AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಕಾಣಿಕೆ ಹುಂಡಿ ಎಣಿಕೆ ವೇಳೆ ಟ್ರಸ್ಟಿಯಿಂದಲೇ ಕಳ್ಳತನ ಆರೋಪ; ಕದ್ದಿಲ್ಲ, ಆಣೆ ಪ್ರಮಾಣಕ್ಕೂ ಸಿದ್ಧ ಎಂದು ಆಡಿಯೋ ರಿಲೀಸ್

ಕದ್ರಿ ಮಂಜುನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ವಿರುದ್ಧ ತೇಜ್‌ಪಾಲ್ ಸುವರ್ಣ ಎಂಬವರು ಸಿಸಿಟಿವಿ ದೃಶ್ಯ ಸಮೇತ ದೂರು ನೀಡಿದ್ದರು. ಧಾರ್ಮಿಕ ದತ್ತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು.

ಮಂಗಳೂರು: ಕಾಣಿಕೆ ಹುಂಡಿ ಎಣಿಕೆ ವೇಳೆ ಟ್ರಸ್ಟಿಯಿಂದಲೇ ಕಳ್ಳತನ ಆರೋಪ; ಕದ್ದಿಲ್ಲ, ಆಣೆ ಪ್ರಮಾಣಕ್ಕೂ ಸಿದ್ಧ ಎಂದು ಆಡಿಯೋ ರಿಲೀಸ್
TV9 Web
| Edited By: |

Updated on: Mar 23, 2022 | 11:40 AM

Share

ಮಂಗಳೂರು: ಹುಂಡಿ ಕಾಣಿಕೆ ಎಣಿಕೆ ವೇಳೆ ಕಳ್ಳತನ ಆರೋಪ ವಿಚಾರಕ್ಕೆ ಸಂಬಂಧಿಸಿ ಅರೋಪ ಹೊತ್ತ ನಿವೇದಿತಾ ಶೆಟ್ಟಿಯಿಂದ ಆಡಿಯೋ ಬಿಡುಗಡೆ ಮಾಡಲಾಗಿದೆ. ನಾನು ಕಳ್ಳತನ ಮಾಡಿಲ್ಲ ಎಂದು ಆಣೆ ಪ್ರಮಾಣ ಮಾಡುತ್ತೇನೆ. ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ನಾನು ಆಣೆ ಮಾಡುತ್ತೇನೆ. ಆರೋಪಿಸಿದ ಪುರುಷೋತ್ತಮ್​ಗೆ ಆಣೆ ಪ್ರಮಾಣಕ್ಕೆ ಆಹ್ವಾನಿಸುತ್ತೇನೆ. ಇಬ್ಬರು ಒಟ್ಟಿಗೆ ನಿಂತು ಆಣೆ ಪ್ರಮಾಣ ಮಾಡೋಣ ಎಂದು ಹೇಳಿದ್ದಾರೆ. ಅವರು ಹೇಳಿಕೆ ನೀಡಿರುವ ಆಡಿಯೋ ಬಿಡುಗಡೆ ಮಾಡಲಾಗಿದೆ. ಹುಂಡಿ ಕಾಣಿಕೆ ಎಣಿಕೆ ವೇಳೆ ನಾನು ಕಳ್ಳತನ ಮಾಡಿಲ್ಲ. ಸೀರೆ ಸರಿಮಾಡಿಕೊಳ್ಳುವ ದೃಶ್ಯವನ್ನಿಟ್ಟುಕೊಂಡ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಂಗಳೂರಿನ ಕದ್ರಿ ಮಂಜುನಾಥ ದೇಗುಲದಲ್ಲಿ ನಡೆದಿದ್ದ ಹುಂಡಿ ಎಣಿಕೆ ಕಾರ್ಯದಲ್ಲಿ ಘಟನೆ ನಡೆದಿದೆ. ಫೆಬ್ರವರಿ 24ರಂದು ಹುಂಡಿ ಎಣಿಕಾ ಕಾರ್ಯ ನಡೆದಿತ್ತು. ಮಂಗಳೂರಿನ ಕದ್ರಿ ಮಂಜುನಾಥ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ ವೇಳೆ ಕಳ್ಳತನ ಮಾಡಿದ ಆರೋಪದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಿವೇದಿತಾ ಶೆಟ್ಟಿ ವಿರುದ್ಧ ದೂರು ನೀಡಲಾಗಿತ್ತು. ಕದ್ರಿ ಮಂಜುನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ವಿರುದ್ಧ ತೇಜ್‌ಪಾಲ್ ಸುವರ್ಣ ಎಂಬವರು ಸಿಸಿಟಿವಿ ದೃಶ್ಯ ಸಮೇತ ದೂರು ನೀಡಿದ್ದರು. ಧಾರ್ಮಿಕ ದತ್ತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು. ಫೆಬ್ರವರಿ 24ರಂದು ನಡೆದಿದ್ದ ಹುಂಡಿ ಎಣಿಕಾ ಕಾರ್ಯದಲ್ಲಿ ಘಟನೆ ನಡೆದಿತ್ತು.

