Video: ಚೀನಾದಲ್ಲಿ 133 ಪ್ರಯಾಣಿಕರಿದ್ದ ವಿಮಾನ ಪತನ; ಪರ್ವತಗಳ ಮಧ್ಯೆ ಅಪಘಾತಕ್ಕೀಡಾದ ಫ್ಲೈಟ್​

ಚೀನಾ ಈಸ್ಟರ್ನ್​ ಏರ್​ಲೈನ್ಸ್​ ಎಂಬುದು ಶಾಂಘೈ ಮೂಲದ ವಿಮಾನಯಾನ ಸಂಸ್ಥೆ. ಚೀನಾದ ಮೂರು ಪ್ರಮುಖ ವಿಮಾನ ಯಾನ ಸ್ಂಸ್ಥೆಗಳಲ್ಲಿ ಇದೂ ಒಂದು. ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಒಟ್ಟು 248 ಪ್ರದೇಶಗಳಿಗೆ ಇದರ ವಿಮಾನಸೇವೆ ಇದೆ. 

Video: ಚೀನಾದಲ್ಲಿ 133 ಪ್ರಯಾಣಿಕರಿದ್ದ ವಿಮಾನ ಪತನ; ಪರ್ವತಗಳ ಮಧ್ಯೆ ಅಪಘಾತಕ್ಕೀಡಾದ ಫ್ಲೈಟ್​
ಚೀನಾ ವಿಮಾನ ಅಪಘಾತ
Follow us
TV9 Web
| Updated By: Lakshmi Hegde

Updated on:Mar 21, 2022 | 2:56 PM

ಚೀನಾ ಈಸ್ಟರ್ನ್​ ಏರ್​ಲೈನ್ಸ್​​ (600115.SS) ಗೆ ಸೇರಿದ ವಿಮಾನವೊಂದು ಇಂದು ದಕ್ಷಿಣ ಚೀನಾದ ಪರ್ವತಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ (China Plane Crashes).  ಕುನ್ಮಿಂಗ್ ಎಂಬ ನಗರದಿಂದ ಗುವಾಂಗ್ಝೌಕ್ಕೆ ಸಂಚಾರ ಮಾಡುತ್ತಿದ್ದ ಈ  ವಿಮಾನದಲ್ಲಿ ಸುಮಾರು 133 ಪ್ರಯಾಣಿಕರು ಇದ್ದರು. ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ 737-800 ವಿಮಾನ MU5735 ವುಝೌ ಬಳಿ ಅಪಘಾತಕ್ಕೀಡಾಗಿದ್ದು, ಗುಡ್ಡ ಪ್ರದೇಶದಿಂದ ಭರ್ಜರಿ ಹೊಗೆ ಏಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇದು ಸುಮಾರು ಆರು ವರ್ಷ ಹಳೇ ವಿಮಾನವಾಗಿದ್ದು, ಅಪಘಾತದಲ್ಲಿ ಯಾರಾದರೂ ಮೃತಪಟ್ಟಿದ್ದಾರಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಚೀನಾ ಈಸ್ಟರ್ನ್​ ಏರ್​ಲೈನ್ಸ್​ ಎಂಬುದು ಶಾಂಘೈ ಮೂಲದ ವಿಮಾನಯಾನ ಸಂಸ್ಥೆ. ಚೀನಾದ ಮೂರು ಪ್ರಮುಖ ವಿಮಾನ ಯಾನ ಸ್ಂಸ್ಥೆಗಳಲ್ಲಿ ಇದೂ ಒಂದು. ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಒಟ್ಟು 248 ಪ್ರದೇಶಗಳಿಗೆ ಇದರ ವಿಮಾನಸೇವೆ ಇದೆ.  ಈ ವಿಮಾನ ಕುನ್ಮಿಂಗ್​​ನಿಂದ ಮಧ್ಯಾಹ್ನ 1.11ಕ್ಕೆ ಹೊರಟಿದೆ. ಸುಮಾರು 2.22ರ ಹೊತ್ತಿಗೆ ಫ್ಲೈಟ್​ ಟ್ರ್ಯಾಕ್​ ಅಂತ್ಯಗೊಂಡಿತು. ಆಗ ವಿಮಾನ ಸಮುದ್ರ ಮಟ್ಟದಿಂದ ಸುಮಾರು 3225 ಅಡಿ ಎತ್ತರದಲ್ಲಿ, 376 ನಾಟ್​​ ವೇಗದಲ್ಲಿ  ಚಲಿಸುತ್ತಿತ್ತು ಎಂದು ಫ್ಲೈಟ್​ರಾಡಾರ್​ 24 ಎಂಬ ವೆಬ್​ಸೈಟ್​ ತಿಳಿಸಿದೆ. ಸರಿಯಾಗಿ ಹೋಗಿದ್ದರೆ 3.05ನಿಮಿಷದ ಹೊತ್ತಿಗೆ ಗುವಾಂಗ್ಝೌನಲ್ಲಿ ಲ್ಯಾಂಡ್ ಆಗಬೇಕಿತ್ತು ಎಂದೂ ಮಾಹಿತಿ ನೀಡಿದೆ.

ಚೀನಾದ ಒಟ್ಟಾರೆ ಏರ್​ಲೈನ್​ ಸಂಸ್ಥೆಗಳು ಅತ್ಯುತ್ತಮ ಮತ್ತು ಸುರಕ್ಷಿತ ಎಂದು ಹೇಳಲಾಗುತ್ತದೆ. ಚೀನಾದಲ್ಲಿ 2010ರಲ್ಲಿ 96 ಜನರಿದ್ದ  ಎಂಬ್ರೇರ್ ಇ ಪ್ರಾದೇಶಿಕ ಜೆಟ್​​ವೊಂದು ಅಪಘಾತಕ್ಕೀಡಾಗಿ, 46 ಮಂದಿ ಮೃತಪಟ್ಟಿದ್ದರು. ಇದು ಚೀನಾದ ಹೆನಾನ್​ ಏರ್​ಲೈನ್​ ಸಂಸ್ಥೆಯ ವಿಮಾನವಾಗಿದ್ದು, ಕೆಟ್ಟ ವಾತಾವರಣದ ಕಾರಣದಿಂದ ಅಪಘಾತ  ಸಂಭವಿಸಿತ್ತು.

ಇದನ್ನೂ ಓದಿ: Viral Photo: ಪೂಜೆ ವೇಳೆ ಅಮ್ಮ ಮಾಡಿದ ಆ ಒಂದು ಕೆಲಸದಿಂದ ಮುಜುಗರಕ್ಕೀಡಾದ ಮಗ; ಫೋಟೋ ವೈರಲ್

Published On - 2:28 pm, Mon, 21 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್