ಶಿವಮೊಗ್ಗ ಪೊಲೀಸರ ಹೈ ಅಲರ್ಟ್ ನಡುವೆಯೂ ಕೊಲೆ ಯತ್ನ; 13 ದಿನ ಸಾವು ಬದುಕಿನ ಹೋರಾಟ ನಡೆಸಿದ್ದ ವ್ಯಕ್ತಿ ಸಾವು, ಅಸಲಿಗೆ ಆಗಿದ್ದೇನು?

ಒಂದು ಸಮಯದಲ್ಲಿ ಬ್ಯುಸಿನೆಸ್ ಪಾಟ್ನರ್ ಆಗಿದ್ದ ಸಂಬಂಧಿಕ ದಸ್ತಗಿರ್ ಮತ್ತು ಪಾಚಾಖಾನ್ ನಡುವೆ ಮನಸ್ತಾಪ ಶುರುವಾಗಿತ್ತು. ಇಬ್ಬರ ನಡುವೆ ಹಗೆತನ ಹೆಚ್ಚಾಗಿ ಹೋಗಿತ್ತು. ಶಿವಮೊಗ್ಗ ನಗರದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಮತ್ತೊಂದ್ಕಡೆ ಕೊಲೆ ಯತ್ನ ಕೇಸ್ನಲ್ಲಿ ದಸ್ತಗಿರ್ ಅಂದರ್ ಆಗಿದ್ದ.

ಶಿವಮೊಗ್ಗ ಪೊಲೀಸರ ಹೈ ಅಲರ್ಟ್ ನಡುವೆಯೂ ಕೊಲೆ ಯತ್ನ; 13 ದಿನ ಸಾವು ಬದುಕಿನ ಹೋರಾಟ ನಡೆಸಿದ್ದ ವ್ಯಕ್ತಿ ಸಾವು, ಅಸಲಿಗೆ ಆಗಿದ್ದೇನು?
ಶಿವಮೊಗ್ಗ ಪೊಲೀಸರ ಹೈ ಅಲರ್ಟ್ ನಡುವೆಯೂ ಕೊಲೆ ಯತ್ನ; 13 ದಿನ ಸಾವು ಬದುಕಿನ ಹೋರಾಟ ನಡೆಸಿದ್ದ ವ್ಯಕ್ತಿ ಸಾವು, ಅಸಲಿಗೆ ಆಗಿದ್ದೇನು?
Follow us
| Updated By: ಆಯೇಷಾ ಬಾನು

Updated on: Mar 22, 2022 | 5:07 PM

ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಕಿಡಿಗೇಡಿಗಳು ಕಮಕ್ ಕಿಮಕ್ ಅನ್ನೋಕು ಭಯ ಪಡುತ್ತಿದ್ದಾರೆ. ಯಾಕಂದ್ರೆ, ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ(Harsha Murder) ಬಳಿಕ ಪೊಲೀಸರು ಅಲರ್ಟ್(Shivamogga Police) ಆಗಿದ್ರು. ಆದ್ರೆ, ಇದೇ ಸಮಯದಲ್ಲೇ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆದಿದ್ದು 13ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿ ಸಾವಿನ ಮನೆ ಸೇರಿದ್ದು, ಶಿವಮೊಗ್ಗ ಬೆಚ್ಚಿಬಿದ್ದಿದೆ.

ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು.. ಅಸಲಿಗೆ ಆಗಿದ್ದೇನು? ಮಾರ್ಚ್ 8ರಂದು ಶಿವಮೊಗ್ಗ ನಗರದ ಶಂಕರ ಮಠ ರಸ್ತೆಯಲ್ಲಿ ರಾತ್ರಿ 10 ಗಂಟೆಗೆ ಅದೊಬ್ಬನ ಮೇಲೆ ಡೆಡ್ಲಿ ದಾಳಿ ನಡೆದಿತ್ತು. ಆದ್ರೀಗ, ದಾಳಿಗೆ ಒಳಗಾಗಿದ್ದ ವ್ಯಕ್ತಿ ಮಸಣ ಸೇರಿದ್ರೆ, ದಾಳಿ ರಹಸ್ಯ ರಿವೀಲ್ ಆಗಿದೆ. ಪಾಚಾಖಾನ್ ಎಂಬ ವ್ಯಕ್ತಿ ಮಾರ್ಚ್ 8ರಂದು ಶಿವಮೊಗ್ಗದ ಶಂಕರ ಮಠ ಬಳಿ ಆಗಮಿಸಿದ್ದ. ಈ ವೇಳೆ ಪಾಚಾಖಾನ್ ಮೇಲೆ ದಸ್ತಗೀರ್ ಎಂಬಾತ ಮುಗಿಬಿದ್ದಿದ್ದ. ಅದು ಕೂಡ ಚಾಕುವಿನಿಂದ ಮನಸ್ಸೋ ಇಚ್ಛೆ ಇರಿದು ಪರಾರಿ ಆಗಿದ್ದ. ತಕ್ಷಣ ಸ್ಥಳೀಯರು ಪಾಚಾಖಾನ್ನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ರು. ಕಳೆದ 13 ದಿನಗಳಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದ. ಆದ್ರೆ, ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಒಂದು ಲಕ್ಷ ಹಣದ ವಿಚಾರಕ್ಕೆ ನಡೆದಿತ್ತು ‘ಡೆಡ್ಲಿ’ ದಾಳಿ! ಈ ದಸ್ತಿಗಿರ್ ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದಲ್ಲಿ ಒಂದು ನಾನ್ವೆಜ್ ಅಂಗಡಿ ಇಟ್ಕೊಂಡಿದ್ದ. ವ್ಯಾಪಾರವೂ ಚೆನ್ನಾಗಿ ನಡೀತಿತ್ತು. ಆದ್ರೆ, ಕಳೆದ 3 ವರ್ಷಗಳ ಹಿಂದೆ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ ಸೀಜ್ ಮಾಡಿದ್ರು. ಈ ದಾಳಿಯಲ್ಲಿ ಪಾಚಾಖಾನ್ ಮತ್ತು ಅಸ್ಗರ್ ಎಂಬಾತನೇ ಕಾರಣ ಎಂಬುದು ದಸ್ತಗಿರ್ ನಂಬಿಕೆ ಆಗಿತ್ತು. ಈ ನಡುವೆ ಪಾಚಾಖಾನ್ಗೆ ಒಂದು ಲಕ್ಷ ದಸ್ತಗಿರ್ ಸಾಲ ಕೊಟ್ಟಿದ್ದನು. ಅದನ್ನು ವಾಪಸ್ ಕೊಟ್ಟಿಲ್ಲ ಅಂತಾ ತಗಾದೆ ಶುರು ಮಾಡಿದ್ದನು. ಒಂದು ಲಕ್ಷಕ್ಕೆ 50 ಸಾವಿರ ಬಡ್ಡಿ ಹಾಕಿ ಒಂದೂವರೆ ಲಕ್ಷ ಹಣ ಪಾಚಾಖಾನ್ ವಾಪಸ್ ಕೊಟ್ಟಿದ್ದನು. ಆದ್ರೆ ಹಣ ವಾಪಸ್ ಕೊಟ್ಟಿಲ್ಲ. ಇನ್ನೂ ಒಂದು ಲಕ್ಷ ಹಣ ಕೊಡಬೇಕೆಂದು ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು. ಹೀಗಾಗಿ ಮಾರ್ಚ್ 8 ರಂದು ಶಂಕರಮಠ ರಸ್ತೆ ಬಳಿ ಕಾಲ್ ಮಾಡಿ ಪಾಚಾಖಾನ್ನನ್ನು ದಸ್ತಗಿರ್ ಕರೆದಿದ್ದಾನೆ. ಮಾತನಾಡಲು ಬಂದ ಪಾಚಾಖಾನ್ಗೆ ಜೊತೆ ಹಣದ ವಿಚಾರವಾಗಿ ಗಲಾಟೆ ಶುರುವಾಗಿದೆ. ಈ ವೇಳೆ ಮೊದಲೇ ಪ್ಲ್ಯಾನ್ ಮಾಡಿಕೊಂಡ ಬಂದಿದ್ದ ದಸ್ತಗಿರ್ ಚಾಕುವಿನಿಂದ ಇರಿದು ಕೊಲೆಗೆ ಯತ್ನ ಮಾಡಿದ್ದ.

ಇನ್ನು, ಒಂದು ಸಮಯದಲ್ಲಿ ಬ್ಯುಸಿನೆಸ್ ಪಾಟ್ನರ್ ಆಗಿದ್ದ ಸಂಬಂಧಿಕ ದಸ್ತಗಿರ್ ಮತ್ತು ಪಾಚಾಖಾನ್ ನಡುವೆ ಮನಸ್ತಾಪ ಶುರುವಾಗಿತ್ತು. ಇಬ್ಬರ ನಡುವೆ ಹಗೆತನ ಹೆಚ್ಚಾಗಿ ಹೋಗಿತ್ತು. ಶಿವಮೊಗ್ಗ ನಗರದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಪರಿಸ್ಥಿತಿ ಸೂಕ್ಷ್ಮವಾಗಿತ್ತು. ಮತ್ತೊಂದ್ಕಡೆ ಕೊಲೆ ಯತ್ನ ಕೇಸ್ನಲ್ಲಿ ದಸ್ತಗಿರ್ ಅಂದರ್ ಆಗಿದ್ದ. ಈಗ ಪಾಚಾಖಾನ್ ಮೃತಪಟ್ಟಿದ್ದರಿಂದ ಮರ್ಡರ್ ಕೇಸ್ ದಾಖಲಾಗಿದೆ. ಸದ್ಯ, ಹಣದ ವಿಚಾರಕ್ಕೆ ಹುಟ್ಟಿಕೊಂಡ ದ್ವೇಷ, ಒಂದು ಜೀವ ಬಲಿ ಪಡೆದಿದೆ. ಅಲ್ದೆ, ಆರೋಪಿ ಜೈಲು ಸೇರಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.

ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ

ಇದನ್ನೂ ಓದಿ: Ipl 2022: 2 ಪಂದ್ಯಗಳಿಂದ ಡೆಲ್ಲಿ ವೇಗಿ ಔಟ್: ಆದರೂ ರಿಷಭ್ ಪಂತ್ ಫುಲ್ ಖುಷ್..!

ವಿದ್ಯುತ್ ಸ್ಪರ್ಶ: ಕೂಡ್ಲಿಗಿಯ ಶಿವಪುರ ಗ್ರಾಮ‌ ಪಂಚಾಯತ್ ಸದಸ್ಯ ಸಾವು

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