ಕೆಲವೇ ನಿಮಿಷಗಳಲ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ ಮನುಷ್ಯ; ಹೇಗೆ ಎಂದು ತಿಳಿದರೆ ಅಚ್ಚರಿ ಪಡ್ತೀರಾ..!
ಪ್ರಮುಖ ವ್ಯಾಪಾರ ಸುದ್ದಿವಾಹಿನಿಯ ಪ್ರಕಾರ, ಅವರು ತಮ್ಮ ಪೇಂಟಿಂಗ್‌ಗಳ ಡಿಜಿಟಲ್ ಹರಾಜಿನ ಮೂಲಕ ಕೇವಲ 32 ನಿಮಿಷಗಳಲ್ಲಿ 5 ಕೋಟಿಗೂ ಹೆಚ್ಚು ಗಳಿಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಕೋಟಿ ಗಳಿಸುವುದು ಹೇಗೆ? ಜನರು ತಮ್ಮ ಇಡೀ ಜೀವನವನ್ನೇ ಕೋಟಿಗಟ್ಟಲೆ ಸಂಪಾದಿಸುವಲ್ಲೇ ಕಳೆಯುತ್ತದೆ. ಆದರೆ ಅಮೆರಿಕದ ಕಲಾವಿದನೊಬ್ಬ ಕೆಲವೇ ನಿಮಿಷಗಳಲ್ಲಿ ಕೋಟಿ ಕೋಟಿ ಸಂಪಾದಿಸಿದ್ದಾನೆ. ಹೌದು ಈ ಕಲಾವಿದನ ಹೆಸರು ಕ್ಯಾಮ್ ರಾಕಮ್(Cam Rackum). ಈತ ಪ್ರಸ್ತುತ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ. 42 ವರ್ಷದ ಕಲಾವಿದನಾದ ಈತ, ಈ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಪ್ರಭಾವಿತರಾಗಿದ್ದರು. ಅದು ಅವರನ್ನು ಡಿಜಿಟಲ್ ಜಗತ್ತಿಗೆ ಪ್ರವೇಶಿಸಲು ಕಾರಣವಾಗಿದ್ದು, ಅದು ಅವರ ಅದೃಷ್ಟವನ್ನು ಬದಲಾಯಿಸಿತು. ಪ್ರಮುಖ ವ್ಯಾಪಾರ ಸುದ್ದಿವಾಹಿನಿಯ ಪ್ರಕಾರ, ಅವರು ತಮ್ಮ ಪೇಂಟಿಂಗ್‌ಗಳ ಡಿಜಿಟಲ್ ಹರಾಜಿನ ಮೂಲಕ ಕೇವಲ 32 ನಿಮಿಷಗಳಲ್ಲಿ 5 ಕೋಟಿಗೂ ಹೆಚ್ಚು ಗಳಿಸಿದ್ದಾರೆ. ಇದಕ್ಕೂ ಮುನ್ನ 2015ರಲ್ಲಿ ತಮ್ಮ ಚಿತ್ರಗಳನ್ನು ಮಾರಾಟ ಮಾಡಿ ಕೇವಲ 8 ಲಕ್ಷ ಗಳಿಸಿದ್ದರು. ಆದರೆ ಈ ಬಾರಿ ತಮ್ಮ ಚಿತ್ರಗಳನ್ನು ಡಿಜಿಟಲ್ ಹರಾಜು ಹಾಕಿ ಕೆಲವೇ ನಿಮಿಷಗಳಲ್ಲಿ ಲಕ್ಷಾಧಿಪತಿಯಾದರು.
View this post on Instagram
ಈ ಗಳಿಕೆ ನನಗೂ ಅಚ್ಚರಿ ತಂದಿದೆ ಎಂದು ಕ್ಯಾಮ್ ರಾಕಮ್ ಹೇಳಿದ್ದಾರೆ. ಇಷ್ಟು ದುಡ್ಡು ಸಂಪಾದಿಸಿರುವುದು ಅವನಿಗೂ ಸ್ವತ್ಃ ನಂಬಲಾಗಲಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಜನಪ್ರಿಯ ಮೆಮ್ ಪುಟವಾದ @wallstmemes ನ್ನು ನೋಡಿದಾಗ ರಾಕಮ್ ಡಿಜಿಟಲ್ ಕಲೆಯನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಅವರು ವಾಲ್ ಸ್ಟ್ರೀಟ್-ವಿಷಯದ ಕಾರ್ಟೂನ್ಗಳನ್ನು ರಚಿಸಿದ್ದಾರೆ.