ನಕಲಿ ಮಾರ್ಕ್ಸ್ ಕಾರ್ಡ್ ದಂಧೆ, 4 ಕಿಂಗ್ ಪಿನ್ ಬಂಧನ ಪ್ರಕರಣ: ದೇಶದ ಪ್ರತಿಷ್ಠಿತ 10 ವಿ.ವಿ. ಗಳಿಗೆ ಜಯನಗರ ಪೊಲೀಸ್ ನೋಟಿಸ್

Fake marks card: ನಕಲಿ ಅಂಕ ಪಟ್ಟಿ ಕುರಿತು ಸ್ಪಷ್ಟನೆ ಕೋರಿ ಈ ಹತ್ತೂ ಯೂನಿವರ್ಸಿಟಿಗಳಿಗೆ ನೋಟಿಸ್ ನೀಡಲಾಗಿದೆ. ಇದೇ ವೇಳೆ ನಕಲಿ ಮಾರ್ಕ್ಸ್ ಕಾರ್ಡ್ ಪಡೆದು ನೌಕರಿಯಲ್ಲಿದ್ದವರಿಗೂ ಶಾಕ್ ನೀಡಲಾಗಿದೆ. ಆರೋಪಿಗಳ ಹೇಳಿಕೆ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ನಕಲಿ ಮಾರ್ಕ್ಸ್ ಕಾರ್ಡ್ ಪಡೆದ 150 ಮಂದಿ ಹೆಸರು ಪಟ್ಟಿಯಲ್ಲಿದೆ.

ನಕಲಿ ಮಾರ್ಕ್ಸ್ ಕಾರ್ಡ್ ದಂಧೆ, 4 ಕಿಂಗ್ ಪಿನ್ ಬಂಧನ ಪ್ರಕರಣ: ದೇಶದ ಪ್ರತಿಷ್ಠಿತ 10 ವಿ.ವಿ. ಗಳಿಗೆ ಜಯನಗರ ಪೊಲೀಸ್ ನೋಟಿಸ್
ಬೃಹತ್ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ: ಕಿಂಗ್ ಪಿನ್ ಗಳ ಬಂಧನ ಪ್ರಕರಣ, ದೇಶದ ಪ್ರತಿಷ್ಠಿತ 10 ವಿಶ್ವವಿದ್ಯಾಲಯಗಳಿಗೆ ಪೊಲೀಸ್ ನೋಟಿಸ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 22, 2022 | 6:39 PM

ಬೆಂಗಳೂರು: ದೊಡ್ಡ ಪ್ರಮಾಣದ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯ ಕಿಂಗ್ ಪಿನ್ ಗಳನ್ನು ಬಂಧಿಸಿದ್ದ ಪ್ರಕರಣದ ಮುಂದುವರಿದ ಭಾಗವಾಗಿ ದೇಶದ ಪ್ರತಿಷ್ಠಿತ 10 ಕಾಲೇಜುಗಳಿಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಜಯನಗರ ಪೊಲೀಸರು ಮಂಗಳೂರು ಯೂನಿವರ್ಸಿಟಿ, ಸಿವಿಆರ್ ಯೂನಿವರ್ಸಿಟಿ – ಜಾರ್ಖಂಡ್, ಕರ್ನಾಟಕ ಓಪನ್ ಯೂನಿವರ್ಸಿಟಿ, ದೆಹಲಿ ಜವಹರಲಾಲ್ ನೆಹರೂ ಯೂನಿವರ್ಸಿಟಿ, ಕುವೆಂಪು ಯೂನಿವರ್ಸಿಟಿ, ರಾಜಸ್ಥಾನದ ಜನಾರ್ಧನ್ ಯೂನಿವರ್ಸಿಟಿ, ಮಧ್ಯಪ್ರದೇಶದ ಠಾಕೂರ್ ಯೂನಿವರ್ಸಿಟಿ, ಛತ್ತೀಸಗಡದ ಸಿವಿ ರಾಮನ್ ಯುನಿವರ್ಸಿಟಿ ಸೇರಿದಂತೆ ಒಟ್ಟು 10 ಯೂನಿವರ್ಸಿಟಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನಕಲಿ ಅಂಕ ಪಟ್ಟಿ ಕುರಿತು ಸ್ಪಷ್ಟನೆ ಕೋರಿ ಈ ಹತ್ತೂ ಯೂನಿವರ್ಸಿಟಿಗಳಿಗೆ ನೋಟಿಸ್ ನೀಡಲಾಗಿದೆ. ಇದೇ ವೇಳೆ ನಕಲಿ ಮಾರ್ಕ್ಸ್ ಕಾರ್ಡ್ ಪಡೆದು ನೌಕರಿಯಲ್ಲಿದ್ದವರಿಗೂ ಶಾಕ್ ನೀಡಲಾಗಿದೆ. ಆರೋಪಿಗಳ ಹೇಳಿಕೆ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ನಕಲಿ ಮಾರ್ಕ್ಸ್ ಕಾರ್ಡ್ ಪಡೆದ 150 ಮಂದಿ ಹೆಸರು ಪಟ್ಟಿಯಲ್ಲಿದೆ. ಒಬ್ಬೊಬ್ಬರಾಗಿ ಇವರನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಿಸಿಕೊಳ್ಳಲಾಗುತ್ತಿದೆ.

