AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಈ ಬಾರಿಯೂ ಇ.ಡಿ. ವಿಚಾರಣೆಗೆ ಹಾಜರಾಗದ ಅಭಿಷೇಕ್ ಬ್ಯಾನರ್ಜಿ ಪತ್ನಿ

ಅಭಿಷೇಕ್​ ಬ್ಯಾನರ್ಜಿಯನ್ನು ಸೋಮವಾರ ಸುಮಾರು 8 ತಾಸುಗಳ ಕಾಲ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಇ.ಡಿ. ತಮ್ಮನ್ನು ದೆಹಲಿಗೆ ಕರೆಸಿ ವಿಚಾರಣೆ ನಡೆಸುತ್ತಿರುವುದಕ್ಕೆ ಅಭಿಷೇಕ್​ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಈ ಬಾರಿಯೂ ಇ.ಡಿ. ವಿಚಾರಣೆಗೆ ಹಾಜರಾಗದ ಅಭಿಷೇಕ್ ಬ್ಯಾನರ್ಜಿ ಪತ್ನಿ
ಅಭಿಷೇಕ್ ಬ್ಯಾನರ್ಜಿ ಮತ್ತು ರುಜಿರಾ ಬ್ಯಾನರ್ಜಿ
Follow us
TV9 Web
| Updated By: Lakshmi Hegde

Updated on: Mar 22, 2022 | 3:46 PM

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಪಡೆದಿರುವ ತೃಣಮೂಲ ಕಾಂಗ್ರೆಸ್​ ಸಂಸದ, ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಸಂಬಂಧಿ ಅಭಿಷೇಕ್​ ಬ್ಯಾನರ್ಜಿಯವರ ಪತ್ನಿ ರುಜಿರಾ ಬ್ಯಾನರ್ಜಿ ಈ ಬಾರಿಯೂ ವಿಚಾರಣೆಗೆ ಹಾಜರಾಗಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಅಭಿಷೇಕ್​ ಬ್ಯಾನರ್ಜಿ ಮತ್ತು ರುಜಿರಾ ಬ್ಯಾನರ್ಜಿ ಇಬ್ಬರಿಗೂ ಇ.ಡಿ. ನೋಟಿಸ್​ ನೀಡಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇ.ಡಿ. ವಿಚಾರಣೆಯಿಂದ ನಮಗೆ ವಿನಾಯಿತಿ ನೀಡಬೇಕು ಎಂದು ದಂಪತಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಯಾವುದೇ ವಿನಾಯಿತಿ ನೀಡದ ಹಿನ್ನೆಲೆಯಲ್ಲಿ ಮಂಗಳವಾರ (ಮಾ.22) ವಿಚಾರಣೆಗೆ ಹಾಜರಾಗುವಂತೆ ರುಜಿರಾಗೆ ಇ.ಡಿ.ನೋಟಿಸ್​ ನೀಡಿತ್ತು. ಹಾಗಿದ್ದಾಗ್ಯೂ ರುಜಿರಾ ಆಗಮಿಸಿಲ್ಲ ಎನ್ನಲಾಗಿದೆ.

ಇನ್ನು ಅಭಿಷೇಕ್​ ಬ್ಯಾನರ್ಜಿಯನ್ನು ಸೋಮವಾರ ಸುಮಾರು 8 ತಾಸುಗಳ ಕಾಲ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಇ.ಡಿ. ತಮ್ಮನ್ನು ದೆಹಲಿಗೆ ಕರೆಸಿ ವಿಚಾರಣೆ ನಡೆಸುತ್ತಿರುವುದಕ್ಕೆ ಅಭಿಷೇಕ್​ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇ.ಡಿ. ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದೆ. ನನ್ನನ್ನು ಮತ್ತು ನನ್ನ ಪತ್ನಿಯನ್ನು ಅಧಿಕಾರಿಗಳು ಕೋಲ್ಕತ್ತದಲ್ಲೇ ವಿಚಾರಣೆ ನಡೆಸಲಿ, ಅದು ಬಿಟ್ಟು ದೆಹಲಿಗೆ ಯಾಕೆ ಕರೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನು ರುಜಿರಾ ಬ್ಯಾನರ್ಜಿ ಈ ಹಿಂದೆ 2021ರ ಸೆಪ್ಟೆಂಬರ್​​ನಲ್ಲಿ ಕೂಡ ಇ.ಡಿ.ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರು. ಕೊವಿಡ್ 19 ಸಾಂಕ್ರಾಮಿಕವಿದೆ. ನಾನೀಗ ದೆಹಲಿಗೆ ಪ್ರಯಾಣ ಮಾಡುವುದು ಅಪಾಯ. ನನಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ನನಗೇನಾದರೂ ಆದರೆ, ಅವರಿಗೂ ಅಪಾಯ. ಹೀಗಾಗಿ ದೆಹಲಿಗೆ ಬರುವುದಿಲ್ಲ ಎಂದು ಆಗಸ್ಟ್​ 31ರಂದು ಇ.ಡಿ.ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಭಿಷೇಕ್ ಬ್ಯಾನರ್ಜಿ ಲೋಕಸಭೆಯಲ್ಲಿ ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಸ್ಥಾನವನ್ನು ಪ್ರತಿನಿಧಿಸುತ್ತಿದ್ದು, ತೃಣಮೂಲ ಕಾಂಗ್ರೆಸ್ (TMC) ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅಸನ್ಸೋಲ್ ಮತ್ತು ಸುತ್ತಮುತ್ತಲಿನ ಕುನುಸ್ತೋರಿಯಾ ಮತ್ತು ಕಾಜೋರಾ ಪ್ರದೇಶಗಳಲ್ಲಿನ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದ ಬಹುಕೋಟಿ ಕಲ್ಲಿದ್ದಲು ಕಳ್ಳತನ ಹಗರಣದ ಆರೋಪದ ಮೇಲೆ ಸಿಬಿಐಯ 2020 ರ ಎಫ್‌ಐಆರ್ ಅನ್ನು ಅಧ್ಯಯನ ಮಾಡಿದ ನಂತರ ಇಡಿ ಪಿಎಂಎಲ್‌ಎ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಅಂದಿನಿಂದಲೂ ತನಿಖೆ ನಡೆಯುತ್ತಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿಯೇ ಈ ದಂಪತಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಬಾಯಿಯ ದುರ್ವಾಸನೆಗೆ ಕಾರಣವಾಗುವ ಮತ್ತು ತಡೆಯುವ ಆಹಾರಗಳು ಯಾವುವು? ಇಲ್ಲಿದೆ ಮಾಹಿತಿ

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