ಅಜ್ಮೀರ್ಗೆ ಹೋಗ್ತೀನಿ ಅಂತಾ ದುಬೈಗೆ ಹಾರಿದ್ದ ಮಂಗಳೂರು ಇನ್ಸ್ಪೆಕ್ಟರ್ ಷರೀಫ್ ಸೀದಾ ಮನೆಗೆ: ಕಮಿಷನರ್ ಶಶಿಕುಮಾರ್ ಆದೇಶ

ಅಜ್ಮೀರ್ಗೆ ಹೋಗುವುದಾಗಿ ಹೇಳಿ ಇನ್ಸ್ಪೆಕ್ಟರ್ ಷರೀಫ್, ಇಲಾಖೆ ಅನುಮತಿ ಪಡೆಯದೇ ದುಬೈಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಅಜ್ಮೀರ್ಗೆ ಹೋಗ್ತೀನಿ ಅಂತಾ ದುಬೈಗೆ ಹಾರಿದ್ದ ಮಂಗಳೂರು ಇನ್ಸ್ಪೆಕ್ಟರ್ ಷರೀಫ್ ಸೀದಾ ಮನೆಗೆ: ಕಮಿಷನರ್ ಶಶಿಕುಮಾರ್ ಆದೇಶ
ಟ್ರಾಫಿಕ್ ಇನ್ಸ್ಪೆಕ್ಟರ್ ಷರೀಫ್
Follow us
TV9 Web
| Updated By: ಆಯೇಷಾ ಬಾನು

Updated on:Mar 22, 2022 | 10:36 PM

ಮಂಗಳೂರು: ದುಬೈಗೆ ಹೋಗಿದ್ದಕ್ಕೆ ಮಂಗಳೂರು ಟ್ರಾಫಿಕ್ ಇನ್ಸ್ಪೆಕ್ಟರ್ ಷರೀಫ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಜ್ಮೀರ್ಗೆ ಹೋಗುವುದಾಗಿ ಹೇಳಿ ಇನ್ಸ್ಪೆಕ್ಟರ್ ಷರೀಫ್, ಇಲಾಖೆ ಅನುಮತಿ ಪಡೆಯದೇ ದುಬೈಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಪೈಪ್​​ಲೈನ್ ವಾಲ್ ತೆಗೆದು ನೀರು‌ ಪೋಲಾಗುವಂತೆ ಮಾಡುತ್ತಿದ್ದ ವ್ಯಕ್ತಿಗೆ ರೈತರಿಂದ ಗೂಸಾ ದಾವಣಗೆರೆ: ಹರಪನಹಳ್ಳಿ ತಾಲೂಕಿನ ಕುರೆಮಾಕುಂಟೆ ಗ್ರಾಮದ ಬಳಿ ಕೆರೆ ತುಂಬಿಸುವ ಯೋಜನೆಯ ಪೈಪ್​​ಲೈನ್ ವಾಲ್ ತೆಗೆದು ನೀರು‌ ಪೋಲಾಗುವಂತೆ ಮಾಡುತ್ತಿದ್ದ ವ್ಯಕ್ತಿಗೆ ರೈತರು ಗೂಸಾ ಕೊಟ್ಟಿದ್ದಾರೆ. ನೀರು ಪೋಲು ಮಾಡುತ್ತಿದ್ದ ಮಂಜುನಾಥ್​ ಎಂಬುವವನ್ನ ಹಿಡಿದು ಥಳಿಸಿ ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ. ಪೈಪ್ ಲೈನ್ ಹಾದು ಹೋಗಿದ್ದ ಜಮೀನಿಗೆ ಪರಿಹಾರ ನೀಡುವಂತೆ ಹೋರಾಟ ನಡೆಸಿ ಹೈಕೋರ್ಟ್ ಮೊರೆ ಹೋಗಿದ್ದ ಮಂಜುನಾಥ್​, ಹೈಕೋರ್ಟ್​ ಮನವಿ ತಿರಸ್ಕರಿಸಿದ್ದ ಹಿನ್ನೆಲೆ ಇಂತಹ ದುಷ್ಕೃತ್ಯ ಎಸಗಿದ್ದಾರೆ.

ಹರಿಹರದ ತುಂಗಭದ್ರಾ ನದಿಯಿಂದ ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ 640 ಕೋಟಿ ರೂಪಾಯಿ ವೆಚ್ಚದ ಯೋಜನೆಯಲ್ಲಿ ಪೈಪ್ ಲೈನ್ ಹಾಯ್ದು ಹೋದ ರೈತರ ಜಮೀನಿಗೆ ಪರಿಹಾರ ನೀಡುವಂತೆ ಹೋರಾಟ ನಡೆಸಿದ್ದ ಮಂಜುನಾಥ ಎಂಬುವವರು ಈ ವಿಚಾರವಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಮಂಜುನಾಥ ಮನವಿಯನ್ನ ಹೈಕೋರ್ಟ್ ತಿರಸ್ಕರಿಸಿದ ಹಿನ್ನೆಲೆ ಇದೇ ಕಾರಣಕ್ಕೆ ಪೈಪ್ ಲೈನ್ ವಾಲ್ ತೆಗೆಯುತ್ತಿದ್ದರು. ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಾವರಿ ಇಲಾಖೆ ಸಿಬ್ಬಂದಿ ಮಂಜುನಾಥ ನನ್ನ ಅರಸೀಕೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ‌ ಮನೆಗೆ ಬೆಂಕಿ ಹಾವೇರಿ: ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ‌ ಮನೆ ಹೊತ್ತಿ ಉರಿದಿದೆ. ಶಂಕ್ರಪ್ಪ ತೆರೆದಹಳ್ಳಿ ಎಂಬುವರ ಮನೆ ಬೆಂಕಿಗೆ ಆಹುತಿಯಾಗಿದ್ದು ಮನೆಯಲ್ಲಿದ್ದ ಎರಡು ಆಕಳು, ಒಂದು ಕರು, ನಗದು, ಬಟ್ಟೆ ಸೇರಿದಂತೆ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ಕುರಿತು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅರ್ಥಗರ್ಭಿತ ಮಾತು

Tax On EPF: ಇಪಿಎಫ್​ ಉಳಿತಾಯಕ್ಕೆ ಹೊಸ ತೆರಿಗೆ ಲೆಕ್ಕಾಚಾರದ ಬಗ್ಗೆ 7 ಅಂಶಗಳಲ್ಲಿ ವಿವರಣೆ

Published On - 10:27 pm, Tue, 22 March 22