ಬ್ಯಾಂಕ್ನಲ್ಲಿ ಹಣ ಠೇವಣಿ ಮಾಡಲು ಬಂದ ಮಹಿಳೆ; ಬೆನ್ನಟ್ಟಿ ಬಂದು ಎಲ್ಲರೆದುರೇ ಚಾಕುವಿನಿಂದ ಇರಿದ ಪತಿ
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಬ್ಯಾಂಕ್ ಸಿಬ್ಬಂದಿ ಕೂಡಲೇ ಪೊಲಿಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆಯನ್ನೂ ನಡೆಸಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಬ್ಯಾಂಕ್ನಲ್ಲಿ ಹಣ ಠೇವಣಿ ಇಡಲು ಬಂದ ಮಹಿಳೆಯನ್ನು ಆಕೆಯ ಪತಿ ಮತ್ತು ಅವನ ಸ್ನೇಹಿತ ಸೇರಿ ಕುಡುಗೋಲು, ಚಾಕುವಿನಿಂದ ಇರಿದಿದ್ದಾರೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮಹಿಳೆಯನ್ನು ಪ್ರೇಮಲತಾ ಎಂದು ಗುರುತಿಸಲಾಗಿದ್ದು, ಇವರ ಪತಿಯ ಹೆಸರು ವೆಲೈಚಾಮಿ. ಬ್ಯಾಂಕ್ನೊಳಗೇ ಆಕೆಗೆ ಚಾಕುವಿನಿಂದ ಹಲ್ಲೆ ಮಾಡಿ ಇಬ್ಬರೂ ಓಡಿಹೋಗಿದ್ದಾರೆ. ಆರೋಪಿಗಳನ್ನು ಹಿಡಿಯಲು ಬ್ಯಾಂಕ್ ಸಿಬ್ಬಂದಿ ಮತ್ತು ಅಲ್ಲಿಯೇ ಇದ್ದ ಇತರರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಇಂಡಿಯಾ ಟುಡೆ ವರದಿಯಲ್ಲಿ ತಿಳಿಸಿದೆ. ಹಲ್ಲೆಗೊಳಗಾಗಿ ರಕ್ತದ ಮಡುವಲ್ಲಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅನಿರೀಕ್ಷಿತವಾಗಿ ನಡೆದ ಈ ಘಟನೆ ನೋಡಿ ಇಡೀ ಬ್ಯಾಂಕ್ ಬೆಚ್ಚಿಬಿದ್ದಿದೆ.
ದಂಪತಿ ಒಟ್ಟಿಗೇ ಇರಲಿಲ್ಲ
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಬ್ಯಾಂಕ್ ಸಿಬ್ಬಂದಿ ಕೂಡಲೇ ಪೊಲಿಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆಯನ್ನೂ ನಡೆಸಿದ್ದಾರೆ. ಪ್ರೇಮಲತಾ ಮತ್ತು ವೆಲೈಚಾಮಿ ಒಟ್ಟಿಗೇ ಇರಲಿಲ್ಲ. ಮದುವೆಯಾಗಿ ಕೆಲ ವರ್ಷಗಳ ಬಳಿಕ ವೆಲೈಚಾಮಿಗೆ ಪತ್ನಿಯ ಮೇಲೆ ಅನುಮಾನ ಶುರುವಾಯಿತು. ಆಕೆ ಯಾರೊಂದಿಗೋ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆಕೆಯ ಮೇಲೆ ದೌರ್ಜನ್ಯ ಎಸಗಲು ಪ್ರಾರಂಭಿಸಿದ್ದ. ನಂತರ ಇಬ್ಬರೂ ಪ್ರತ್ಯೇಕವಾಗಿದ್ದರೂ ಕೂಡ ವೆಲೈಚಾಮಿ ದುಡ್ಡಿಗಾಗಿ ಅವಳ ಬೆನ್ನುಬಿದ್ದಿದ್ದ. ಅವಳ ಆಸ್ತಿಯನ್ನು ತನಗೇ ಕೊಡುವಂತೆ ಒತ್ತಡ ತರುತ್ತಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ. ಬ್ಯಾಂಕ್ನಲ್ಲಿ ಘಟನೆ ನಡೆದಾಗ ಇದ್ದ ಗ್ರಾಹಕರಲ್ಲಿ ಒಬ್ಬರು ಅದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದು, ಅದನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ನೆಲ ಜಲ ವಿಚಾರದಲ್ಲಿ ನಾವೆಲ್ಲಾ ಒಂದು: ಮೇಕೆದಾಟು ಯೋಜನೆಗಾಗಿ ತೊಡೆತಟ್ಟಿದ ಸರ್ವಪಕ್ಷಗಳ ನಾಯಕರು!
Published On - 4:05 pm, Tue, 22 March 22