ಈವರೆಗೂ 13 ಮಂದಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಪರೀಕ್ಷೆ ಬರೆದು ಮಾರ್ಕ್ಸ್ ಪಡೆದಿದ್ದಾಗಿ ಇವರು ಹೇಳುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಾರ್ಕ್ಸ್ ಕಾರ್ಡ್ ದಂಧೆ ನಡೆದಿದೆ. ಕೊಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜನರಿಂದ ನಕಲಿ ಮಾರ್ಕ್ಸ್ ಕಾರ್ಡ್ ಖರೀದಿಯಾಗಿದೆ. ಸದ್ಯ ನಕಲಿ ಮಾರ್ಕ್ಸ್ ಕಾರ್ಡ್ ಎಂದು ತಿಳಿದು ಕಣ್ಣೀರು ಹಾಕುತ್ತಿದ್ದಾರೆ ಈ ವಿದ್ಯಾರ್ಥಿಗಳು. ಇದೇ ಮಾರ್ಚ್​​ ತಿಂಗಳ 8 ರಂದು ಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಕಿಂಗ್ ಪಿನ್ ಧರ್ಮೇಂದ್ರ, ನರೇಶ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಶಹೀದ್ ಭಗತ್​ ಸಿಂಗ್ ಹೆಸರಿನಲ್ಲಿ ಉಚಿತ​ ಸೈನಿಕ ಶಾಲೆ! ನವದೆಹಲಿ: ಪಂಜಾಬ್ ಅಸೆಂಬ್ಲಿ ಗದ್ದುಗೆ ಗೆದ್ದು ಬೀಗಿರುವ ಆಮ್​ ಆದ್ಮಿ ಪಕ್ಷವು ಈಗ ರಾಷ್ಟ್ರೀಯ ಪಕ್ಷವಾಗುತ್ತಾ ದಾಪುಗಾಲು ಹಾಕುತ್ತಾ ಸಾಗಿದೆ. ಈ ಮಧ್ಯೆ ಆಪ್​ ಅಧಿನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ತಮ್ಮ ಆಡಳಿತದಲ್ಲಿ ಕೆಲ ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲೊಂದು ಸೈನಿಕ ಶಾಲೆ ತೆರೆದು, ಅದಕ್ಕೆ ಶಹೀದ್ ಭಗತ್​ ಸಿಂಗ್​ ಸೈನಿಕ ಶಾಲೆ ಎಂದು ನಾಮಕರಣ ಮಾಡಲು ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಭಗತ್ ಸಿಂಗ್ – ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ. ಭಗತ್​ ಸಿಂಗ್ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ, ತಮ್ಮ 23ನೇ ಬಿಸಿಯೌವ್ವನದ ವಯಸ್ಸಿನಲ್ಲಿ, 1931ರ ಮಾರ್ಚ್​ 23 ರಂದು ಪ್ರಾಣ ತ್ಯಾಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಈ ನಿರ್ಧಾರ (Shaheed Bhagat Singh Armed Forces Preparatory School) ಪ್ರಕಟಿಸಿರುವುದು ದೇಶಾಭಿಮಾನಿಗಳಲ್ಲಿ ಹೆಮ್ಮೆ ಮೂಡಿಸಿದೆ.

