ರಾಜ್ಯದಲ್ಲಿ ಮದರಸಾ ಶಾಲೆ ಬ್ಯಾನ್ ಮಾಡಬೇಕು, ಅಲ್ಲಿ ಮಕ್ಕಳಿಗೆ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ ಆರೋಪ

BJP MLA MP Renukacharya: ಹೊನ್ನಾಳಿಯ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌. ರೇಣುಕಾಚಾರ್ಯ ಅವರು ಮದರಸಾ ಶಾಲೆಗಳನ್ನ ಬ್ಯಾನ್ ಮಾಡಬೇಕು. ಅಲ್ಲಿ ಎಳೆ ಮಕ್ಕಳಿಗೆ ದೇಶ ದ್ರೋಹದ ಪಾಠ ಮಾಡಲಾಗುತ್ತದೆ. ಅವರು ಮುಂದೆ ಭಾರತ್ ಮಾತಾ ಕೀ ಜೈ ಅನ್ನಲ್ಲ ಎಂದು ಹೊನ್ನಾಳಿಯಲ್ಲಿ ಆಗ್ರಹ ಪಡಿಸಿದ್ದಾರೆ.

ರಾಜ್ಯದಲ್ಲಿ ಮದರಸಾ ಶಾಲೆ ಬ್ಯಾನ್ ಮಾಡಬೇಕು, ಅಲ್ಲಿ ಮಕ್ಕಳಿಗೆ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ ಆರೋಪ
ರಾಜ್ಯದಲ್ಲಿ ಮದರಸಾ ಶಾಲೆಗಳನ್ನ ಬ್ಯಾನ್ ಮಾಡಬೇಕು, ಅಲ್ಲಿ ಮಕ್ಕಳಿಗೆ ದೇಶ ದ್ರೋಹದ ಪಾಠ ಮಾಡಲಾಗುತ್ತಿದೆ: ಎಂ.ಪಿ‌. ರೇಣುಕಾಚಾರ್ಯ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 26, 2022 | 1:54 PM

ದಾವಣಗೆರೆ: ರಾಜ್ಯದಲ್ಲಿ ಹಿಜಾಬ್​ನಿಂದ ಶುರುವಾಗಿ ಮುಂದೆ ಅಂಗಡಿಮುಂಗಟ್ಟುಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಕೊಡುವುದಿಲ್ಲ ಎಂಬ ವಿಚಾರ ಬಂದಿದೆ. ಈ ಮಧ್ಯೆ, ಅನೇಕ ವಾದ ವಿವಾದಗಳು ಹುಟ್ಟುಕೊಂಡವರು. ರಾಜಕೀಯ ಮುಖಂಡರು ನಾನಾ ವಿವಾದಿತ ಹೇಳಿಕೆಗಳು ನೀಡಿದರು. ಇದೇ ಪ್ರವೃತ್ತಿ ಮುಂದುವರಿದಿದ್ದು (Madrasa School) ಇದೀಗ ಹೊನ್ನಾಳಿಯ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌. ರೇಣುಕಾಚಾರ್ಯ ಅವರು (BJP MLA MP Renukacharya) ಮದರಸಾ ಶಾಲೆಗಳನ್ನ ಬ್ಯಾನ್ ಮಾಡಬೇಕು. ಅಲ್ಲಿ ಎಳೆ ಮಕ್ಕಳಿಗೆ ದೇಶ ದ್ರೋಹದ ಪಾಠ ಮಾಡಲಾಗುತ್ತದೆ. ಅವರು ಮುಂದೆ ಭಾರತ್ ಮಾತಾ ಕೀ ಜೈ ಅನ್ನಲ್ಲ ಎಂದು ಹೊನ್ನಾಳಿಯಲ್ಲಿ ಆಗ್ರಹ ಪಡಿಸಿದ್ದಾರೆ.

