ಬಹ್ರೇನ್‌ನಲ್ಲಿ ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಿದ ಭಾರತೀಯ ರೆಸ್ಟೋರೆಂಟ್ ಬಂದ್: ವರದಿ
ಹಿಜಾಬ್ ಧರಿಸಿದ್ದ ಮಹಿಳೆಯನ್ನು ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರು ತಡೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಬಹ್ರೇನ್ ಸುದ್ದಿವಾಹಿನಿಗಳು ವರದಿ ಮಾಡಿವೆ.
ಇಸ್ಲಾಮಿಕ್ ದೇಶವಾದ ಬಹ್ರೇನ್‌ನ (Bahrain) ಅದ್ಲಿಯಾದಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಲ್ಲಿ(Indian restaurant) ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಆ ರೆಸ್ಟೋರೆಂಟ್ ಮುಚ್ಚಿದ್ದಾರೆ ಎಂದು ಗಲ್ಫ್ ಡೈಲಿ ನ್ಯೂಸ್ ವರದಿ ಮಾಡಿದೆ. ಘಟನೆಗೆ ವಿಷಾದ ವ್ಯಕ್ತಪಡಿಸಿ ರೆಸ್ಟೋರೆಂಟ್‌ನ ಆಡಳಿತವು ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚನೆಯ ಹೇಳಿಕೆಯನ್ನು ನೀಡಿದೆ. ಕರ್ತವ್ಯದಲ್ಲಿದ್ದ ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಡ್ಯೂಟಿ ಮ್ಯಾನೇಜರ್ ಒಬ್ಬ ಭಾರತೀಯ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹಿಜಾಬ್ ಧರಿಸಿದ್ದ ಮಹಿಳೆಯನ್ನು ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರು ತಡೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಬಹ್ರೇನ್ ಸುದ್ದಿವಾಹಿನಿಗಳು ವರದಿ ಮಾಡಿವೆ. ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರವು (Bahrain Tourism and Exhibition Authority) ತನಿಖೆಯನ್ನು ಪ್ರಾರಂಭಿಸಿದೆ ಮತ್ತು ರಾಜ್ಯದ ಕಾನೂನುಗಳನ್ನು ಉಲ್ಲಂಘಿಸುವ ಯಾವುದೇ ನೀತಿಯನ್ನು ತಪ್ಪಿಸಲು ಎಲ್ಲಾ ಪ್ರವಾಸೋದ್ಯಮ ಮಳಿಗೆಗಳನ್ನು ಕೇಳಿದೆ. ರೆಸ್ಟೋರೆಂಟ್ ಆಡಳಿತವು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದೆ ಮತ್ತು ಈ ಘಟನೆಯು ಅಧಿಕಾರಿಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದೆ.
“ಬಹ್ರೇನ್‌ನ ಸುಂದರ ಸಾಮ್ರಾಜ್ಯದಲ್ಲಿ ನಾವು 35 ವರ್ಷಗಳಿಗೂ ಹೆಚ್ಚು ಕಾಲ ಎಲ್ಲಾ ದೇಶದವರಿಗೆ ಸೇವೆ ಸಲ್ಲಿಸುತ್ತಿದ್ದು ಪ್ರತಿಯೊಬ್ಬರಿಗೂ ಲ್ಯಾಂಟರ್ನ್ಸ್ಗೆ ಸ್ವಾಗತವಿದೆ. ಲ್ಯಾಂಟರ್ನ್ಸ್ ಪ್ರತಿಯೊಬ್ಬರೂ ತಮ್ಮ ಕುಟುಂಬಗಳೊಂದಿಗೆ ಆನಂದಿಸಲು ಮತ್ತು ಮನೆಯ ವಾತಾವರಣದಿಂತಿರುವ ಒಂದು ಸ್ಥಳವಾಗಿದೆ. . ಈ ನಿದರ್ಶನದಲ್ಲಿ, ಈಗ ಅಮಾನತುಗೊಂಡಿರುವ ನಿರ್ವಾಹಕರಿಂದ ತಪ್ಪಾಗಿದೆ, ಏಕೆಂದರೆ ಇದು ನಾವು ಯಾರೆಂಬುದನ್ನು ಪ್ರತಿನಿಧಿಸುವುದಿಲ್ಲ. ನಮ್ಮ ಎಲ್ಲಾ ಬಹ್ರೇನ್ ಪೋಷಕರನ್ನು ಮಾರ್ಚ್ 29 ರ ಮಂಗಳವಾರದಂದು ಲ್ಯಾಂಟರ್ನ್ಸ್ನಲ್ಲಿ ಕಾಂಪ್ಲಿಮೆಂಟರಿ ಭೋಜನ ಸವಿಯಲು ನಾವು ಸ್ವಾಗತಿಸುತ್ತೇವೆ. ”ಎಂದು ಪ್ರಸ್ತುತ ರೆಸ್ಟೋರೆಂಟ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ.
View this post on Instagram
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಗದ್ದಲದ ನಡುವೆ ಈ ಘಟನೆಯು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ನ ಮೇಲಿನ ರಾಜ್ಯ ಸರ್ಕಾರದ ನಿಷೇಧವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ ಮತ್ತು ಇಸ್ಲಾಮಿಕ್ ಆಚರಣೆಗೆ ಹಿಜಾಬ್ ಅನಿವಾರ್ಯವಲ್ಲ ಎಂದು ಹೇಳಿದೆ.
ಇದನ್ನೂ ಓದಿ: ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ, ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ -ಶಾಸಕ ಎಂ.ಪಿ.ರೇಣುಕಾಚಾರ್ಯ