್​ ಬಗ್ಗೆ ಅವರು ಜೋಕ್​ ಮಾಡಿದರು. ಅದನ್ನು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು. ಒಂದು ಕ್ಷಣ ವಿಲ್​ ಸ್ಮಿತ್​ ಕೂಡ ನಕ್ಕರು. ಆದರೆ ಅಲ್ಲಿ ಮರುಕ್ಷಣ ನಡೆದಿದ್ದು ನಿಜಕ್ಕೂ ಶಾಕಿಂಗ್​. ಕೂಡಲೇ ವೇದಿಕೆ ಏರಿದ ವಿಲ್​ ಸ್ಮಿತ್​ ಅವರು ಕ್ರಿಸ್​ ರಾಕ್​ ಮುಖಕ್ಕೆ ಬಾರಿಸಿದರು. ಇಡೀ ಸಭಾಂಗಣದಲ್ಲಿ ಮೌನ ಆವರಿಸಿತು. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್​ ರಾಕ್​ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ಜೇಡಾ ಪಿಂಕೆಟ್​​ ಸ್ಮಿತ್​ ಬಗ್ಗೆ ಕಾಮಿಡಿ ಮಾಡಿದರು. ಅದು ವಿಲ್​ ಸ್ಮಿತ್​ ಅವರಿಗೆ ಸರಿ ಎನಿಸಲಿಲ್ಲ. ಪತ್ನಿಯ ಬಗ್ಗೆ ಜೋಕ್​ ಮಾಡಿದ್ದಕ್ಕಾಗಿ ಕ್ರಿಸ್​ ರಾಕ್​ ಕೆನ್ನೆಗೆ ವಿಲ್​ ​ಸ್ಮಿತ್​ ಬಾರಿಸಿದರು. ಇದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.

ಇದನ್ನೂ ಓದಿ:

ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

ಆತ್ಮಹತ್ಯೆ ಮಾಡಿಕೊಂಡ ಆಸ್ಕರ್​ ಪುರಸ್ಕೃತ ನಟಿಯ ಮಗ; ರೆಜೀನಾ ಕಿಂಗ್​ ಬಾಳಿನಲ್ಲಿ ಆವರಿಸಿತು ಕತ್ತಲು

Published On - 10:15 am, Mon, 28 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