ರಾಜ್ಯದಲ್ಲಿ ಶಾಲೆಗಳು ಇಲ್ಲವಾ? ಮದರಸಾದಲ್ಲಿ ಎನು ಪಾಠ ಮಾಡಲಾಗುತ್ತದೆ? ಮುಖ್ಯಮಂತ್ರಿಗಳು ಮದರಸಾಗಳನ್ನ ಬ್ಯಾನ್ ಮಾಡಬೇಕು. ಹಿಜಾಬ್ ವಿವಾದ ಹುಟ್ಟಿಸಿದ್ದು ಜಮೀರ್ ಅಹ್ಮದ್, ಖಾದರ್ ಹಾಗೂ ಇತರ ದೇಶ ದ್ರೋಹಿ ಸಂಘಟನೆಗಳು. ರಾಜ್ಯದಲ್ಲಿ ಈಗಾಗಲೇ ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಈ ನೆಲದ ಕಾನೂನಿಗೆ ಪ್ರತಿಯೊಬ್ಬರು ಬೆಲೆ ಕೊಡಬೇಕು. ಆದರೂ ಸದನದಲ್ಲಿ ಕಾಂಗ್ರೆಸ್ ನವರು ಹಿಜಾಬ್ ಪ್ರಸ್ತಾಪ ಮಾಡಿದ್ದಾರೆ. ಅದರ ಪರವಾಗಿ ಮಾತಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರಕ್ಕೆ ಬಂದ್ರೆ ಎಸ್ಸಿ ಎಸ್ಟಿ ಮೀಸಲಾತಿ ಕಿತ್ತಾಕುತ್ತೇವೆ ಎಂದು ಹೇಳಿದ್ದರು. ಆದರೂ ನಾವು ಮುಂದುವರೆಸಿದ್ದೇವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯರ ವಿವಾದಿತ ಹೇಳಿಕೆ ನೀಡಿದ್ದಾರೆ. ನಾನು ಜಾತ್ಯಾತೀತ ವ್ಯಕ್ತಿ. ಅಂಬೇಡ್ಕರ್ ಸಂವಿಧಾನದ ಸಂದೇಶದಂತೆ ಬದುಕು ಸಾಗಿಸುತ್ತಿದ್ದೇನೆ. ನನ್ನ ಮಗಳ ಹೆಸರಿನಲ್ಲಿ ಪರಿಶಿಷ್ಟ ಜಾತಿ‌ ಪ್ರಮಾಣ ವಿಚಾರದಲ್ಲಿ ತಪ್ಪು ಮಾಡಿಲ್ಲ. ವಿಧಾನ ಸಭೆಯಲ್ಲಿ ಈ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ರೇಣುಕಾಚಾರ್ಯ ಜಾತಿ ಪ್ರಮಾಣ ಪತ್ರ ಬಗ್ಗೆ ಒಪ್ಪಿಕೊಂಡಿದ್ದಾರೆ. ದೂರು ಕೊಡಲಿ ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತದೆ. ನಾನು ತಪ್ಪು ಮಾಡಿಲ್ಲ. ಮಗಳ ಹೆಸರಿನಲ್ಲಿ ಯಾವುದೇ ಸೌಲಭ್ಯ ಪಡೆದಿಲ್ಲ. ಯಾವುದೇ ಸವಾಲು ಎದುರಿಸಲು ಸಿದ್ದ ಎಂದೂ ರೇಣುಕಾಚಾರ್ಯ ಹೇಳಿದ್ದಾರೆ.

ಇದೇ ವೇಳೆ ದಾವಣಗೆರೆಯಲ್ಲಿ ಮಾಯಕೊಂಡ ಬಿಜೆಪಿ ಶಾಸಕ ಪ್ರೊ. ಲಿಂಗಣ್ಣ ಅವರು ಶಾಸಕ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೇಣುಕಾಚಾರ್ಯ ಪುತ್ರಿ ಎಸ್​ಸಿ ಪ್ರಮಾಣಪತ್ರ ಪಡೆದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಕಸಿದುಕೊಳ್ಳಲು ಬರಬೇಡಿ. ಎಸ್​ಸಿ ಪ್ರಮಾಣಪತ್ರ ಹಿಂಪಡೆವ ಕಾರ್ಯ ಆರಂಭವಾಗಬೇಕು. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ರೇಣುಕಾಚಾರ್ಯ ರೀತಿಯಲ್ಲೇ ಜಿ.ಪಂ. ಮಾಜಿ ಸದಸ್ಯ ಯತ್ನಿಸಿದ್ದಾರೆ. SC ಮೀಸಲು ಕ್ಷೇತ್ರದಲ್ಲಿ ಸ್ಪರ್ಧೆಗೆ ವಾಗೀಶ್ ​ಸ್ವಾಮಿ ಪ್ರಯತ್ನ ಪಟ್ಟಿದ್ದಾರೆ. ಜಂಗಮರು ದಲಿತರ ಹಕ್ಕುಗಳನ್ನು ಕಸಿಯುವುದು ಸರಿಯಲ್ಲ. ತನಿಖೆ ನಡೆಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಹಿಂಪಡೆಯಬೇಕು. ನೂರಾರು ಜನರು ಇದೇ ರೀತಿ ಬೇಡ ಜಂಗಮ ಜಾತಿ ಹೆಸರೇಳಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ಕಬಳಿಸಿದ್ದಾರೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಪ್ರೊ. ಲಿಂಗಣ್ಣ ಆಗ್ರಹಿಸಿದ್ದಾರೆ.

Published On - 1:54 pm, Sat, 26 March 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್