AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್ ವಿವಾದ ಬಗ್ಗೆ ಪತ್ರಕರ್ತನ ಪ್ರಶ್ನೆ ; ಅವರು ಹೇಗೆ ಬದುಕುತ್ತಾರೋ ಹಾಗೆ ಬದುಕಲು ಬಿಡಿ ಎಂದು ಉತ್ತರಿಸಿದ ಹರ್ನಾಜ್ ಸಂಧು

ಪತ್ರಕರ್ತರ  ಪ್ರಶ್ನೆಗೆ ತುಂಬಾ ಸಂಯಮದಿಂದ ಉತ್ತರಿಸಿದ ಸಂಧು ನೀವು ಯಾಕೆ ಯಾವಾಗಲೂ ಹುಡುಗಿಯರನ್ನೇಕೆ ಟಾರ್ಗೆಟ್ ಮಾಡ್ತೀರಿ? ಈಗಲೂ ನೋಡಿ, ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಅಂದಹಾಗೆ, ಹಿಜಾಬ್ ವಿಷಯದಲ್ಲೂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ...

ಹಿಜಾಬ್ ವಿವಾದ ಬಗ್ಗೆ ಪತ್ರಕರ್ತನ ಪ್ರಶ್ನೆ ; ಅವರು ಹೇಗೆ ಬದುಕುತ್ತಾರೋ ಹಾಗೆ ಬದುಕಲು ಬಿಡಿ ಎಂದು ಉತ್ತರಿಸಿದ ಹರ್ನಾಜ್ ಸಂಧು
ಹರ್ನಾಜ್ ಸಂಧು
TV9 Web
| Edited By: |

Updated on:Mar 27, 2022 | 10:45 PM

Share

ನೀವು ಯಾವಾಗಲೂ ಹುಡುಗಿಯರನ್ನೇಕೆ ಟಾರ್ಗೆಟ್ ಮಾಡುತ್ತೀರಿ? ಹುಡುಗಿಯರನ್ನು ಟಾರ್ಗೆಟ್ ಮಾಡುವುದನ್ನು ನಿಲ್ಲಿಸಿ, ಅವರು ಹೇಗೆ ಬದುಕುತ್ತಾರೋ ಹಾಗೆ ಬದುಕಲು ಬಿಡಿ ಎಂದು ಭುವನ ಸುಂದರಿ ಹರ್ನಾಜ್ ಸಂಧು (Harnaaz Sandhu) ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ. ಹಿಜಾಬ್ ವಿವಾದ (Hijab Row) ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪತ್ರಕರ್ತರೊಬ್ಬರು ಸಂಧು ಅವರಲ್ಲಿ ಪ್ರಶ್ನೆ ಕೇಳಿದ್ದಾರೆ. ಆಗ ಕಾರ್ಯಕ್ರಮದ ನಿರೂಪಕರು ರಾಜಕೀಯದ ಪ್ರಶ್ನೆಗಳನ್ನು ಕೇಳಬೇಡಿ, ಮಿಸ್ ಯೂನಿವರ್ಸ್ (Miss Universe 2021) ಸಂಧು ಅವರ ಜೀವನ ಪಯಣದ ಬಗ್ಗೆ ಕೇಳಿ ಎಂದು ಪತ್ರಕರ್ತರಿಗೆ ಹೇಳಿದ್ದಾರೆ. ಇದಕ್ಕೆ ಪತ್ರಕರ್ತರು ಕಾರ್ಯಕ್ರಮ ನಿರೂಪಣೆ ಮಾತ್ರ ನಿಮ್ಮದು, ನಾನು ಮಿಸ್ ಸಂಧು ಅವರಲ್ಲಿ ಪ್ರಶ್ನೆ ಕೇಳುತ್ತಿದ್ದೇನೆ. ಅವರು ಉತ್ತರಿಸಲಿ ಎಂದಿದ್ದಾರೆ. ಈ ವೇಳೆ ಪತ್ರಕರ್ತರ  ಪ್ರಶ್ನೆಗೆ ತುಂಬಾ ಸಂಯಮದಿಂದ ಉತ್ತರಿಸಿದ ಸಂಧು ನೀವು ಯಾಕೆ ಯಾವಾಗಲೂ ಹುಡುಗಿಯರನ್ನೇಕೆ ಟಾರ್ಗೆಟ್ ಮಾಡ್ತೀರಿ? ಈಗಲೂ ನೋಡಿ, ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಅಂದಹಾಗೆ, ಹಿಜಾಬ್ ವಿಷಯದಲ್ಲೂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅವರು (ಹುಡುಗಿಯರು) ಆಯ್ಕೆಮಾಡಿದ ರೀತಿಯಲ್ಲಿ ಬದುಕಲಿ, ಅವರು ಗಮ್ಯಸ್ಥಾನವನ್ನು ತಲುಪಲಿ, ಅವಳನ್ನು ಹಾರಲು ಬಿಡಿ, ಅವಳ ರೆಕ್ಕೆಗಳನ್ನು ಕತ್ತರಿಸಬೇಡಿ, ನೀವು ಬೇರೊಬ್ಬರ ರೆಕ್ಕೆಗಳನ್ನು ಕತ್ತರಿಸಬೇಕೆಂದು ಬಯಸಿದರೆ ನಿಮ್ಮ ರೆಕ್ಕೆಗಳನ್ನೇ ಕತ್ತರಿಸಿ ಎಂದಿದ್ದಾರೆ.

