ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಿದವರಿಗೆ 5 ಸಾವಿರ ರೂ.ನಗದು ನೀಡುವುದಾಗಿ ತಮಿಳುನಾಡು ಸಿಎಂ ಘೋಷಣೆ
ಸಾಮಾನ್ಯವಾಗಿ ರಸ್ತೆಯಲ್ಲಿ ಯಾರಿಗಾದರೂ ಅಪಘಾತವಾದರೆ, ವಾಹನ ಡಿಕ್ಕಿಯಾಗಿ (Accident) ಬಿದ್ದಿದ್ದರೆ, ತಮ್ಮದೇ ವಾಹನ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರೆ ಅವರಿಗೆ ಸಹಾಯ ಮಾಡಲು ಮುಂದಾಗುವವರು ತೀರ ಕಡಿಮೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಿದರೆ ಬದುಕುಳಿಯುವ ಸಾಧ್ಯತೆ ಇರುತ್ತದೆಯಾದರೂ ಅದೆಷ್ಟೋ ಮಂದಿ ಚಿಕಿತ್ಸೆ ಸಿಗಲು ತಡವಾಗಿ ಸಾಯುತ್ತಾರೆ. ಜನರಿಗೂ ಅಷ್ಟೇ ಹೀಗೆ ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಲ್ಲಿ ಬಿದ್ದವರನ್ನು ಮುಟ್ಟಲು ಭಯ. ಎಲ್ಲಿ ಕೇಸ್ ನಮ್ಮ ತಲೆಗೆ ಸುತ್ತಿಕೊಳ್ಳುತ್ತದೋ, ಅವರು ಸತ್ತರೆ ಪೊಲೀಸರು ನಮ್ಮನ್ನು ಹಿಡಿದುಕೊಳ್ಳುತ್ತಾರೆ, […]
ಸಾಮಾನ್ಯವಾಗಿ ರಸ್ತೆಯಲ್ಲಿ ಯಾರಿಗಾದರೂ ಅಪಘಾತವಾದರೆ, ವಾಹನ ಡಿಕ್ಕಿಯಾಗಿ (Accident) ಬಿದ್ದಿದ್ದರೆ, ತಮ್ಮದೇ ವಾಹನ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರೆ ಅವರಿಗೆ ಸಹಾಯ ಮಾಡಲು ಮುಂದಾಗುವವರು ತೀರ ಕಡಿಮೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಿದರೆ ಬದುಕುಳಿಯುವ ಸಾಧ್ಯತೆ ಇರುತ್ತದೆಯಾದರೂ ಅದೆಷ್ಟೋ ಮಂದಿ ಚಿಕಿತ್ಸೆ ಸಿಗಲು ತಡವಾಗಿ ಸಾಯುತ್ತಾರೆ. ಜನರಿಗೂ ಅಷ್ಟೇ ಹೀಗೆ ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಲ್ಲಿ ಬಿದ್ದವರನ್ನು ಮುಟ್ಟಲು ಭಯ. ಎಲ್ಲಿ ಕೇಸ್ ನಮ್ಮ ತಲೆಗೆ ಸುತ್ತಿಕೊಳ್ಳುತ್ತದೋ, ಅವರು ಸತ್ತರೆ ಪೊಲೀಸರು ನಮ್ಮನ್ನು ಹಿಡಿದುಕೊಳ್ಳುತ್ತಾರೆ, ಯಾರಿಗೆ ಬೇಕು ಈ ಜಂಜಾಟ ಎಂದು ಭಾವಿಸಿ, ಪೊಲೀಸರಿಗೆ ಫೋನ್ ಮಾಡಿ ಸುಮ್ಮನೆ ನೋಡುತ್ತ ನಿಲ್ಲುತ್ತಾರೆ. ಇನ್ನು ಕೆಲವೇ ಕೆಲವರು ಮಾತ್ರ ಏನಾದರಾಗಲಿ ಎಂದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ.