ರಾಮನಗರ: ಕಳಪೆ ಕಾಮಗಾರಿ ಬಗ್ಗೆ ದೂರು ನೀಡಿದ್ದಕ್ಕೆ ಹಲ್ಲೆ ಆರೋಪ

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮ ಪಂಚಾಯತ್ ಸದಸ್ಯ ರಘು ವಿರುದ್ಧ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಿದ್ದಕ್ಕೆ ಹಲ್ಲೆ ಆರೋಪ ಕೇಳಿಬಂದಿದೆ. ಹನುಮಂತೇಗೌಡ ಎಂಬವರು ಆರೋಪ ಮಾಡಿದ್ದಾರೆ. ಸಿಸಿ ರಸ್ತೆ ಕಾಮಗಾರಿ ಬಗ್ಗೆ ನಿರ್ಮಿತಿ ಕೇಂದ್ರಕ್ಕೆ ದೂರು ನೀಡಲಾಗಿತ್ತು. ಹನುಮಂತೇಗೌಡ ನಿರ್ಮಿತಿ ಕೇಂದ್ರಕ್ಕೆ ದೂರು ನೀಡಿದ್ದರು. ಇದರಿಂದ ಕುಪಿತಗೊಂಡು ರಘು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಹನುಮಂತೇಗೌಡಗೆ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಾಸನ: ಚಲಿಸುತ್ತಿದ್ದ ಬೈಕ್ ನಲ್ಲಿ ಕಾಣಿಸಿಕೊಂಡ ಬೆಂಕಿ

ಚಲಿಸುತ್ತಿದ್ದ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಹಾಸನ – ಬೇಲೂರು ರಸ್ತೆಯ ಕಡದರವಳ್ಳಿ ಕ್ರಾಸ್ ಬಳಿ ನಡೆದಿದೆ. ನೋಡ ನೋಡುತ್ತಿದ್ದಂತೆ ಕೆಟಿಎಂ ಬೈಕ್ ಹೊತ್ತಿ ಉರಿದಿದೆ. ಬೆಂಕಿಯಲ್ಲಿ ಬೆಂಗಳೂರು ಮೂಲದ ಯುವಕನ ಬೈಕ್ ಸಂಪೂರ್ಣ ಸುಟ್ಟುಹೋಗಿದೆ. ಬೆಂಗಳೂರಿನಿಂದ ಬೇಲೂರಿನ ಕಡೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್ ನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೈಕ್ ನಿಲ್ಲಿಸಿ ಬೈಕ್ ಸವಾರ ದೂರ ಸರಿದಿದ್ದಾರೆ. ಬೈಕ್ ಸವಾರನ ಕಣ್ಣೆದುರಿಗೇ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ವಿಜಯಪುರ: ಕುಡಿಯೋ ನೀರಿಗಾಗಿ ಮಹಿಳೆಯರ ಪ್ರತಿಭಟನೆ

ಕುಡಿಯುವ ನೀರಿಗಾಗಿ ಮಹಿಳೆಯರು ಪ್ರತಿಭಟನೆ ಮಾಡಿದ ಘಟನೆ ವಿಜಯಪುರ ನಗರದ ತೇಕಡೆ ಗಲ್ಲಿಯಲ್ಲಿ ನಡೆದಿದೆ. ರಸ್ತೆಯ ಮೇಲೆ ಖಾಲಿ ಕೊಡಗಳನಿಟ್ಟು, ಕಟ್ಟಿಗೆ ಹಾಕಿ ರಸ್ತೆ ತಡೆ‌ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಕಳೆದ 10 ದಿನದಿಂದ ನೀರು ಬಿಟ್ಟಿಲ್ಲವೆಂದು ಮಹಿಳೆಯರ ಆಕ್ರೋಶ ಕೇಳಿಬಂದಿದೆ. ಅಧಿಕಾರಿಗಳು ಆಗಮಿಸಿ ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯ ಮಾಡಲಾಗಿದೆ.

ಇದನ್ನೂ ಓದಿ: ಕನಕಾಚಲಪತಿ ಗರುಡೋತ್ಸವ, ಶಿವಮೊಗ್ಗ ಕೋಟೆ ಮಾರಿಕಾಂಬ, ಮಂಗಳೂರು ಬಪ್ಪನಾಡು ಜಾತ್ರೆ ಆರಂಭ

ಇದನ್ನೂ ಓದಿ: ಅಜ್ಮೀರ್ಗೆ ಹೋಗ್ತೀನಿ ಅಂತಾ ದುಬೈಗೆ ಹಾರಿದ್ದ ಮಂಗಳೂರು ಇನ್ಸ್ಪೆಕ್ಟರ್ ಷರೀಫ್ ಸೀದಾ ಮನೆಗೆ: ಕಮಿಷನರ್ ಶಶಿಕುಮಾರ್ ಆದೇಶ

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?