AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ವಿವರಿಸಿದ ಕಿಯಾರಾ

Toxic movie: ಕಿಯಾರಾ ಅವರು ಸಿನಿಮಾಗಳಲ್ಲಿ ಅತಿಯಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಮದುವೆಯಾದ ಬಳಿಕವಂತೂ ಗ್ಲಾಮರಸ್ ಪಾತ್ರಗಳಿಗೆ ನೋ ಎಂದಿದ್ದೇ ಹೆಚ್ಚು. ಆದರೆ ‘ಟಾಕ್ಸಿಕ್’ ಸಿನಿಮಾನಲ್ಲಿ ಮಾತ್ರ ಯಾವುದೇ ಮುಜುಗರಗಳಿಲ್ಲದೆ ಗ್ಲಾಮರಸ್ ಪಾತ್ರವನ್ನು ಒಪ್ಪಿಕೊಂಡಿರುವುದು ಮಾತ್ರವಲ್ಲದೆ, ಕೆಲವು ಹಸಿ-ಬಿಸಿ ದೃಶ್ಯಗಳಲ್ಲಿಯೂ ಸಹ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಕಿಯಾರಾ, ‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ಅವರೇ ವಿವರಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ವಿವರಿಸಿದ ಕಿಯಾರಾ
Kiara Advani
ಮಂಜುನಾಥ ಸಿ.
|

Updated on: Jul 31, 2026 | 1:29 PM

Share

ಕಿಯಾರಾ ಅಡ್ವಾಣಿ (Kiara Advani), ಬಾಲಿವುಡ್​​ನ ಸ್ಟಾರ್ ನಟಿ. ಕಿಯಾರಾ ಅವರು ಸಿನಿಮಾಗಳಲ್ಲಿ ಅತಿಯಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಮದುವೆಯಾದ ಬಳಿಕವಂತೂ ಗ್ಲಾಮರಸ್ ಪಾತ್ರಗಳಿಗೆ ನೋ ಎಂದಿದ್ದೇ ಹೆಚ್ಚು. ಆದರೆ ‘ಟಾಕ್ಸಿಕ್’ ಸಿನಿಮಾನಲ್ಲಿ ಮಾತ್ರ ಯಾವುದೇ ಮುಜುಗರಗಳಿಲ್ಲದೆ ಗ್ಲಾಮರಸ್ ಪಾತ್ರವನ್ನು ಒಪ್ಪಿಕೊಂಡಿರುವುದು ಮಾತ್ರವಲ್ಲದೆ, ಕೆಲವು ಹಸಿ-ಬಿಸಿ ದೃಶ್ಯಗಳಲ್ಲಿಯೂ ಸಹ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಕಿಯಾರಾ, ‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ಅವರೇ ವಿವರಿಸಿದ್ದಾರೆ.

‘ಫೆಮಿನಾ’ ಜೊತೆಗೆ ಮಾತನಾಡಿದ್ದ ಕಿಯಾಂಡಾ ಅಡ್ವಾಣಿ ತಾವು ‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನೆಂಬುದನ್ನು ವಿವರಿಸಿದ್ದಾರೆ. ‘ನಾನು ಕಥೆಯನ್ನು ಕೇಳಿದಾಗ, ಈ ಪಾತ್ರವನ್ನು ಎಷ್ಟು ಚೆಂದವಾಗಿ ರೂಪಿಸಲಾಗಿದೆ ಎಂದು ನೋಡಿ ಬೆರಗಾದೆ. ಇದು ಓರ್ವ ನಟ ಅಥವಾ ನಟಿ ಬಯಸುವ ಎಲ್ಲ ರೀತಿಯ ಅಂಶಗಳನ್ನು, ಆಳವಾದ ಅಭಿನಯದ ಅವಕಾಶವನ್ನು ಹೊಂದಿತ್ತು. ಇಂತಹ ಪಾತ್ರವನ್ನು ನಿರ್ವಹಿಸಲು ನನ್ನಲ್ಲಿ ಆತ್ಮವಿಶ್ವಾಸ ಮೂಡುವಂತಹ ಹಂತವನ್ನು ನನ್ನ ವೃತ್ತಿಜೀವನದಲ್ಲಿ ತಲುಪಿದ್ದೇನೆ ಎಂದು ನನಗೆನಿಸಿತು, ಹಾಗಾಗಿ ಆ ಪಾತ್ರ ಒಪ್ಪಿಕೊಂಡೆ ಎಂದಿದ್ದಾರೆ’ ಎಂದಿದ್ದಾರೆ.

