AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಹಲವು ಯುವಕರು ಇಸ್ಲಾಮಿಕ್ ಸ್ಟೇಟ್ಸ್​ ಸಂಘಟನೆ ಸೇರುತ್ತಿದ್ದಾರೆ; ವಿಡಿಯೋ ಬಿಡುಗಡೆ ಮಾಡಿದ ಐಎಸ್​

ಭಾರತದಲ್ಲಿ ಐಎಸ್ ಪ್ರಾಬಲ್ಯ ಕಡಿಮೆ ಮಾಡಲು ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಣೆಯನ್ನೂ ತೀವ್ರಗೊಳಿಸಿದೆ. ಗುಪ್ತಚರ ದಳಗಳ ಅಧಿಕಾರಿಗಳೊಂದಿಗೆ ಸೇರಿ ಎನ್​ಐಎ, ಭಾರತದಲ್ಲಿ ಕಳೆದ 2ವರ್ಷಗಳಲ್ಲಿ 20ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ.

ಭಾರತದಲ್ಲಿ ಹಲವು ಯುವಕರು ಇಸ್ಲಾಮಿಕ್ ಸ್ಟೇಟ್ಸ್​ ಸಂಘಟನೆ ಸೇರುತ್ತಿದ್ದಾರೆ; ವಿಡಿಯೋ ಬಿಡುಗಡೆ ಮಾಡಿದ ಐಎಸ್​
ಐಎಸ್​​ ವಿಡಿಯೋದಲ್ಲಿ ಕಾಣಿಸಿಕೊಂಡವರು
TV9 Web
| Edited By: |

Updated on:Mar 27, 2022 | 5:36 PM

Share

ಇಸ್ಲಾಮಿಕ್​ ಸ್ಟೇಟ್​ ಭಯೋತ್ಪಾದಕ ಸಂಘಟನೆ (IS) ಇತ್ತೀಚೆಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಒಟ್ಟು ಮೂರು ಭಯೋತ್ಪಾದಕ ಘಟಕಗಳ (modules)ನ್ನು ಸಿದ್ಧಪಡಿಸಲಾಗುತ್ತಿದೆ. ಮೂರು ವಿಭಿನ್ನ ಗುಂಪುಗಳಲ್ಲಿ ಇಸ್ಲಾಮಿಕ್​ ಸ್ಟೇಟ್ಸ್​​​ನ ಸದಸ್ಯತ್ವ ತೆಗೆದುಕೊಳ್ಳಲಾಗುತ್ತಿದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ಸುಮಾರು 4 ನಿಮಿಷಗಳ ವಿಡಿಯೋ ಇದಾಗಿದ್ದು, ಮಾರ್ಚ್​ 25ರಂದು ಟೆಲಿಗ್ರಾಂನಲ್ಲಿ ಬಿಡುಗಡೆಗೊಂಡಿದೆ. ಐಎಸ್​ ಹೋರಾಟಗಾರರು ಭಾರತದಲ್ಲಿ ಜಿಹಾದ್ ಪ್ರತಿಜ್ಞೆ ಮಾಡಿದ್ದಾಗಿಯೂ ಹೇಳಲಾಗಿದೆ.

ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಭಾರತದಲ್ಲಿನ ಐಎಸ್​ ಫೈಟರ್ಸ್​ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ. ವಿಡಿಯೋ ಎಡಿಟ್​ ಮಾಡಲಾಗಿದ್ದು, ಕಣ್ಣುಗಳನ್ನು ಕೂಡ ಬ್ಲರ್​ ಮಾಡಲಾಗಿದೆ. ಅಷ್ಟೇ ಅಲ್ಲ ಮಾತನಾಡುತ್ತಿರುವವರ ಸ್ವರದಲ್ಲೂ ಬದಲಾವಣೆ ಮಾಡಲಾಗಿದೆ. ಗುಪ್ತಚರ ಇಲಾಖೆಯವರು ಟ್ರ್ಯಾಕ್​ ಮಾಡಬಾರದು, ಗುರುತು ಪತ್ತೆ ಸಾಧ್ಯವಾಗಬಾರದು ಎಂಬ ಕಾರಣಕ್ಕೆ ಈ ವಿಧಾನಗಳನ್ನು ಐಎಸ್​ ಅನುಸರಿಸಿದೆ.  ಇನ್ನು ವಿಡಿಯೋದಲ್ಲಿ ಮಾತನಾಡಿದ ಐಎಸ್​ ಉಗ್ರ ಅಬು ತುರಬ್​ ಅಲ್​ ಹಿಂದಿ, ಭಾರತದಲ್ಲಿ ಹಲವು ಯುವಕರು ಇಸ್ಲಾಮಿಕ್ ಸ್ಟೇಟ್ಸ್​ ಸಂಘಟನೆ ಸೇರುತ್ತಿದ್ದಾರೆ ಎಂದು ಹೇಳಿದ್ದಾನೆ.

ಭಾರತದಲ್ಲಿ ಐಎಸ್ ಪ್ರಾಬಲ್ಯ ಕಡಿಮೆ ಮಾಡಲು ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಣೆಯನ್ನೂ ತೀವ್ರಗೊಳಿಸಿದೆ. ಗುಪ್ತಚರ ದಳಗಳ ಅಧಿಕಾರಿಗಳೊಂದಿಗೆ ಸೇರಿ ಎನ್​ಐಎ, ಭಾರತದಲ್ಲಿ ಕಳೆದ 2ವರ್ಷಗಳಲ್ಲಿ 20ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಇವರೆಲ್ಲ ಐಎಸ್​​ ಸಂಘಟನೆಯೊಟ್ಟಿಗೆ ಸಂಪರ್ಕ ಹೊಂದಿರುವವರಾಗಿದ್ದರು. ಇವರನ್ನೆಲ್ಲ ಬಂಧಿಸುವ ಮೂಲಕ ಐಎಸ್​ ಯೋಜನೆಯನ್ನು ವಿಫಲಗೊಳಿಸಲಾಗುತ್ತಿದೆ.  ಮಾರ್ಚ್​ 25ರಂದು ಬಿಡುಗಡೆಯಾಗಿರುವ ವಿಡಿಯೋವನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಪ್ರಕಾರ ಕಾಶ್ಮೀರದಲ್ಲಿಯೇ ಈ ವಿಡಿಯೋ ಚಿತ್ರೀಕರಣವಾಗಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಇದನ್ನು ಬಿಡುಗಡೆ ಮಾಡಿದ್ದು ಪಾಕಿಸ್ತಾನದಿಂದ ಎಂಬುದನ್ನು ಸೈಬರ್​ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Tilak Varma: ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಐಪಿಎಲ್​ಗೆ ಪದಾರ್ಪಣೆ ಮಾಡಿದ ಬಡ ಪ್ರತಿಭೆ

Published On - 5:32 pm, Sun, 27 March 22

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?