ಶೀಘ್ರದಲ್ಲೇ ಕೋವಿಡ್-19 ಕಾಲರ್ ಟ್ಯೂನ್ ತೆರವು; ಕೊನೆಗೂ ಮುಕ್ತಿ ಸಿಕ್ತು ಎಂದ ನೆಟ್ಟಿಗರು
ಸರ್ಕಾರದ ಈ ನಿರ್ಧಾರದಿಂದ ಯಾರಿಗೆ ಖುಷಿ ಯಾಗಿದೆಯೋ ಇಲ್ಲವೋ, ಆದರೆ, ನೆಟ್ಟಿಗರಿಗಂತ್ತು ಸಖಕ್ ಖುಷಿಯಾದಂತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಫೋಸ್ಟ್ಗಳು ಹರಿದಾಡುತ್ತಿವೆ.
ಮಹಾಮಾರಿ ಕೋವಿಡ್ (Covid-19) ರೋಗದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿತ್ತು. ಎಂದೂ ಕೇಳದ ಮತ್ತು ಕಾಣದ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಸದ್ಯ ಇಡೀ ಜಗತ್ತು ಮಹಾಮಾರಿಯಿಂದ ಸುಧಾರಿಸಿಕೊಂಡಿದೆ. ಕೋವಿಡ್ -19 ಪ್ರಕರಣಗಳಲ್ಲಿ ಸ್ಥಿರವಾದ ಇಳಿಕೆ ಕಂಡಿದ್ದು, ಇದರ ಮಧ್ಯೆ, ಕೊರೊನಾ ವೈರಸ್ ಜಾಗೃತಿ ಮತ್ತು ಮುನ್ನೆಚ್ಚರಿಕೆಗಳ ಕುರಿತು ಕಾಲರ್ ಟ್ಯೂನ್ನ್ನು ನಿಲ್ಲಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ. ಕೋವಿಡ್-19 ಕಾಲರ್ ಟ್ಯೂನ್ನ್ನು ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ದೇಶವನ್ನು ಆವರಿಸಿದಾಗ ಪ್ರಾರಂಭಿಸಲಾಯಿತು. ಭಾರ್ತಿ ಏರ್‌ಟೆಲ್, ಬಿಎಸ್‌ಎನ್‌ಎಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಸೇರಿದಂತೆ ಆಪರೇಟರ್‌ಗಳು ತಮ್ಮ ಕಾಲರ್ ಟ್ಯೂನ್‌ಗಳನ್ನು ಮಾರ್ಚ್ 2020 ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಬದಲಾಯಿಸಿದ್ದಾರೆ.
No more caller tune on #COVID19. It is going to stop soon: Official Sources
— ANI (@ANI) March 28, 2022
ಆರಂಭದಲ್ಲಿ, COVID-19 ನಲ್ಲಿನ ಕಾಲರ್ ಟ್ಯೂನ್ ಜನರು ಕೆಮ್ಮುವುದು, ಸೀನುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನಂತರ ಕೊರೊನಾವೈರಸ್‌ನಿಂದ ರಕ್ಷಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸಲಹೆಯೊಂದಿಗೆ ಪ್ರಾರಂಭವಾಗುತ್ತಿತ್ತು. ಆದರೆ ಈ ವರ್ಷದ ಜನವರಿಯಲ್ಲಿ, ಜನರು ಲಸಿಕೆ ಹಾಕುವಂತೆ ಒತ್ತಾಯಿಸುವ ಸಂದೇಶವನ್ನಾಗಿ ಬದಲಾಯಿಸಲಾಯಿತು. ಸರ್ಕಾರದ ಈ ನಿರ್ಧಾರದಿಂದ ಯಾರಿಗೆ ಖುಷಿ ಯಾಗಿದೆಯೋ ಇಲ್ಲವೋ, ಆದರೆ, ನೆಟ್ಟಿಗರಿಗಂತ್ತು ಸಖಕ್ ಖುಷಿಯಾದಂತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಫೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದು, ಕೊನೆಗೂ ಕಿವಿಗಳಿಗೆ ಮುಕ್ತಿ ನೀಡಲಾಯಿತು ಎನ್ನುವ ತಮಾಷೆ ಫೋಸ್ಟ್ಗಳು ಹರಿದಾಡುತ್ತಿವೆ.
Finally A Relief #Indiangovt #coronacallertune https://t.co/f7xBGkVVcn pic.twitter.com/jrslotIpYF
— ਵੈਭਵ ਕਪੂਰ (@Khatri_2k1) March 28, 2022
Finally some relief to the ear. https://t.co/aBexXW7UxM pic.twitter.com/Rv4dTPamhi
— Swayam Baral (@SwayamOdisha) March 28, 2022
Utho Anarkali, covid ki caller tune bajni band ho gyi hai. pic.twitter.com/uh6gfhYkEQ
— Abhi (@Certified90sKid) March 28, 2022
ಸೋಮವಾರ ಭಾರತದಲ್ಲಿ 1,270 ಹೊಸ COVID-19 ಪ್ರಕರಣಗಳನ್ನು ವರದಿ ಆಗಿವೆ. ಇದು ಏಪ್ರಿಲ್ 2020 ರಿಂದ ಕಡಿಮೆಯಾಗಿದೆ. ಕರೋನ ವೈರಸ್ ಪ್ರಕರಣಗಳು ಪ್ರತಿ ತಿಂಗಳು ಕಡಿಮೆಯಾಗುತ್ತಿವೆ.