ಮುಂದುವರೆದು ಮಾತನಾಡಿ, ‘ಮಹಿಳೆಯರನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಸೀಮಿತಗೊಳಿಸಿ ತೋರಿಸುವ ಪಾತ್ರಗಳು ನನಗೆ ಇಷ್ಟ ಆಗುವುದಿಲ್ಲ. ವೈಯಕ್ತಿಕವಾಗಿ ನನಗೆ ಮಹಿಳಾ ಶಕ್ತಿಯಲ್ಲಿ ನಂಬಿಕೆ ಇದೆ, ಹಾಗಿದ್ದಮೇಲೆ ನಮ್ಮ ಪಾತ್ರಗಳು ಯಾಕೆ ಹಾಗೆ ಇರಬಾರದು? ಎಂದು ಪ್ರಶ್ನಿಸಿ, ಮಹಿಳಾ ಪಾತ್ರಗಳು ಬಲವಾದ, ವಾಸ್ತವಿಕ ಹಾಗೂ ಸಂಕೀರ್ಣವಾಗಿರಬೇಕು, ಆ ಅಂಶಗಳು ‘ಟಾಕ್ಸಿಕ್’ ಸಿನಿಮಾದ ಪಾತ್ರದಲ್ಲಿ ನನಗೆ ಕಾಣಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ ಕಿಯಾರಾ.

ಇದನ್ನೂ ಓದಿ:

‘ಟಾಕ್ಸಿಕ್’ ಚಿತ್ರವನ್ನು ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಮಾತ್ರವೇ ಅಲ್ಲದೆ ತಾರಾ ಸುತಾರಿಯಾ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಯಶ್ ಈ ಸಿನಿಮಾನಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಹಾಡು, ಟೀಸರ್ ನೋಡಿದರೆ ಯಶ್ ‘ಪ್ಲೇ ಬಾಯ್’ ರೀತಿಯ ಪಾತ್ರದಲ್ಲಿ ನಟಿಸಿರುವುದು ಖಾತ್ರಿ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಾವೇರಿ ನೀರು ಹಂಚಿಕೆ ವಿವಾದ: CWMA ನಿರ್ಧಾರಕ್ಕೆ ಕುಮಾರಸ್ವಾಮಿ ಆಕ್ರೋಶ
ಕಾವೇರಿ ನೀರು ಹಂಚಿಕೆ ವಿವಾದ: CWMA ನಿರ್ಧಾರಕ್ಕೆ ಕುಮಾರಸ್ವಾಮಿ ಆಕ್ರೋಶ
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆರೋಪಕ್ಕೆ ಏನಂದ್ರು ಸಚಿವ?
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಜಾಮೀನು: ವಕೀಲ ಸುನೀಲ್ ಹೇಳಿದ್ದೇನು ನೋಡಿ
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಚಾಮರಾಜನಗರದಲ್ಲಿ ವಿಜಯ್ ಅಭಿನಯದ 'ಜನನಾಯಗನ್' ಸಿನಿಮಾ ಎತ್ತಂಗಡಿ!
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಮೂರನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲಕ್ಕೆ ವಿಶೇಷ ಅಲಂಕಾರ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ ಅಭಿಮಾನಿ
ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ ಅಭಿಮಾನಿ
KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