ಎರಡು ವರ್ಷಗಳ ಹಿಂದೆಯೇ ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಈ ಸಂಬಂಧ ಒಂದು ಘೋಷಣೆ ಮಾಡಿದ್ದರು. ಸೈನಿಕ ಶಾಲೆಯೊಂದನ್ನು ತೆರೆದು, ಅದರಲ್ಲಿ ಭದ್ರತಾ ಪಡೆಗಳಿಗೆ ಬೇಕಾಗುವಂತಹ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಈ ಶಾಲೆಯ ಧ್ಯೇಯೋದ್ದೇಶವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ನ್ಯಾಷನಲ್ ಡಿಫೆನ್ಸ್​ ಅಕಾಡೆಮಿ (NDA) ಮಾದರಿಯಲ್ಲಿ ಇದು ಕಾರ್ಯಗತವಾಗಲಿದೆ. ಗಮನಾರ್ಹವೆಂದರೆ ಇದು ಸಂಪೂರ್ಣ ಉಚಿತ ಶಾಲೆಯಾಗಲಿದೆ. ದೆಹಲಿ ವಿಶ್ವವಿದ್ಯಾಲಯದಡಿ ಈಗಾಗಲೇ ಶಹೀದ್ ಭಗತ್​ ಸಿಂಗ್ ಕಾಲೇಜು ಒಂದು (Shaheed Bhagat Singh College) ಕಾರ್ಯನಿರ್ವಹಿಸುತ್ತಿದೆ. ಅದು 1967ರಲ್ಲಿ ಸ್ಥಾಪನೆಗೊಂಡಿದೆ.

ನೂತನ ಸೇನಾ ಕಾಲೇಜು ಸ್ಥಾಪನೆ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಅವರು ನೂತನ ಕಾಲೇಜಿನ ಹೆಸರನ್ನು ಸಹ ಪ್ರಕಟಿಸಿದರು. ಅದು ದೆಹಲಿ ಸರ್ಕಾರದ ಶಹೀದ್ ಭಗತ್​ ಸಿಂಗ್ ಸಶಸ್ತ್ರ ಸೇನಾಪಡೆಗಳ ಪ್ರಿಪರೇಟರಿ ಸ್ಕೂಲ್​ (Delhi govt’s Shaheed Bhagat Singh Armed Forces Preparatory School). 9ನೇ ತರಗತಿ ಮತ್ತು 11 ನೇ ತರಗತಿಗೆ ಇಲ್ಲಿ ಪ್ರವೇಶ ನೀಡಲಾಗುವುದು. 100-100 ಸೀಟುಗಳನ್ನು ನಿಗದಿಪಡಿಸಲಾಗಿದೆ. ಆದರೆ 200 ಸೀಟುಗಳಿಗೆ ಈಗಾಗಲೇ 18,000 ವಿದ್ಯಾರ್ಥಿಗಳು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಝರೋದಾ ಕಲಾನ್​ನಲ್ಲಿ (Jharoda Kalan ) 14 ಎಕರೆ ಜಮೀನಿನಲ್ಲಿ ಅತ್ಯಾಧುನಿಕ ರೀತಿಯಲ್ಲಿ ಈ ಶಾಲೆ ನಿರ್ಮಾಣವಾಗಲಿದೆ. ಇದು ರೆಸಿಡೆನ್ಶಿಯಲ್ ಸ್ಕೂಲ್. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಇಲ್ಲಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ನಿವೃತ್ತ ಸೇನಾನಿಗಳು ಇಲ್ಲಿನ ಅಧ್ಯಾಪಕರಾಗಲಿದ್ದಾರೆ. ಮಾರ್ಚ್​ 27 ರಂದು 9ನೇ ತರಗತಿಗೆ ಮತ್ತು ಮಾರ್ಚ್​ 28 ರಂದು 11ನೇ ತರಗತಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

Also Read: ಮುಸ್ಲಿಂ ಕುಟುಂಬಗಳಿಗೆ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ; ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕಿಲ್ಲ ಜಾಗ, ಭಜರಂಗ ದಳದಿಂದ ಕ್ಯಾಂಪೇನ್

Also Read: ಇದು ಹೋಳಿ ಸಮಯ! ಸಮವಸ್ತ್ರ ಧರಿಸಿಯೇ ರಂಗಿನ ಹಬ್ಬ ಆಚರಿಸಿ, ಸೆಲ್ಫಿ ಕ್ರೇಜ್​ನಲ್ಲಿ ಮಿಂದೆದ್ದ ಮಹಿಳಾ ಪೊಲೀಸ್

Published On - 6:14 pm, Tue, 22 March 22