ಬಾಗಲಕೋಟೆ: ಉರುಸ್​ನಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥ

ವಾಂತಿ, ಭೇದಿಯಿಂದ ಡೋಮನಾಳ ಗ್ರಾಮಸ್ಥರು ಸಂಕಷ್ಟ ಎದುರಿಸುವಂತಾಗಿದೆ. 22 ಮಕ್ಕಳು ಸೇರಿದಂತೆ 26 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 20 ಜನರಿಗೆ ಸುತಗುಂಡಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ಬಾಗಲಕೋಟೆ: ಉರುಸ್​ನಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥ
ಉರುಸ್​ನಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥ
Follow us
TV9 Web
| Updated By: ganapathi bhat

Updated on:Mar 23, 2022 | 11:29 AM

ಬಾಗಲಕೋಟೆ: ಉರುಸ್‌ನಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಬಾಗಲಕೋಟೆ ತಾಲೂಕಿನ ಡೋಮನಾಳ ಗ್ರಾಮದಲ್ಲಿ ನಡೆದಿದೆ. ವಾಂತಿ, ಭೇದಿಯಿಂದ ಡೋಮನಾಳ ಗ್ರಾಮಸ್ಥರು ಸಂಕಷ್ಟ ಎದುರಿಸುವಂತಾಗಿದೆ. 22 ಮಕ್ಕಳು ಸೇರಿದಂತೆ 26 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 20 ಜನರಿಗೆ ಸುತಗುಂಡಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಯಮನೂರಪ್ಪನ ಉರುಸ್​ನಲ್ಲಿ ಕಲುಷಿತ ಆಹಾರ ಸೇವನೆ ಕೇಸ್ ಸಂಬಂಧಿಸಿ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಹೇಳಿಕೆ ನೀಡಿದ್ದಾರೆ. ಮಕ್ಕಳೂ ಸೇರಿದಂತೆ 80 ಜನರು ವಿಷಾಹಾರ ಸೇವಿಸಿ ಅಸ್ವಸ್ಥ ಆಗಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ 48 ಜನ ದಾಖಲಾಗಿದ್ದಾರೆ. ವಿಷಾಹಾರ ಸೇವಿಸಿದ್ದ ಎಲ್ಲ‌ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ವಿಷಾಹಾರ ಸೇವನೆಯಿಂದ ಯಾರಿಗೂ ಜೀವಹಾನಿಯಾಗಿಲ್ಲ. ಆಹಾರ, ನೀರಿನ ಸ್ಯಾಂಪಲ್​ ಪರೀಕ್ಷೆಗೆ ಕಳಿಸಲಾಗಿದೆ. ಸ್ಯಾಂಪಲ್ಸ್ ರಿಸಲ್ಟ್ ಬಂದ ನಂತರ ನಿಜಾಂಶ ತಿಳಿಯಲಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಹೇಳಿದ್ದಾರೆ.

ತುಮಕೂರು: ಜಾತಿ ನಿಂದನೆ ಜೊತೆಗೆ ಹಲ್ಲೆ ನಡೆಸಿದ ಆರೋಪದಲ್ಲಿ ವ್ಯಕ್ತಿ ಆತ್ಮಹತ್ಯೆ

ಜಾತಿ ನಿಂದನೆ ಜೊತೆಗೆ ಹಲ್ಲೆ ನಡೆಸಿದ ಆರೋಪದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ ನಡೆದಿದೆ. ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮನೆಯ ಪಕ್ಕದ ಶೆಡ್​ನಲ್ಲಿ ನಾಗರಾಜು ನೇಣಿಗೆ ಶರಣಾಗಿದ್ದಾರೆ. ಗ್ರಾಮದ ನಾಗರಾಜು ಅದೇ ಗ್ರಾಮದ ರಾಮಚಂದ್ರ ಎನ್ನುವರ ಬಳಿ ಕೈ ಸಾಲ ಪಡೆದಿದ್ದರು. ರಾಮಚಂದ್ರ ಮನೆಯ ಬಳಿ ಬಂದು ಸಾಲ ಹಿಂತಿರುಗಿಸುವಂತೆ ಕೇಳಿದ್ದರು. ಹಣ ನೀಡದಿದ್ದಕ್ಕೆ ಕುರಿ ತೆಗೆದುಕೊಂಡು ಹೋಗಿದ್ದರು. ರಾಮಚಂದ್ರ ಮನೆಯ ಬಳಿ ಹೋಗಿ ಕುರಿ ಹಿಂತಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆಂದು ದೂರು ಕೊಡಲಾಗಿದೆ. ರಾಮಚಂದ್ರ ಪತ್ನಿ ನಾಗಮಣಿ ಹಾಗೂ ವೆಂಕಟೇಶ್ ಎಂಬುವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಳ್ಳಕೆರೆ: ಎತ್ತಿನಗಾಡಿಗೆ ಲಾರಿ ಡಿಕ್ಕಿ ಆಗಿ ಸ್ಥಳದಲ್ಲೇ ರೈತ ದುರ್ಮರಣ

