AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಕಾಚಲಪತಿ ಗರುಡೋತ್ಸವ, ಶಿವಮೊಗ್ಗ ಕೋಟೆ ಮಾರಿಕಾಂಬ, ಮಂಗಳೂರು ಬಪ್ಪನಾಡು ಜಾತ್ರೆ ಆರಂಭ

‘ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು’ ಎನ್ನುವ ನಾಣ್ಣುಡಿಯೇ ಚಾಲ್ತಿಗೆ ಬರುವಷ್ಟು ಸುಂದರವಾದ ಕನಕಾಚಲ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಜನಜಾತ್ರೆಯೇ ನೆರೆದಿದೆ.

ಕನಕಾಚಲಪತಿ ಗರುಡೋತ್ಸವ, ಶಿವಮೊಗ್ಗ ಕೋಟೆ ಮಾರಿಕಾಂಬ, ಮಂಗಳೂರು ಬಪ್ಪನಾಡು ಜಾತ್ರೆ ಆರಂಭ
ಕನಕಗಿರಿ ಲಕ್ಷ್ಮೀ ನರಸಿಂಹಸ್ವಾಮಿ ಗರುಡೋತ್ಸವ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 23, 2022 | 9:08 AM

ಕೊಪ್ಪಳ: ರಾಜ್ಯದ ವಿವಿಧೆಡೆ ಹಲವು ಜಾತ್ರೆ ಮತ್ತು ರಥೋತ್ಸವ ಸೇರಿದಂತೆ ಧಾರ್ಮಿಕ ಸಮಾರಂಭಗಳು ನಡೆಯುತ್ತಿವೆ. ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಕನಕಾಚಲಪತಿ ರಥೋತ್ಸವದ ಅಂಗವಾಗಿ ಹಲವು ಧಾರ್ಮಿಕ ವಿಧಿಗಳು ನೆರವೇರುತ್ತಿವೆ. ಜಾತ್ರೆಯ ಅಂಗವಾಗಿ ಬುಧವಾರ ಕನಕಾಚಲಪತಿ ಗರುಡೋತ್ಸವ ನಡೆಯಿತು. ‘ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು’ ಎನ್ನುವ ನಾಣ್ಣುಡಿಯೇ ಚಾಲ್ತಿಗೆ ಬರುವಷ್ಟು ಸುಂದರವಾದ ಕನಕಾಚಲ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಜನಜಾತ್ರೆಯೇ ನೆರೆದಿದೆ.

ಜಾತ್ರಾ ಮಹೋತ್ಸವವು ಮಾರ್ಚ 15ರಿಂದ ಆರಂಭವಾಗಿತ್ತು. ಜಾತ್ರೆಯ ಆಂಗವಾಗಿ ಬುಧವಾರ ಮುಂಜಾನೆ ಗರುಡೋತ್ಸವ ನಡೆಯಿತು. ನಂತರ ಹನುಮೋತ್ಸವ ನಡೆಯಲಿದೆ. ಕನಕಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗರುಡೋತ್ಸವ ಮೆರವಣಿಗೆ ನಡೆಯಿತು.

ಬಪ್ಪನಾಡು ಜಾತ್ರೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಕರಾವಳಿ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದೆನೆಸಿದ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರ ನಡೆಸಲು ಅವಕಾಶ ನಿರಾಕರಿಸುವ ಬ್ಯಾನರ್ ಹಾಕಲಾಗಿದೆ. 80 ನೊಂದಾಯಿತ ವ್ಯಾಪಾರಿಗಳ ಪೈಕಿ 40 ವ್ಯಾಪಾರಿಗಳು ಹಿಂದಿರುಗಿದ್ದಾರೆ. ಕೆಲವರು ಮಾತ್ರ ವ್ಯಾಪಾರ ಮುಂದುವರಿಸಿದ್ದಾರೆ. ಜಾತ್ರೆಯಲ್ಲಿ ಕೋಟ್ಯಾಂತರ ರೂಪಾಯಿ ವ್ಯಾಪಾರ ನಡೆಯುತ್ತದೆ.

ಕೋಟೆ ಮಾರಿಕಾಂಬ ಜಾತ್ರೆಗೆ ಸಾವಿರಾರು ಭಕ್ತರು ಶಿವಮೊಗ್ಗದಲ್ಲಿರುವ ಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆಯಲ್ಲಿಯೂ ಮುಸ್ಲಿಮ್ ವ್ಯಾಪಾರಿಗಳ ಅಂಗಡಿಗೆ ನಿರ್ಬಂಧ ವಿಧಿಸಲಾಗಿದೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಮುಸ್ಲಿಂ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಆದರೆ ಬಜರಂಗದಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ಆದರೆ ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುವುದು ಚರ್ಚೆಯ ವಿಚಾರವಾಗಿದೆ.

ಅವಕಾಶ ನಿರಾಕರಣೆ ತಪ್ಪು ಬೆಂಗಳೂರು: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಈ ರೀತಿ ಅವಕಾಶ ನಿರಾಕರಿಸುವುದು ತಪ್ಪು ಎಂದಿದ್ದಾರೆ. ಅಂಗಡಿ ಟೆಂಡರ್ ನಿರಾಕರಿಸುವುದು, ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ ಎನಿಸಿಕೊಳ್ಳುತ್ತದೆ. ಇದು ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ. ಇದು ಸಂಪೂರ್ಣ ಕಾನೂನು ಬಾಹಿರ ಎಂದಿದ್ದಾರೆ. ನಮ್ಮ ದೇಶದಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶವಿದೆ. ಮುಕ್ತ ವ್ಯಾಪಾರಕ್ಕೆ ನಿರ್ಬಂಧಿಸುವುದು ಕಾನೂನುಬಾಹಿರವಾಗುತ್ತದೆ ಎಂದರು.

ಸಿದ್ಧಾರೂಢ ಮಠಕ್ಕೆ ಮೇವು ದಾನ ಹುಬ್ಬಳ್ಳಿ: ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮಸ್ಥರು 25 ಟ್ರ್ಯಾಕ್ಟರ್‌ ಮೇವು ದಾನ ಮಾಡಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ 25 ಟ್ರಾಕ್ಟರ್ ಮೇವು ದಾನ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಮಠದ ಗೋವುಗಳ ಆಹಾರಕ್ಕಾಗಿ ಮೇವು ದಾನ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.

ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕಿಲ್ಲ ಜಾಗ, ಭಜರಂಗ ದಳದಿಂದ ಕ್ಯಾಂಪೇನ್

ಇದನ್ನೂ ಓದಿ: ವಿಶ್ವದ ಅತ್ಯಂತ ದೊಡ್ಡ ಹಿಂದು ದೇಗುಲ ನಿರ್ಮಾಣಕ್ಕೆ 2.5 ಕೋಟಿ ರೂ.ಮೌಲ್ಯದ ಭೂಮಿ ದಾನ ಮಾಡಿದ ಮುಸ್ಲಿಂ ಉದ್ಯಮಿ

Published On - 9:06 am, Wed, 23 March 22

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು