AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯಿಯ ದುರ್ವಾಸನೆಗೆ ಕಾರಣವಾಗುವ ಮತ್ತು ತಡೆಯುವ ಆಹಾರಗಳು ಯಾವುವು? ಇಲ್ಲಿದೆ ಮಾಹಿತಿ

ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ದುರ್ವಾಸನೆಯ ವಿರುದ್ಧ ಹೋರಾಡುವ ನೈಸರ್ಗಿಕ ಸಂಯುಕ್ತಗಳನ್ನು ಹೊಂದಿದೆ

ಬಾಯಿಯ ದುರ್ವಾಸನೆಗೆ ಕಾರಣವಾಗುವ ಮತ್ತು ತಡೆಯುವ ಆಹಾರಗಳು ಯಾವುವು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Mar 22, 2022 | 3:36 PM

Share

ಸುಂದರ ಮುಖ, ಬಿಳಿಯ ಹಲ್ಲುಗಳನ್ನಿಟ್ಟುಕೊಂಡು ಚಂದದ ನಗೆ ಬೀರಿದರೆ ಎಲ್ಲರನ್ನು ಸೆಳೆಯುತ್ತದೆ. ಆದರೆ ಅದೇ ನಗುವಿನೊಂದಿಗೆ ಬಾಯಿಯಿಂದ ದುರ್ವಾಸನೆ (Bad Breath) ಬಂದರೆ ಎಂತಹವರಿಗೂ ಅಸಹ್ಯವಾಗುತ್ತದೆ. ಬಾಯಿಯ ಉಸಿರಾಟ  ವಯಕ್ತಿಕ ಸ್ವಚ್ಛತೆಯಾಗಿದೆ. ಅದನ್ನು ಸರಿಯಾಗಿಟ್ಟುಕೊಂಡರೆ ಒಂದು ರೀತಿಯ ಆತ್ಮವಿಶ್ವಾಸವೂ ಮೂಡುತ್ತದೆ. ಬಾಯಿಯ ದುರ್ವಾಸನೆ ಆರೋಗ್ಯಕ್ಕೆ (Health) ಸಂಬಂಧಿಸಿದ ಇತರ ಕೆಲವು ಕಾರಣಗಳಿಂದಾಗಿ ಕೂಡ ಸಂಭವಿಸುತ್ತದೆ. ತಜ್ಞರ ಪ್ರಕಾರ ಬಾಯಿಯ ವಾಸನೆಯು ರೋಗದ ಸಂಕೇತವೂ ಆಗಿರಬಹುದು. ಇನ್ನೂ ಕೆಲವೊಮ್ಮೆ ಸೇವಿಸಿದ ಆಹಾರದ ಪರಿಣಾಮ ಬಾಯಿಯಿಂದ ದುರ್ವಾಸನೆ ಹೊರಡುತ್ತದೆ. ಹಾಗಾದರೆ ಯಾವೆಲ್ಲಾ ಆಹಾರಗಳು ಬಾಯಿಯಿಂದ ದುರವಾಸನೆ ಹೊರಬರುವಂತೆ ಮಾಡುತ್ತದೆ. ಯಾವ ಆಹರಗಳಿಂದ ಬಾಯಿಯ ವಾಸನೆಯನ್ನು ಹೋಗಲಾಡಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ,

ಈ ಆಹಾರಗಳು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ:

  1. ಮುಖ್ಯವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ. ಅವುಗಳು ಹೆಚ್ಚಿನ ಪ್ರಮಾಣದ ಸಲ್ಫರ್ ಅನ್ನು ಹೊಂದಿರುತ್ತವೆ, ಇದರ ಸೇವನೆಯ ನಂತರ ತಕ್ಷಣವೇ ಅನಪೇಕ್ಷಿತ ಪರಿಣಾಮಕ್ಕೆ ಕಾರಣವಾಗುತ್ತದೆ. ಸಲ್ಫರ್ ನಮ್ಮ ದೇಹದ ರಕ್ತಕ್ಕೆ ಹೀರಲ್ಪಡುತ್ತದೆಇದರಿಂದ ನಾವು ಉಸಿರಾಡುವಾಗ ಬಿಡುಗಡೆಯಾಗುತ್ತದೆ, ಇದು ಕೆಟ್ಟ ಉಸಿರಾಟಕ್ಕೆ ಕಾರಣವಾಗುತ್ತದೆ.
  2. ಚೀಸ್ ಸಲ್ಫರ್ ಸಂಯುಕ್ತಗಳನ್ನು ಉತ್ಪಾದಿಸುತ್ತದೆ. ಇದರಿಂದ ಬಾಯಿಯಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ಬ್ಯಾಕ್ಟೀರಿಯಾದೊಂದಿಗೆ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ, ಹೈಡ್ರೋಜನ್ ಸಲ್ಫೈಡ್ ಅನ್ನು ಉತ್ಪಾದಿಸಬಹುದು, ಇದು ಅತ್ಯಂತ ಅಹಿತಕರ ವಾಸನೆಯನ್ನು ಹೊಂದಿರುತ್ತದೆ.
  3. ಕಾಫಿ ಮತ್ತು ಮದ್ಯದಂತಹ ಪಾನೀಯಗಳೂ ಕೂಡ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ಇವೆರಡೂ ಒಬ್ಬರ ಬಾಯಿಯನ್ನು ನಿರ್ಜಲೀಕರಣಗೊಳಿಸುತ್ತದೆ. ಇದು ದುರ್ವಾಸನೆಯ ಬ್ಯಾಕ್ಟೀರಿಯಾವನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಆಲ್ಕೋಹಾಲ್ ದೇಹದ ರಕ್ತಪ್ರವಾಹದಲ್ಲಿ ದೀರ್ಘಕಾಲದವರೆಗೆ ಇರುವುದರಿಂದ, ಅದರ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ.
  4. ಸಕ್ಕರೆ ಬಾಯಿಯಲ್ಲಿ ಕ್ಯಾಂಡಿಡಾ ಯೀಸ್ಟ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಕ್ಕರೆ ಸೇವನೆಯ ಹೆಚ್ಚಳವನ್ನು ಬಿಳಿ ನಾಲಿಗೆಯಿಂದ ಗುರುತಿಸಬಹುದು ಹೀಗಾಗಿ ಆಹಾರ ಅಭ್ಯಾಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಮುಖ್ಯವಾಗಿದೆ.

