AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​​ಗೆ 20 ಕೋಟಿ ರೂ.ವಂಚನೆ ಕೇಸ್​​; 10 ವರ್ಷಗಳ ನಂತರ ಗುಜರಾತ್​ ಮೂಲದ ಉದ್ಯಮಿಯನ್ನು ಬಂಧಿಸಿದ ಸಿಬಿಐ

2012ರ ಜೂನ್​​ನಲ್ಲಿ ಮೊಟ್ಟಮೊದಲು ಅಹ್ಮದಾಬಾದ್​​ನ ಕೆನರಾ ಬ್ಯಾಂಕ್​ ಈ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಂದರೆ ಇಡೀ ನೋವಾ ಶಿಪ್ಪಿಂಗ್​ ಮತ್ತು ಅದರ ನಿರ್ದೇಶಕರು, ಪ್ರಚಾರಕರ ವಿರುದ್ಧ ದೂರು ನೀಡಿತ್ತು.

ಬ್ಯಾಂಕ್​​ಗೆ 20 ಕೋಟಿ ರೂ.ವಂಚನೆ ಕೇಸ್​​; 10 ವರ್ಷಗಳ ನಂತರ ಗುಜರಾತ್​ ಮೂಲದ ಉದ್ಯಮಿಯನ್ನು ಬಂಧಿಸಿದ ಸಿಬಿಐ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Mar 27, 2022 | 9:40 PM

Share

2012ರಲ್ಲಿ ನಡೆದ ಬ್ಯಾಂಕ್​ ವಂಚನೆ ಪ್ರಕರಣದ ಆರೋಪಿಯೊಬ್ಬನನ್ನು ಸಿಬಿಐ (CBI) ಈಗ ಬಂಧಿಸಿದೆ. ಅಂದರೆ ಬರೋಬ್ಬರಿ 10 ವರ್ಷಗಳ ನಂತರ ಆರೋಪಿಯ ಅರೆಸ್ಟ್ ಆಗಿದೆ. ಬಂಧಿತ ಗುಜರಾತ್ ಮೂಲದ ಉದ್ಯಮಿ ಸಂಜಯ್​ ಆರ್​ ಗುಪ್ತಾ. ನೋವಾ ಶಿಪ್ಪಿಂಗ್​ ಪ್ರೈವೇಟ್​ ಲಿಮಿಟೆಡ್​​ನಲ್ಲಿ ನಿರ್ದೇಶಕನಾಗಿದ್ದು, ಬ್ಯಾಂಕ್​​ಗಳಿಗೆ ಸುಮಾರು 20 ಕೋಟಿ ರೂಪಾಯಿ ವಂಚನೆ (Bank Fraud) ಮಾಡಿ, ಪ್ರಕರಣ ದಾಖಲಾಗುತ್ತಿದ್ದಂತೆ ಕೀನ್ಯಾದ ನೈರೋಬಿಗೆ ಪರಾರಿಯಾಗಿದ್ದ.  ಅಂದು ಸಿಬಿಐ  ಗುಪ್ತಾ ವಿರುದ್ಧ ಲುಕ್​ಔಟ್ ನೋಟಿಸ್​, ರೆಡ್​ ಕಾರ್ನರ್​ ನೋಟಿಸ್​, ಇಂಟರ್​ಪೋಲ್ ನೋಟಿಸ್​ಗಳನ್ನು ಜಾರಿ ಮಾಡಿತ್ತು. ಇದೀಗ ನೈರೋಬಿಯಿಂದ ವಾಪಸ್ ಆಗುತ್ತಿದ್ದಂತೆ ಸಿಬಿಐ ಬಂಧಿಸಿದೆ.

2012ರ ಜೂನ್​​ನಲ್ಲಿ ಮೊಟ್ಟಮೊದಲು ಅಹ್ಮದಾಬಾದ್​​ನ ಕೆನರಾ ಬ್ಯಾಂಕ್​ ಈ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಂದರೆ ಇಡೀ ನೋವಾ ಶಿಪ್ಪಿಂಗ್​ ಮತ್ತು ಅದರ ನಿರ್ದೇಶಕರು, ಪ್ರಚಾರಕರ ವಿರುದ್ಧ ದೂರು ನೀಡಿತ್ತು. ಈ ಕಂಪನಿ ಸುಮಾರು 20.68 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿತ್ತು. ಅದರ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿಯನ್ನು ಬಂಧಿಸಿರುವ ಸಿಬಿಐ ಅಹ್ಮದಾಬಾದ್​ನ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಸದ್ಯ ಉದ್ಯಮಿಯನ್ನು ಎರಡು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿದೆ.

ಈ ಬಗ್ಗೆ ಸಿಬಿಐ ವಕ್ತಾರ ಆರ್.ಸಿ.ಜೋಶಿ ಪ್ರತಿಕ್ರಿಯೆ ನೀಡಿದ್ದು, ತನಿಖೆಯೆಲ್ಲ ಸಂಪೂರ್ಣವಾಗಿ ಪೂರ್ಣಗೊಂಡು ಗುಪ್ತಾ ಸೇರಿ ಎಂಟು ಆರೋಪಿಗಳ ವಿರುದ್ಧ 2013ರಲ್ಲಿಯೇ ಚಾರ್ಜ್​ಶೀಟ್ ದಾಖಲಾಗಿದೆ. ಗುಪ್ತಾ ತುಂಬ ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಇದೀಗ ಬಂಧಿಸಲಾಗಿದ್ದು, ಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Weather Alert: ಇನ್ನು ಐದು ದಿನ ದೇಶದ ಹಲವು ರಾಜ್ಯಗಳಲ್ಲಿ ಉಷ್ಣ ಅಲೆ, ಮಳೆಯೂ ಇರಲಿದೆ: ಹವಾಮಾನ ಇಲಾಖೆ

Follow Us
TV9 Web
TV9 Web

TV9 Kannada

Read More
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