ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ, ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ -ಶಾಸಕ ಎಂ.ಪಿ.ರೇಣುಕಾಚಾರ್ಯ

ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಎಂ.ಪಿ‌.ರೇಣುಕಾಚಾರ್ಯ, ನನ್ನ ಪುತ್ರಿ 9ನೇ ತರಗತಿ ಇರುವಾಗ ನನ್ನ ಸಹೋದರನ ಸಹಿ ಮಾಡಿಸಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ನನಗೆ ಪರಿಶಿಷ್ಟ ಜಾತಿ ಪ್ರಮಾಣದ ಅಗತ್ಯವಿಲ್ಲ. ನಾನೊಬ್ಬ ಜಾತ್ಯತೀತ ವ್ಯಕ್ತಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚೇತನಾ ಹಿರೇಮಠ ಎನ್ನುವರಿಗೆ 40 ಲಕ್ಷ ಸಹಾಯ ಧನ ನೀಡಲಾಗಿದೆ ಎಂದರು.

ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ, ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ -ಶಾಸಕ ಎಂ.ಪಿ.ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 29, 2022 | 9:54 PM

ಬೆಂಗಳೂರು: ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ. ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ ಎಂದು ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಬಗ್ಗೆ ಯಾವುದೇ ಆರೋಪ ಮಾಡಿದ್ರೂ ಸಹಿಸಿಕೊಳ್ಳುತ್ತೇನೆ. ನನ್ನ ಮಗಳನ್ನ ಈ ವಿವಾದದಲ್ಲಿ ಎಳೆದು ತರುವುದನ್ನ ನಾನು ಸಹಿಸಲ್ಲ ಎಂದಿದ್ದಾರೆ.

ಶಾಸಕ ರೇಣುಕಾಚಾರ್ಯ ಪುತ್ರಿಯ ಜಾತಿ ಪ್ರಮಾಣ ಪತ್ರದ ವಿವಾದ ಇನ್ನಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ. ಸ್ವಪಕ್ಷದ ಶಾಸಕರೇ ರೇಣುಕಾಚಾರ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಬಿಜೆಪಿ ಜಿಲ್ಲಾ ಕೋರ್ ಕಮಿಟಿಯಲ್ಲಿ ಸಹ ಈ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಆದ್ರೆ ನನ್ನ ಪುತ್ರಿ ಒಂಬತ್ತನೇ ತರಗತಿ ಓದುತ್ತಿರುವಾಗ ಸಹೋದರ ಸಹಿ ಮಾಡಿಸಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದಾನೆ ಎಂಬುದು ರೇಣುಕಾಚಾರ್ಯ ವಾದ. ಆದ್ರೆ ಜಾತಿ ಹೆಸರಿನಲ್ಲಿ ಆ ನಾಲ್ವತ್ತು ಲಕ್ಷ ಹಣ ಎಲ್ಲಿ ಎಂಬ ಹತ್ತಾರು ಸಂಶಯಗಳು ರೇಣುಕಾಚಾರ್ಯ ಸುತ್ತ ಸುತ್ತಿಕೊಳ್ಳುತ್ತಿವೆ. ಈಗ ಶಾಸಕ ರೇಣುಕಾಚಾರ್ಯ ಜಾತಿ ಜಗಳದ ಕೇಂದ್ರ ಬಿಂದು ಆಗಿದ್ದಾರೆ.