ಈ ಆಹಾರಗಳು ಬಾಯಿಯ ದುರ್ವಾಸನೆಯಿಂದ ದೂರವಿಡುತ್ತದೆ:

  1. ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ದುರ್ವಾಸನೆಯ ವಿರುದ್ಧ ಹೋರಾಡುವ ನೈಸರ್ಗಿಕ ಸಂಯುಕ್ತಗಳನ್ನು ಹೊಂದಿದೆ ಮತ್ತು ಜಲಸಂಚಯನ ಮಟ್ಟವನ್ನು ಅಧಿಕವಾಗಿರಿಸುತ್ತದೆ, ಇದು ಕೆಟ್ಟ ಉಸಿರಾಟವನ್ನು ತಡೆಯುತ್ತದೆ.
  2. ಪುದೀನ ಎಲೆಗಳು ಮತ್ತು ಸೊಪ್ಪಿನ ಸೇವನೆಯು ಉಸಿರಾಟವನ್ನು ಸುಧಾರಿಸುತ್ತದೆ. ಈ ಎರಡೂ ಗಿಡಮೂಲಿಕೆಗಳು ನೈಸರ್ಗಿಕ ರಾಸಾಯನಿಕಗಳನ್ನು ಒಳಗೊಂಡಿದ್ದು ಅದು ಕೆಟ್ಟ ಉಸಿರಾಟದ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಪದಾರ್ಥಗಳನ್ನು ಸುಲಭವಾಗಿ ಸಲಾಡ್ ಡ್ರೆಸಿಂಗ್‌ಗಳು, ಮುಖ್ಯ ಭಕ್ಷ್ಯಗಳಿಗೆ ಅಳವಡಿಸಿಕೊಳ್ಳಬಹುದು.
  3. ಲವಂಗಗಳು ಬ್ಯಾಕ್ಟೀರಿಯಾ ವಿರೋಧಿ. ತ್ವರಿತ ತಾಜಾ ಉಸಿರನ್ನು ಪಡೆಯಲು ಲವಂಗದ ಸಂಪೂರ್ಣ ತುಂಡುಗಳನ್ನು ಅಗಿಯಬಹುದು ಅಥವಾ ಊಟದ ನಂತರ ಸುಲಭವಾಗಿ ಸೇವಿಸಲು ಚಹಾವನ್ನಾಗಿ ಮಾಡಬಹುದು.
  4. ಮೊಸರು ಬಾಯಿಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ತಕ್ಷಣದ ಫಲಿತಾಂಶವನ್ನು ಉಂಟುಮಾಡದಿದ್ದರೂ, ದೀರ್ಘಕಾಲದವರೆಗೆ ಕೆಲಸ ಮಾಡುತ್ತದೆ ಮತ್ತು ಕೆಟ್ಟ ಉಸಿರಾಟದ ವಿರುದ್ಧ ಹೋರಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ:

ಈ ಜೋಡಿ ಮದುವೆಯಾಗಿ 30 ವರ್ಷವಾದರೂ ಜಗಳವನ್ನೇ ಆಡಿಲ್ಲವಂತೆ: ಸುಂದರ ಸಾಂಗತ್ಯಕ್ಕೆ ನೀಡಿದ ಟಿಪ್ಸ್​ ಇಲ್ಲಿದೆ ನೋಡಿ

Published On - 3:34 pm, Tue, 22 March 22

300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