ಎತ್ತಿನಗಾಡಿಗೆ ಲಾರಿ ಡಿಕ್ಕಿ ಆಗಿ ಸ್ಥಳದಲ್ಲೇ ರೈತ ದುರ್ಮರಣವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ನಡೆದಿದೆ. ಅಪಘಾತದಲ್ಲಿ ಎತ್ತಿನಗಾಡಿಯಲ್ಲಿ ಇದ್ದ ಹಿರೇಹಳ್ಳಿಯ ತಿಪ್ಪೇಸ್ವಾಮಿ (40) ಸಾವನ್ನಪ್ಪಿದ್ದರೆ. ಮತ್ತೊಬ್ಬ ರೈತ ಸುರೇಶ್, 2 ಎತ್ತುಗಳಿಗೆ ಗಾಯವಾಗಿದೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೈಸೂರು: ಸಕಾಲಕ್ಕೆ ನೀರು ಹರಿಸಲಾಗದೆ ಒಣಗಿದ ಬೆಳೆ

ಸಕಾಲಕ್ಕೆ ನೀರು ಹರಿಸಲಾಗದೆ ಬೆಳೆ ಒಣಗಿದ ಕಾರಣ ವೃದ್ಧೆ ಕಣ್ಣೀರು ಹಾಕಿದ್ದಾರೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದ ಆರೋಪ ಮಾಡಿ, ಚೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗೆ ನೀರು ಹರಿಸಲಾಗಿಲ್ಲ. ಇದರಿಂದ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಗ್ರಾಮ ಹೊಸೂರುಹುಂಡಿ ಎಂಬಲ್ಲಿ ಬೆಳೆ ಒಣಗಿದೆ ಎಂದು ಹೇಳಲಾಗಿದೆ.

ಧಾರವಾಡ: ಧಾರವಾಡದ ಜಿನ್ನಿಂಗ್ ಮಿಲ್‌ನಲ್ಲಿ ಬೆಂಕಿ ಅವಘಡ

ಧಾರವಾಡದ ಜಿನ್ನಿಂಗ್ ಮಿಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಹತ್ತಿ ಬೆಂಕಿಗಾಹುತಿ ಆಗಿದೆ. ಧಾರವಾಡ ತಾಲೂಕಿನ ಬೇಲೂರು ಕೈಗಾರಿಕೆ ಪ್ರದೇಶದಲ್ಲಿ ಘಟನೆ ನಡೆದಿದೆ. ರಾಜೇಶ್ ಕಾಟನ್ ಮಿಲ್‌ನಲ್ಲಿ ತಡರಾತ್ರಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಶಿವಮೊಗ್ಗ ಪೊಲೀಸರ ಹೈ ಅಲರ್ಟ್ ನಡುವೆಯೂ ಕೊಲೆ ಯತ್ನ; 13 ದಿನ ಸಾವು ಬದುಕಿನ ಹೋರಾಟ ನಡೆಸಿದ್ದ ವ್ಯಕ್ತಿ ಸಾವು, ಅಸಲಿಗೆ ಆಗಿದ್ದೇನು?

ಇದನ್ನೂ ಓದಿ: ನಕಲಿ ಮಾರ್ಕ್ಸ್ ಕಾರ್ಡ್ ದಂಧೆ, 4 ಕಿಂಗ್ ಪಿನ್ ಬಂಧನ ಪ್ರಕರಣ: ದೇಶದ ಪ್ರತಿಷ್ಠಿತ 10 ವಿ.ವಿ. ಗಳಿಗೆ ಜಯನಗರ ಪೊಲೀಸ್ ನೋಟಿಸ್

Published On - 8:51 am, Wed, 23 March 22