ಬಿಜೆಪಿ ಶಾಸಕ ಎಂ. ಪಿ.ರೇಣುಕಾಚಾರ್ಯ ಹುಟ್ಟೂರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು. ತಂದೆ ಪಚಾಂಕ್ಷರಯ್ಯ ಅಂತಾ ಶಾಲಾ ಶಿಕ್ಷಕ. ಕುಂದೂರು ಸರ್ಕಾರಿ ಶಾಲೆಯಲ್ಲಿ ಶಾಸಕ ರೇಣುಕಾಚಾರ್ಯ ಓದಿದ್ದು. ಅವರ ಜಾತಿ ಕಾಲಂ ನಲ್ಲಿ ಹಿಂದು ಲಿಂಗಾಯತ ಅಂತಿದೆ. ಆದ್ರೆ ಶಾಸಕ ರೇಣುಕಾಚಾರ್ಯ ಪುತ್ರಿ ಎಂ.ಆರ್ ಚೇತನಾಗೆ ಸೇರಿದ ಜಾತಿ ಪ್ರಮಾಣ ಪತ್ರದಲ್ಲಿ ಬೇಡ ಜಂಗಮಾ ಅಂತಿದೆ. ಇದನ್ನ ಬೆಂಗಳೂರು ಉತ್ತರಹಳ್ಳಿ ತಹಶೀಲ್ದಾರ ನೀಡಿದ್ದು. ಬೇಡ ಜಂಗಮ ಅಂದ್ರೆ ಪರಿಶಿಷ್ಟ ಬೇಡ ಜಂಗಮ ಅಂದ್ರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ. ಇದೇ ಈಗ ರಾಜ್ಯದಲ್ಲಿ ಚರ್ಚೆ ಆಗತ್ತಿರುವುದು. ತಂದೆ ಲಿಂಗಾಯತ ಆದ್ರೆ ಪುತ್ರಿ ಎಸ್ಸಿ ಹೇಗೆ ಆದಳು ಎಂಬ ಪ್ರಶ್ನೆ ಪ್ರತಿಯೊಬ್ಬರನ್ನ ಕಾಡುತ್ತಿದೆ. ಮೂರು ಸಲ ಶಾಸಕ ಒಮ್ಮೆ ಸಚಿವ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಆಗಿರುವ ರೇಣುಕಾಚಾರ್ಯ ಅಧಿಕಾರ ಅನುಭವಿಸಿದ್ದಾರೆ. ಸಾವಿರಾರರ ಕೋಟಿ ಅನುದಾನ ತಮ್ಮ ಹೊನ್ನಾಳಿ ಕ್ಷೇತ್ರಕ್ಕೆ ತಂದಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಅಧಿಕಾರಿ ವರ್ಗಾವಣೆ ಆಗಬೇಕಿದ್ದರೇ ಅದನ್ನ ರೇಣುಕಾಚಾರ್ಯ ಅವರ ಮುದ್ರೆ ಬೇಕೆ ಬೇಕು. ಇಂತಹ ಜನ ಪ್ರತಿನಿಧಿ ಹಾಲಿ ಶಾಸಕ ಜೊತೆಗೆ ಮುಖ್ಯಮಂತ್ರಿಗಳು ರಾಜಕೀಯ ಕಾರ್ಯದರ್ಶಿ. ಇದು ಸಂಪುಟ ದರ್ಜೆಯ ಸ್ಥಾನ ಮಾನ. ಹೀಗೆ ಬಿಜೆಪಿ ಸರ್ಕಾರ ಇದ್ದಾಗಲೆಲ್ಲಾ ಪ್ರಭಾವಿ ಆಗಿಯೇ ಇರುವ ರೇಣುಕಾಚಾರ್ಯ ಈಗ ಬೇಡ ಜಂಗಮ ಜಗಳದಲ್ಲಿ ಸಿಲುಕಿದ್ದಾರೆ. ಮೇಲಾಗಿ ಪುತ್ರಿಯ ಎಸ್ಸಿ ಪ್ರಮಾಣ ಪತ್ರ ಬಳಸಿ 40 ಲಕ್ಷ ರೂಪಾಯಿ ಎಸ್ಸಿ ಎಸ್ಟಿ ನಿಗಮದಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ವಿಚಾರದ ಬಗ್ಗೆ ರೇಣುಕಾಚಾರ್ಯ ಹೇಳುತ್ತಲೇ ಇದ್ದಾರೆ. ಇದರಲ್ಲಿ ತಪ್ಪು ಅಂತಾ ಗೊತ್ತಾದ್ರೇ ನೇಣಿಗೆ ಹಾಕಿ ಎಂದು. ಜೊತೆಗೆ ಆ 40 ಲಕ್ಷ ರೂಪಾಯಿ ಹಣ ಬೆಳಗಾವಿ ಮೂಲದ ಚೇತನಾ ಹಿರೇಮಠ ಎನ್ನುವರಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕೊಡಲಾಗಿದೆ. ಅದು ನನ್ನ ಮಗಳದ್ದಲ್ಲ. ಆರೋಪ ಮಾಡಿದ ಕೆಪಿಸಿಸಿ ವಕ್ತಾರ ಮೈಸೂರಿನ ಲಕ್ಷ್ಮಣಮೊಕದ್ದಮೆ ಹಾಕಲು ರೇಣು ನಿರ್ಧರಿಸಿದ್ದಾರೆ.

ಇಷ್ಟು ದಿನ ಈ ವಿಚಾರದ ಬಗ್ಗೆ ಪ್ರತಿಪಕ್ಷಗಳು ಹಾಗೂ ದಲಿತ ಸಂಘಟನೆಗಳು ಸೇರಿ ರೇಣುಕಾಚಾರ್ಯ ಅವರ ಪುತ್ರಿಯ ಜಾತಿ ಪ್ರಮಾಣ ಪತ್ರದ ವಿಚಾರವಾಗಿ ಹೇಳಿಕೆ ಹಾಗೂ ಹೋರಾಟ ನಡೆಸುತ್ತಿವೆ. ಆದ್ರೆ ಈಗ ಬಿಜೆಪಿ ಪಕ್ಷದ ಶಾಸಕರೇ ರೇಣುಕಾಚಾರ್ಯ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಇದು ರೇಣುಕಾಚಾರ್ಯ ಅವರಿಗೆ ಬಿಸಿ ತುಪ್ಪವಾಗಿದೆ. ಅಣ್ಣ ಮಾಡಿದ ತಪ್ಪಿಗೆ ರೇಣುಕಾಚಾರ್ಯ ಸಂಕಟಕ್ಕೆ ಸಿಕ್ಕಿಕೊಂಡಿದ್ದಾರೆ. ಜೊತೆಗೆ ನನಗೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುವ ಅವಕಾಶವಿತ್ತು. ಆದ್ರೆ ತೆಗೆದುಕೊಂಡಿಲ್ಲ ಎಂದು ಕೂಡಾ ಹೇಳಿದ್ದಾರೆ. ಆದ್ರೆ ಬಿಜೆಪಿ ಶಾಸಕರು ರೇಣುಕಾಚಾರ್ಯ ಅವರ ಪುತ್ರಿ ಹಾಗೂ ಸಹೋದರು ಪಡೆದ ಜಾತಿ ಪ್ರಮಾಣ ಪತ್ರವನ್ನ ವಾಪಸ್ಸು ಪಡೆಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಎನ್ ಲಿಂಗಣ್ಣ ಅವರು ರೇಣುಕಾಚಾರ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಜಾತಿ ಪ್ರಮಾಣ ಪತ್ರ ವಾಪಸ್ಸು ಪಡೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಹೀಗೆ ಪದೇ ಪದೇ ಪುತ್ರಿಯ ಜಾತಿ ವಿಚಾರ ಚರ್ಚೆ ಆಗುತ್ತಿದ್ದಂತೆ ರೇಣುಕಾಚಾರ್ಯ ಸ್ವಲ್ಪ ಹೊತ್ತು ಭಾವುಕರಾಗಿದ್ದರು. ಮೇಲಾಗಿ ಈಗ ಸ್ವಪಕ್ಷದವರೇ ಲಿಂಗಾಯತ ಎಂದು ಶಾಲಾ ದಾಖಲಾತಿಯಲ್ಲಿ ಇದೆ. ಆದ್ರೆ ಪುತ್ರಿಗೆ ಬೇಡ ಜಂಗಮ ಎಂದು ಯಾಕೆ ಪ್ರಮಾಣ ಪತ್ರ ಪಡೆಯಲಾಗಿದೆ. ಈ ಬಗ್ಗೆ ಉತ್ತರ ರೇಣುಕಾಚಾರ್ಯ ಅವರ ಬಳಿ ಇಲ್ಲಾ. ಈಗಾಗಲೇ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ. ನನ್ನಿಂದತಪ್ಪಾಗಿಲ್ಲ ಅದು ನಮ್ಮ ಸಹೋದರ ಮಾಡಿದ್ದು ಎಂಬ ಬೇಜವಾಬ್ದಾರಿ ಹೇಳಿಕೆ ಅವರ ಮೇಲೆ ಮಾನನಷ್ಟನೀಡುತ್ತಾ ಸುತ್ತುತ್ತಿರುವುದೆ ನಾನಾ ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ದಾವಣಗೆರೆಯಲ್ಲಿ ಈಗ ಜಂಗಮ ಜಗಳ ಸುರುವಾಗಿದೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಇದನ್ನೂ ಓದಿ: ರಾಜ್ಯದಲ್ಲಿ ಮದರಸಾ ಶಾಲೆ ಬ್ಯಾನ್ ಮಾಡಬೇಕು, ಅಲ್ಲಿ ಮಕ್ಕಳಿಗೆ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ ಆರೋಪ

ಪ್ರತಿ ವರ್ಷ ಮಾರ್ಚ್ 16ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ; ರಾಜ್ಯ ಸರ್ಕಾರದಿಂದ ಆದೇಶ ಪ್ರಕಟ

Published On - 7:35 pm, Sun, 27 March 22