ಬಿರ್ಭೂಮ್ ಹತ್ಯೆಯ ಹಿಂದೆ ಪಿತೂರಿ, ಬಿಜೆಪಿ ಆದೇಶವನ್ನು ಸಿಬಿಐ ಅನುಸರಿಸಿದರೆ ಪ್ರತಿಭಟನೆ: ಮಮತಾ ಎಚ್ಚರಿಕೆ

ಘಟನೆಯ ಬಗ್ಗೆ ಮಾತನಾಡಿದ ಬ್ಯಾನರ್ಜಿ, ಉತ್ತರ ಬಂಗಾಳದ ಆರು ದಿನಗಳ ಪ್ರವಾಸದಲ್ಲಿತೃಣಮೂಲ ಕಾರ್ಯಕರ್ತನನ್ನು ಇನ್ನೊಬ್ಬ ಪಕ್ಷದ ಕಾರ್ಯಕರ್ತ ಕೊಂದಿದ್ದಾನೆ. ಆದರೆ ಟಿಎಂಸಿಯನ್ನು ಮಾತ್ರ ಎಲ್ಲೆಡೆ ಟೀಕೆ ಮಾಡಲಾಗುತ್ತಿದೆ...

ಬಿರ್ಭೂಮ್ ಹತ್ಯೆಯ ಹಿಂದೆ ಪಿತೂರಿ, ಬಿಜೆಪಿ ಆದೇಶವನ್ನು ಸಿಬಿಐ ಅನುಸರಿಸಿದರೆ ಪ್ರತಿಭಟನೆ: ಮಮತಾ ಎಚ್ಚರಿಕೆ
ಮಮತಾ ಬ್ಯಾನರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 27, 2022 | 6:30 PM

ಬಿರ್ಭೂಮ್‌ನಲ್ಲಿ (Birbhum killings) ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಂಟು ಜನರನ್ನು ಸಜೀವ ದಹನ ಮಾಡಿದ್ದ ಪ್ರಕರಣದ ಹಿಂದೆ”ಪಿತೂರಿ” ಇದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಭಾನುವಾರ ಹೇಳಿದ್ದಾರೆ. ಸಿಬಿಐ ತನಿಖೆ ನಡೆಸುವಾಗ ಬಿಜೆಪಿಯ ಆದೇಶಗಳನ್ನು ಅನುಸರಿಸಿದರೆ ತೃಣಮೂಲ ಕಾಂಗ್ರೆಸ್  (TMC) ಪ್ರತಿಭಟಿಸಲಿದೆ ಎಂದು ಅವರು ಹೇಳಿದರು.ಉತ್ತರ ಬಂಗಾಳದ ಬಾಗ್ಡೋಗ್ರಾದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ರಾಮ್‌ಪುರಹತ್ ಘಟನೆಯ ಹಿಂದೆ ಪಿತೂರಿ ಇದೆ ಎಂದು ನಾನು ಇನ್ನೂ ಭಾವಿಸುತ್ತೇನೆ. ತನಿಖೆಯನ್ನು ಸಿಬಿಐಗೆ ವಹಿಸಿರುವುದು ಒಳ್ಳೆಯ ನಿರ್ಧಾರ. ಆದರೆ ಅವರು ಕೇವಲ ಬಿಜೆಪಿಯ ಆದೇಶಗಳನ್ನು ಅನುಸರಿಸಿದರೆ, ನಾವು ಪ್ರತಿಭಟನೆಗೆ ಸಿದ್ಧರಿದ್ದೇವೆ. ಟ್ಯಾಗೋರ್ ಅವರ ನೊಬೆಲ್ ಪ್ರಶಸ್ತಿ ಕಳ್ಳತನ, ನೇತಾಜಿ ಘಟನೆ ಮತ್ತು ತಾಪಸಿ ಮಲಿಕ್ ಪ್ರಕರಣದ ತನಿಖೆ ಸೇರಿದಂತೆ ಸಿಬಿಐ ನ್ಯಾಯ ಒದಗಿಸಲು ವಿಫಲವಾಗಿರುವುದನ್ನು ನಾವು ಹಿಂದಿನ ನಿದರ್ಶನಗಳಲ್ಲಿ ನೋಡಿದ್ದೇವೆ. ಬದಲಿಗೆ ವಿಶೇಷ ತನಿಖಾ ತಂಡವೇ ಉತ್ತಮ ತನಿಖೆ ನಡೆಸಿದೆ ಎಂದಿದ್ದಾರೆ. ಈ ವಾರದ ಆರಂಭದಲ್ಲಿ ಎಂಟು ಜನರನ್ನು ಸಜೀವ ದಹನಗೊಳಿಸಿದ ಬಿರ್ಭೂಮ್ ಬೊಗ್ಟುಯಿ ಗ್ರಾಮದಲ್ಲಿ ನಡೆದ ಹತ್ಯೆಗಳ ತನಿಖೆ ಮತ್ತು ಏಪ್ರಿಲ್ 7 ರಂದು ಅದರ ಪ್ರಾಥಮಿಕ ವರದಿಯನ್ನು ಸಲ್ಲಿಸಲು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಸಿಬಿಐಗೆ ಕೇಳಿದೆ. ಮುಂದಿನ ತನಿಖೆ ನಡೆಸಲು ಸಿಬಿಐಗೆ ಸಂಪೂರ್ಣ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಘಟನೆಯ ಬಗ್ಗೆ ಮಾತನಾಡಿದ ಬ್ಯಾನರ್ಜಿ, ಉತ್ತರ ಬಂಗಾಳದ ಆರು ದಿನಗಳ ಪ್ರವಾಸದಲ್ಲಿ, “ತೃಣಮೂಲ ಕಾರ್ಯಕರ್ತನನ್ನು ಇನ್ನೊಬ್ಬ ಪಕ್ಷದ ಕಾರ್ಯಕರ್ತ ಕೊಂದಿದ್ದಾನೆ. ಆದರೆ ಟಿಎಂಸಿಯನ್ನು ಮಾತ್ರ ಎಲ್ಲೆಡೆ ಟೀಕೆ ಮಾಡಲಾಗುತ್ತಿದೆ. ಪ್ರಕರಣದ ತನಿಖೆ ಮತ್ತು ಘಟನೆಯ ಮೂಲ ಕಾರಣವನ್ನು ತಿಳಿಯಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ತ್ರಿಪುರಾ ಮತ್ತು ಅಸ್ಸಾಂನಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಹಲವು ಸಂದರ್ಭಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಘಟನೆ ನಡೆದ ಸ್ಥಳಕ್ಕೆ ತೆರಳಲು ಅವಕಾಶ ನೀಡಿರಲಿಲ್ಲ. ಆದರೆ ಬಿರ್ಭೂಮ್ ನಲ್ಲಿ ನಾವು ಯಾವುದೇ ರಾಜಕೀಯ ಪಕ್ಷವು ಸ್ಥಳಕ್ಕೆ ಭೇಟಿ ನೀಡುವುದನ್ನು ತಡೆಯಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಿರ್ಭೂಮ್‌ ಜಿಲ್ಲೆಯ ಫುಟ್ಬಾಲ್ ಮೈದಾನದ ಬಳಿ ಕಚ್ಚಾ ಬಾಂಬ್‌ ಪತ್ತೆ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್