ನಾಳೆ ಶಹೀದ್ ಭಗತ್​ ಸಿಂಗ್ ಪ್ರಾಣ ತ್ಯಾಗದ ದಿನ; ದೆಹಲಿ ಸಿಎಂ ಕೇಜ್ರಿವಾಲ್ ದೇಶಕ್ಕೆ​ ಘೋಷಿಸಿದರು ಭರ್ಜರಿ ಕೊಡುಗೆ! ಏನದು?

Shaheed Bhagat Singh Armed Forces Preparatory School: ಇದು ರೆಸಿಡೆನ್ಶಿಯಲ್ ಸ್ಕೂಲ್. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಇಲ್ಲಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ನಿವೃತ್ತ ಸೇನಾನಿಗಳು ಇಲ್ಲಿನ ಅಧ್ಯಾಪಕರಾಗಲಿದ್ದಾರೆ. ಮಾರ್ಚ್​ 27 ರಂದು 9ನೇ ತರಗತಿಗೆ ಮತ್ತು ಮಾರ್ಚ್​ 28 ರಂದು 11ನೇ ತರಗತಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

ನಾಳೆ ಶಹೀದ್ ಭಗತ್​ ಸಿಂಗ್ ಪ್ರಾಣ ತ್ಯಾಗದ ದಿನ; ದೆಹಲಿ ಸಿಎಂ ಕೇಜ್ರಿವಾಲ್ ದೇಶಕ್ಕೆ​ ಘೋಷಿಸಿದರು ಭರ್ಜರಿ ಕೊಡುಗೆ! ಏನದು?
ನಾಳೆ ಶಹೀದ್ ಭಗತ್​ ಸಿಂಗ್ ಪ್ರಾಣ ತ್ಯಾಗ ಮಾಡಿದ ದಿನ; ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ದೇಶಕ್ಕೆ​ ಘೋಷಿಸಿದರು ಭರ್ಜರಿ ಕೊಡುಗೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 22, 2022 | 4:25 PM

ನವದೆಹಲಿ: ಪಂಜಾಬ್ ಅಸೆಂಬ್ಲಿ ಗದ್ದುಗೆ ಗೆದ್ದು ಬೀಗಿರುವ ಆಮ್​ ಆದ್ಮಿ ಪಕ್ಷವು ಈಗ ರಾಷ್ಟ್ರೀಯ ಪಕ್ಷವಾಗುತ್ತಾ ದಾಪುಗಾಲು ಹಾಕುತ್ತಾ ಸಾಗಿದೆ. ಈ ಮಧ್ಯೆ ಆಪ್​ ಅಧಿನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ತಮ್ಮ ಆಡಳಿತದಲ್ಲಿ ಕೆಲ ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲೊಂದು ಸೈನಿಕ ಶಾಲೆ ತೆರೆದು, ಅದಕ್ಕೆ ಶಹೀದ್ ಭಗತ್​ ಸಿಂಗ್​ ಸೈನಿಕ ಶಾಲೆ ಎಂದು ನಾಮಕರಣ ಮಾಡಲು ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಭಗತ್ ಸಿಂಗ್ – ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ (Shaheed Bhagat Singh). ಭಗತ್​ ಸಿಂಗ್ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ, ತಮ್ಮ 23ನೇ ಬಿಸಿಯೌವ್ವನದ ವಯಸ್ಸಿನಲ್ಲಿ, 1931ರ ಮಾರ್ಚ್​ 23 ರಂದು ಪ್ರಾಣ ತ್ಯಾಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (CM Arvind Kejriwal)​ ಈ ನಿರ್ಧಾರ (Shaheed Bhagat Singh Armed Forces Preparatory School) ಪ್ರಕಟಿಸಿರುವುದು ದೇಶಾಭಿಮಾನಿಗಳಲ್ಲಿ ಹೆಮ್ಮೆ ಮೂಡಿಸಿದೆ.

ಶಹೀದ್ ಭಗತ್​ ಸಿಂಗ್ ಉಚಿತ​ ಸೈನಿಕ ಶಾಲೆ! ಎರಡು ವರ್ಷಗಳ ಹಿಂದೆಯೇ ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಈ ಸಂಬಂಧ ಒಂದು ಘೋಷಣೆ ಮಾಡಿದ್ದರು. ಸೈನಿಕ ಶಾಲೆಯೊಂದನ್ನು ತೆರೆದು, ಅದರಲ್ಲಿ ಭದ್ರತಾ ಪಡೆಗಳಿಗೆ ಬೇಕಾಗುವಂತಹ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಈ ಶಾಲೆಯ ಧ್ಯೇಯೋದ್ದೇಶವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ನ್ಯಾಷನಲ್ ಡಿಫೆನ್ಸ್​ ಅಕಾಡೆಮಿ (NDA) ಮಾದರಿಯಲ್ಲಿ ಇದು ಕಾರ್ಯಗತವಾಗಲಿದೆ. ಗಮನಾರ್ಹವೆಂದರೆ ಇದು ಸಂಪೂರ್ಣ ಉಚಿತ ಶಾಲೆಯಾಗಲಿದೆ. ದೆಹಲಿ ವಿಶ್ವವಿದ್ಯಾಲಯದಡಿ ಈಗಾಗಲೇ ಶಹೀದ್ ಭಗತ್​ ಸಿಂಗ್ ಕಾಲೇಜು ಒಂದು (Shaheed Bhagat Singh College) ಕಾರ್ಯನಿರ್ವಹಿಸುತ್ತಿದೆ. ಅದು 1967ರಲ್ಲಿ ಸ್ಥಾಪನೆಗೊಂಡಿದೆ.

ನೂತನ ಸೇನಾ ಕಾಲೇಜು ಸ್ಥಾಪನೆ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಅವರು ನೂತನ ಕಾಲೇಜಿನ ಹೆಸರನ್ನು ಸಹ ಪ್ರಕಟಿಸಿದರು. ಅದು ದೆಹಲಿ ಸರ್ಕಾರದ ಶಹೀದ್ ಭಗತ್​ ಸಿಂಗ್ ಸಶಸ್ತ್ರ ಸೇನಾಪಡೆಗಳ ಪ್ರಿಪರೇಟರಿ ಸ್ಕೂಲ್​ (Delhi govt’s Shaheed Bhagat Singh Armed Forces Preparatory School). 9ನೇ ತರಗತಿ ಮತ್ತು 11 ನೇ ತರಗತಿಗೆ ಇಲ್ಲಿ ಪ್ರವೇಶ ನೀಡಲಾಗುವುದು. 100-100 ಸೀಟುಗಳನ್ನು ನಿಗದಿಪಡಿಸಲಾಗಿದೆ. ಆದರೆ 200 ಸೀಟುಗಳಿಗೆ ಈಗಾಗಲೇ 18,000 ವಿದ್ಯಾರ್ಥಿಗಳು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಝರೋದಾ ಕಲಾನ್​ನಲ್ಲಿ (Jharoda Kalan ) 14 ಎಕರೆ ಜಮೀನಿನಲ್ಲಿ ಅತ್ಯಾಧುನಿಕ ರೀತಿಯಲ್ಲಿ ಈ ಶಾಲೆ ನಿರ್ಮಾಣವಾಗಲಿದೆ. ಇದು ರೆಸಿಡೆನ್ಶಿಯಲ್ ಸ್ಕೂಲ್. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಇಲ್ಲಿ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ನಿವೃತ್ತ ಸೇನಾನಿಗಳು ಇಲ್ಲಿನ ಅಧ್ಯಾಪಕರಾಗಲಿದ್ದಾರೆ. ಮಾರ್ಚ್​ 27 ರಂದು 9ನೇ ತರಗತಿಗೆ ಮತ್ತು ಮಾರ್ಚ್​ 28 ರಂದು 11ನೇ ತರಗತಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

Published On - 4:21 pm, Tue, 22 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