ಈ ಮಧ್ಯೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಮಾಡಿರುವ ಘೋಷಣೆಯೊಂದು ತುಂಬ ವಿಶೇಷ ಎನ್ನಿಸಿದೆ. ರಾಜ್ಯದಲ್ಲಿ ರಸ್ತೆ, ವಾಹನ ಅಪಘಾತವಾದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಕೂಡಲೇ ಯಾರು ಆಸ್ಪತ್ರೆಗೆ ದಾಖಲು ಮಾಡುತ್ತಾರೋ, ಈ ಮೂಲಕ ಅವರಿಗೆ ಆದಷ್ಟು ಬೇಗ ಚಿಕಿತ್ಸೆ ಸಿಗಲು ಕಾರಣವಾಗುತ್ತಾರೋ ಅವರಿಗೆ ನಗದು ಬಹುಮಾನ ಮತ್ತು ಒಂದು ಶ್ಲಾಘನೆ ಪ್ರಮಾಣ ಪತ್ರ ನೀಡುವುದಾಗಿ ಘೋಷಿಸಿದ್ದಾರೆ.
ಟ್ವೀಟ್ ಮಾಡಿರುವ ಎಂ.ಕೆ.ಸ್ಟಾಲಿನ್, ಯಾರೇ ಅಪಘಾತಕ್ಕೀಡಾಗಲಿ, ಅವರಿಗೂ ಒಂದು ಗೋಲ್ಡನ್ ಪೀರಿಯಡ್ ಅಂತಿರುತ್ತದೆ. ಈ ಅವಧಿಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕರೆ, ಜೀವಕ್ಕೆ ಅಪಾಯ ಆಗುವ ಸಂದರ್ಭ ಕಡಿಮೆ ಇರುತ್ತದೆ. ಆದರೆ ಅದೆಷ್ಟೋ ಜನರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಡವಾಗಿಯೇ ಸಾಯುತ್ತಾರೆ. ಹೀಗೆ ಅಪಘಾತಕ್ಕೆ ಒಳಗಾದವರನ್ನು ಆ ಗೋಲ್ಡನ್ ಪೀರಿಯಡ್ನಲ್ಲಿ ಯಾರು ಆಸ್ಪತ್ರೆಗೆ ದಾಖಲಿಸುತ್ತಾರೋ ಅವರಿಗೆ 5 ಸಾವಿರ ರೂಪಾಯಿ ನಗದು ಬಹುಮಾನ, ಪ್ರಮಾಣ ಪತ್ರ ಕೊಡುವುದಾಗಿ ತಿಳಿಸಿದ್ದಾರೆ.
சாலை விபத்தில் சிக்கிய நபர்களை உடனடியாக, Golden Hours-க்குள் மருத்துவமனைக்கு கொண்டுவந்து, உயிரைக் காக்கக்கூடிய மனிதநேயப் பண்போடு பணியாற்றும் நல்ல உள்ளங்களுக்கு நற்சான்றிதழும், ரூ. 5,000 ரொக்கப்பரிசும் வழங்கப்படுகிறது என மாண்புமிகு முதலமைச்சர் @mkstalin அவர்கள் தெரிவித்துள்ளார். pic.twitter.com/57F8o7Cy6p
— CMOTamilNadu (@CMOTamilnadu) March 21, 2022
ಕೆಲವು ದಿನಗಳ ಹಿಂದೆ ಎಂ.ಕೆ.ಸ್ಟಾಲಿನ್ ಹೀಗಿದ್ದೇ ಒಂದು ವಿಶೇಷ ಯೋಜನೆ ಘೋಷಿಸಿದ್ದರು. ಅದರಡಿಯಲ್ಲಿ ರಾಜ್ಯದಲ್ಲಿ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡವರಿಗೆ ಮೊದಲ 48 ತಾಸುಗಳ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಹೇಳಿದ್ದರು. 408 ಖಾಸಗಿ ಮತ್ತು 201 ಸರ್ಕಾರಿ ಆಸ್ಪತ್ರೆಗಳು ಸೇರಿ ಒಟ್ಟು 609 ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದೆ ಎಂದಿದ್ದರು. ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆ (CMCHIS) ಸದಸ್ಯರು ಮತ್ತು ಸದಸ್ಯರಲ್ಲದವರಿಗೂ ಇದು ಅನ್ವಯ ಎಂದು ಹೇಳಿದ್ದರು.
ಇದನ್ನೂ ಓದಿ: China Plane Crash: ವಿಮಾನ ವೇಗವಾಗಿ ಕೆಳಗೆ ಬಿದ್ದ ವಿಡಿಯೋ ವೈರಲ್; ಪ್ರಯಾಣಿಕರು ಬದುಕುಳಿದ ಯಾವುದೇ ಕುರುಹೂ ಇಲ್ಲ
Published On - 5:42 pm, Mon, 21 March 22