ನೀವು ನನ್ನ ಪಯಣ, ತಾನು ಎದುರಿಸಿದ ಅಡೆತಡೆಗಳು ಮತ್ತು ಸೌಂದರ್ಯ ಸ್ಪರ್ಧೆಯ ಯಶಸ್ಸಿನ ಬಗ್ಗೆ ಕೇಳಿ. ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವುದರ ಬಗ್ಗೆ ಹಲವಾರು ಅಭಿಪ್ರಾಯಗಳು ಇವೆ. ನೀವು ನೋಡಲು ಚಂದ ಇದ್ದೀರಿ ಎಂಬುದು ಮಾತ್ರ ಅಲ್ಲ.ಅದು ಕೇವಲ ಶೇ 1 ರಷ್ಟು ಮಾತ್ರ. ಅದು ನಿಮ್ಮ ಆತ್ಮಧೈರ್ಯ, ನಿಮ್ಮ ದನಿ, ನಿಮ್ಮ ಸಿದ್ಧಾಂತ, ನಿಮ್ಮ ವ್ಯಕ್ತಿತ್ವ ಮತ್ತು ನೀವು ಸಮಾಜದಲ್ಲಿ ಬದಲಾವಣೆ ತರುವ ಧೈರ್ಯ ಹೊಂದಿದ್ದೀರಾ ಎಂಬುದಾಗಿದೆ. ಹೌದು, ಇದಕ್ಕೆಲ್ಲ ನಾನು ಸಮರ್ಥಳಾಗಿರುವುದಕ್ಕೆ ನಾನು ಇಲ್ಲಿ ಇದ್ದೇನೆ ಎಂದಿದ್ದಾರೆ.ಸಂಧು ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊ ಮಿಸ್ ಯೂನಿವರ್ಸ್ 2021 ಭಾರತಕ್ಕೆ ಬಂದ ಗೌರವಾರ್ಥವಾಗಿ ಮಾರ್ಚ್ 17 ರಂದು ಇಲ್ಲಿ ನಡೆದ ಕಾರ್ಯಕ್ರಮದ್ದಾಗಿದೆ.

ಶಿಕ್ಷಣ ಸಂಸ್ಥೆಗಳ ತರಗತಿ ಕೊಠಡಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠ ಇತ್ತೀಚೆಗೆ ವಜಾಗೊಳಿಸಿದ್ದು, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಉಡುಗೆ ನಿಯಮವನ್ನು ಅನುಸರಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: ಬಹ್ರೇನ್‌ನಲ್ಲಿ ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಿದ ಭಾರತೀಯ ರೆಸ್ಟೋರೆಂಟ್ ಬಂದ್: ವರದಿ

Published On - 10:43 pm, Sun, 27 March 22

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು