ಪಾಕಿಸ್ತಾನ: ನಿರ್ಣಾಯಕ ಅವಿಶ್ವಾಸ ಮತಕ್ಕೆ ಮುನ್ನ ಇಮ್ರಾನ್ ಖಾನ್ ಸರ್ಕಾರದಿಂದ ಹೊರಬಂದ ಬಲೂಚ್ ಮಿತ್ರಪಕ್ಷ
ವಿದೇಶಾಂಗ ಸಚಿವ ಶಾಹ ಮೆಹಮೂದ್ ಖುರೇಶಿ ಶುಕ್ರವಾರದಂದು ಆಡಳಿತ ರೂಢ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಪ್ರಮುಖ ಮಿತ್ರಪಕ್ಷಗಳಾಗಿರುವ ಎಮ್ ಕ್ಯೂ ಎಮ್-ಪಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ಕೈದ್ (ಪಿ ಎಮ್ ಎಲ್-ಕ್ಯೂ) ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ನೇತೃತ್ವದ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮಿತ್ರಪಕ್ಷವಾಗಿರುವ ಜಮೂರಿ ವತನ್ ಪಕ್ಷದ ಕ್ಯಾಬಿನೆಟ್ ಸದಸ್ಯರೊಬ್ಬರು ಅವಿಶ್ವಾಸ ಮತಕ್ಕೆ ಒಂದು ದಿನ ಮೊದಲು ರಾಜೀನಾಮೆ ನೀಡಿದ್ದಾರೆ. ಬಲೂಚಿಸ್ತಾನದಲ್ಲಿ ಸೌಹಾರ್ದತೆ ಮತ್ತು ಸಮನ್ವಯಕ್ಕಾಗಿ ಪ್ರಧಾನಮಂತ್ರಿಗಳ (SAPM) ವಿಶೇಷ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಶಹಜೈನ್ ಬುಗ್ತಿ(Shahzain Bugti) ಅವರು ರಾಜೀನಾಮೆ ನೀಡಿದ್ದಾರೆ. ಬುಗ್ತಿ ಅವರು ಇಮ್ರಾನ್ ಖಾನ್ ಆಡಳಿತವನ್ನು ವಿರೋಧಿಸುವ ರಾಜಕೀಯ ಒಕ್ಕೂಟವಾದ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್‌ಗೆ (Pakistan Democratic Movement)ಸೇರಿದ್ದಾರೆ. 2006ರಲ್ಲಿ ಬಲೂಚಿಸ್ತಾನದ ಕೊಹ್ಲು ಪಟ್ಟಣದಲ್ಲಿ ಪಾಕಿಸ್ತಾನ ಸೇನೆಯಿಂದ ಹತ್ಯೆಗೀಡಾದ ಬಲೂಚ್ ಚಳವಳಿಯ ಪ್ರಮುಖ ನಾಯಕ ಅಕ್ಬರ್ ಬುಗ್ತಿ ಅವರ ಮೊಮ್ಮಗ ಈ ಶಹಜೈನ್ ಬುಗ್ತಿ. ಇಸ್ಲಾಮಾಬಾದ್‌ನಲ್ಲಿ ಇಮ್ರಾನ್ ಖಾನ್ ಅವರ ಮಹತ್ವದ ರ್ಯಾಲಿಗೆ ಕೆಲವೇ ಕ್ಷಣಗಳ ಮೊದಲು ಮಿತ್ರಪಕ್ಷದ ಸಚಿವರು ರಾಜೀನಾಮೆ ನೀಡಲಾಗಿದೆ. ಪಿಟಿಐ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಅವಿಶ್ವಾಸ ಮಂಡಿಸುವ ಮುನ್ನವೇ ಪ್ರಧಾನಮಂತ್ರಿಯವರ ಶಕ್ತಿ ಪ್ರದರ್ಶನ ಎಂದು ಈ ರ್ಯಾಲಿಯನ್ನು ನೋಡಲಾಗುತ್ತಿದೆ. 342 ಸದಸ್ಯರ ವಿಧಾನಸಭೆಯಲ್ಲಿ ಸರ್ಕಾರವನ್ನು ತೆಗೆದುಹಾಕಲು ಅಗತ್ಯವಿರುವ 172 ಶಾಸಕರನ್ನು ಹೊಂದಿದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿವೆ. ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ನಿರ್ಧರಿಸಿದ್ದರೆ, ಖಾನ್ ರಾಷ್ಟ್ರೀಯ ಅಸೆಂಬ್ಲಿಗೆ ಘೇರಾವ್ ಮಾಡಲು ಮತ್ತು ಸದಸ್ಯರನ್ನು ಒಳಗೆ ಹೋಗಲು ಬಿಡದಂತೆ ತಮ್ಮ ಬೆಂಬಲಿಗರಲ್ಲಿ ಕೇಳಿಕೊಂಡಿದ್ದಾರೆ.
ಆದಾಗ್ಯೂ, ಪಾಕಿಸ್ತಾನ ಸರ್ಕಾರದ 50 ಫೆಡರಲ್ ಮಂತ್ರಿಗಳು ನಾಪತ್ತೆಯಾಗಿದ್ದಾರೆ ಎಂದು ಪಾಕಿಸ್ತಾನದ ದೈನಿಕ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ನಾಪತ್ತೆಯಾಗಿರುವ ಪಾಕಿಸ್ತಾನದ ಮಂತ್ರಿಗಳಲ್ಲಿ 25 ಮಂದಿ ಫೆಡರಲ್ ಮತ್ತು ಪ್ರಾಂತೀಯ ಸಲಹೆಗಾರರು ಮತ್ತು ವಿಶೇಷ ಸಹಾಯಕರಾಗಿದ್ದರೆ, ಅವರಲ್ಲಿ ನಾಲ್ವರು ರಾಜ್ಯದ ಮಂತ್ರಿಗಳು, ನಾಲ್ವರು ಸಲಹೆಗಾರರು ಮತ್ತು 19 ವಿಶೇಷ ಸಹಾಯಕರು ಆಗಿದ್ದಾರೆ.
ಖಾನ್ ಅವರು 2018 ರಲ್ಲಿ ‘ನಯಾ ಪಾಕಿಸ್ತಾನ’ ರಚಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದರು ಆದರೆ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸುವಲ್ಲಿ ವಿಫಲವಾದ ಬಗ್ಗೆ ಪ್ರತಿಪಕ್ಷಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಅಷ್ಟಾಗಿಯೂ ಕೇಂದ್ರೀಯ ಹಂತದಲ್ಲಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಸಚಿವರ ಬೆಂಬಲವಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ ಮೆಹಮೂದ್ ಖುರೇಶಿ, ವಾರ್ತಾ ಸಚಿವ ಫಾವದ್ ಚೌಧುರಿ, ಇಂಧನ ಖಾತೆ ಸಚಿವ ಹಮ್ಮದ್ ಅಝರ್, ರಕ್ಷಣಾ ಸಚಿವ ಪರ್ವೆಜ್ ಖತ್ತಕ್, ಆಂತರಿಕ ಸಚಿವ ಶೇಖ್ ರಶೀದ್ ಮೊದಲಾದವರೆಲ್ಲ ಈಗಲೂ ಇಮ್ರಾನ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ಏತನ್ಮಧ್ಯೆ, ಪಾಕಿಸ್ತಾನದ ಪ್ರಧಾನಿ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಯು ಮಾರ್ಚ್ 28ಕ್ಕೆ ಮುಂದೂಡಲ್ಪಟ್ಟ ಬಳಿಕ ತೆಹ್ರೀಕ್-ಎ-ಇನ್ಸಾಫ್ ಪಕ್ಷದಿಂದ ಮಿತ್ರಪಕ್ಷಗಳನ್ನು ಓಲೈಸುವ ಕಾರ್ಯ ತೀವ್ರಗೊಂಡಿದೆ.
ಮೂಲಗಳ ಪ್ರಕಾರ ಮುತ್ತಹಿದಾ ಕ್ವಾಮಿ ಮೂವ್ಮೆಂಟ್-ಪಾಕಿಸ್ತಾನ (ಎಮ್ ಕ್ಯೂ ಎಮ್-ಪಿ) ಪಕ್ಷದ ನಿಯೋಗವೊಂದು ಶನಿವಾರ ಸಾಯಂಕಾಲ ಪಾಕಿಸ್ತಾನದ ಪ್ರಧಾನ ಮಂತ್ರಿ ಅವರೊಂದಿಗೆ ಸಭೆ ನಡೆಸುವುದು ನಿಗದಿಯಾಗಿತ್ತು.
ವಿದೇಶಾಂಗ ಸಚಿವ ಶಾಹ ಮೆಹಮೂದ್ ಖುರೇಶಿ ಶುಕ್ರವಾರದಂದು ಆಡಳಿತ ರೂಢ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಪ್ರಮುಖ ಮಿತ್ರಪಕ್ಷಗಳಾಗಿರುವ ಎಮ್ ಕ್ಯೂ ಎಮ್-ಪಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ಕೈದ್ (ಪಿ ಎಮ್ ಎಲ್-ಕ್ಯೂ) ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.
ಕುರೇಶಿ ಅವರು ಅಸರ್ ಉಮರ್ ಮತ್ತು ಪರ್ವೇಜ್ ಖತ್ತಕ್ ಅವರೊಂದಿಗೆ ಎಮ್ ಕ್ಯೂ ಎಮ್ ನಿಯೋಗವನ್ನು ಭೇಟಿಯಾದರು. ಪಿ ಎಮ್ ಎಲ್-ಕ್ಯೂ ಪಕ್ಷದ ನಾಯಕ ಚೌಧುರಿ ಪರ್ವೇಜ್ ಇಲಾಹಿ ಅವರೊಂದಿಗೆ ಖುರೇಶಿ ಟೆಲಿಫೋನ್ ಸಂಭಾಷಣೆ ನಡೆಸಿದರು.
ಇದಕ್ಕೂ ಮೊದಲು ಅಂದರೆ ಗುರುವಾರದಂದು ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕರು ಎಮ್ ಕ್ಯೂ ಎಮ್ ನಾಯಕರೊಂದಿಗೆ ಮಾತುಕತೆ ನಡೆಸಿ ಮಿತ್ರಪಕ್ಷಗಳೆಲ್ಲ ಸರ್ಕಾರಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಲಿವೆ ಮತ್ತು ವೋಟಿಂಗ್ ದಿನದಂದು ನ್ಯಾಶನಲ್ ಅಸೆಂಬ್ಲಿಯಲ್ಲಿ ಪಾಕಿಸ್ತಾನದ ಪ್ರಧಾನಿ ಪರ ವೋಟು ಮಾಡಲಿವೆ ಎಂದು ಮನದಟ್ಟು ಮಾಡಿಸಿದರು ಎಂದು ವರದಿಯಾಗಿದೆ.
ಪಾಕಿಸ್ತಾನ ನ್ಯಾಶನಲ್ ಅಸೆಂಬ್ಲಿಯ ಒಟ್ಟು ಸದಸ್ಯ ಬಲ 342 ಅಗಿದ್ದು, ಬಹುಮತ ಹೊಂದಲು 179 ಸ್ಥಾನಗಳನ್ನು ಹೊಂದಿರಬೇಕು. ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನೇತೃತ್ವದಲ್ಲಿ 179 ಸದಸ್ಯರನ್ನೊಳಗೊಂಡ ಸಮ್ಮಿಶ್ರ ಸರ್ಕಾರವನ್ನು ರಚಿಸಲಾಗಿದೆ.
ಇಮ್ರಾನ್ ಅವರ ತೆಹ್ರೀಕ್-ಎ-ಇನ್ಸಾಫ್ ಪಕ್ಷ 155 ಸದಸ್ಯರನ್ನು ಹೊಂದಿದ್ದರೆ, ಅದರ ನಾಲ್ಕು ಪ್ರಮುಖ ಮಿತ್ರಪಕ್ಷಗಳಾದ ಎಮ್ ಕ್ಯೂ ಎಮ್-ಪಿ, ಪಿ ಎಮ್ ಎಲ್-ಕ್ಯೂ, ಬಲೂಚಿಸ್ತಾನ ಅವಾಮಿ ಪಾರ್ಟಿ (ಬಿಎಪಿ), ಮತ್ತು ಗ್ರ್ಯಾಂಡ್ ಡಮೆಕ್ರ್ಯಾಟಿಕ್ ಅಲಯನ್ಸ್ ಕ್ರಮವಾಗಿ ಏಳು, ಐದು, ಐದು ಮತ್ತು ಮೂರು ಸದಸ್ಯರನ್ನು ಹೊಂದಿವೆ.ಅವಿಶ್ವಾಸ ನಿರ್ಣಯದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ
ಇದನ್ನೂ ಓದಿ: ‘ನಾನು ಪಾಕಿಸ್ತಾನದಲ್ಲೂ ಇಲ್ಲ, ಭಾರತದಲ್ಲೂ ಇಲ್ಲ’; ಕಬೀರ್ ಖಾನ್ ಬೇಸರದ ಮಾತು
Published On - 5:07 pm, Sun, 27 March 22