- Kannada News Photo gallery Nick Jonas wife Priyanka Chopra hosts Pre-Oscar party wearing black saree
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್’ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೂ ಅವರು ಭಾರತೀಯ ಸಂಸ್ಕೃತಿಯನ್ನು ಮರೆತಿಲ್ಲ. ಸೀರೆ ಧರಿಸಿ ಅವರು ಮಿಂಚಿರುವ ಫೋಟೋಗಳು ವೈರಲ್ ಆಗಿವೆ.
Updated on: Mar 24, 2022 | 4:32 PM

Nick Jonas wife Priyanka Chopra hosts Pre-Oscar party wearing black saree

Nick Jonas wife Priyanka Chopra hosts Pre-Oscar party wearing black saree

ಪ್ರೀ-ಆಸ್ಕರ್ ಪಾರ್ಟಿಯಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಮಾಡಿದ ಭಾಷಣದ ವಿಡಿಯೋ ವೈರಲ್ ಆಗುತ್ತಿದೆ. ಜಾಗತಿಕ ಸಿನಿಮಾದಲ್ಲಿ ತಾವು ಗುರುತಿಸಿಕೊಂಡ ಬಗೆಯನ್ನು ಅವರು ವಿವರಿಸಿದ್ದಾರೆ.

ಈ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಆಡಿದ ಮಾತುಗಳು ತುಂಬ ಸ್ಫೂರ್ತಿದಾಯಕ ಆಗಿದ್ದವು ಎಂದು ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದು ಪ್ರಿಯಾಂಕಾ ಅಭಿಮಾನಿಗಳಿಗೆ ಖುಷಿ ನೀಡಿದೆ. ಕಮೆಂಟ್ ಮೂಲಕ ಫ್ಯಾನ್ಸ್ ಜೈಕಾರ ಹಾಕುತ್ತಿದ್ದಾರೆ.

ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡು ಸುದ್ದಿ ಆಗಿದ್ದರು. ಈವರೆಗೂ ಅವರು ಮಗುವಿನ ಫೋಟೋ ಬಹಿರಂಗ ಮಾಡಿಲ್ಲ. ಮಗು ಪಡೆದಿರುವ ಬಗ್ಗೆಯೂ ಪ್ರೀ-ಆಸ್ಕರ್ ಪಾರ್ಟಿಯಲ್ಲಿ ಪ್ರಿಯಾಂಕಾ ಮಾತನಾಡಿದ್ದಾರೆ.
























