Crime News: ಲಂಡನ್ನಲ್ಲಿ ಭಾರತ ಮೂಲದ ಯುವತಿಯ ಕಗ್ಗೊಲೆ; ಪ್ರಿಯಕರನ ಬಂಧನ
ಸಬಿತಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ 22 ವರ್ಷದ ಟ್ಯುನೀಷಿಯಾದ ವ್ಯಕ್ತಿ ಮಾರೂಫ್ನನ್ನು ಬಂಧಿಸಲಾಗಿದೆ.
ಲಂಡನ್: ಲಂಡನ್‌ನಲ್ಲಿರುವ (London) ವಿದ್ಯಾರ್ಥಿ ನಿಲಯದಲ್ಲಿ ಭಾರತೀಯ ಮೂಲದ ಬ್ರಿಟನ್ (Britain) ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿರುವ ಆರೋಪದ ಮೇಲೆ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಟ್ಯುನಿಷಿಯಾ ಪ್ರಜೆಯನ್ನು ಬಂಧಿಸಿದ್ದಾರೆ. ಲಂಡನ್‌ನ ಕ್ಲರ್ಕೆನ್‌ವೆಲ್ ಪ್ರದೇಶದ ಅರ್ಬರ್ ಹೌಸ್ ವಿದ್ಯಾರ್ಥಿ ಫ್ಲಾಟ್‌ನಲ್ಲಿ 19 ವರ್ಷದ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಸಬಿತಾ ಥನ್ವಾನಿ ಕುತ್ತಿಗೆಗೆ ಗಂಭೀರವಾದ ಗಾಯಗಳಾಗಿ, ಶನಿವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾರೂಫ್ ಸಬಿತಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಆಕೆಯ ಸಾವಿನ ಹಿಂದೆ ಯಾರ ಕೈವಾಡವಿದೆ ಎಂದು ಖಚಿತವಾಗಿ ಗೊತ್ತಾಗಿಲ್ಲ. ಸಬಿತಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ 22 ವರ್ಷದ ಟ್ಯುನೀಷಿಯಾದ ವ್ಯಕ್ತಿ ಮಾರೂಫ್ನನ್ನು ಬಂಧಿಸಲಾಗಿದೆ. ಆತ ಕೊಲೆಯ ಬಳಿಕ ನಾಪತ್ತೆಯಾಗಿದ್ದ. ಹೀಗಾಗಿ, ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಆತನ ವಿವರವನ್ನು ಹಾಕಿ, ಆತನನ್ನು ಪತ್ತೆಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ವಾನಿಯೊಂದಿಗೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ 22 ವರ್ಷದ ಮಹರ್ ಮಾರೂಫ್ ಎಂಬ ವ್ಯಕ್ತಿಗೆ ಅಲ್ಲಿನ ಪೊಲೀಸರು ಸಮನ್ಸ್ ಜಾರಿ ಮಾಡಿ, ಆತನನ್ನು ಬಂಧಿಸಿದ್ದಾರೆ. ಸಬಿತಾ ತಮ್ಮ 19 ವರ್ಷಗಳ ಜೀವನದಲ್ಲಿ ಪ್ರತಿದಿನ ನಮಗೆ ಸ್ಫೂರ್ತಿ ನೀಡಿದ್ದರು. ಎಲ್ಲರಿಗೂ ಸಹಾಯ ಮಾಡುವುದು ಅವರ ಉದ್ದೇಶವಾಗಿತ್ತು. ಇದಕ್ಕಾಗಿಯೇ ಅವರು ಸಿಟಿ ಯೂನಿವರ್ಸಿಟಿಯಲ್ಲಿ ಮನೋವಿಜ್ಞಾನವನ್ನು ಓದುತ್ತಿದ್ದರು. ತನ್ನ ಅಲ್ಪಾವಧಿಯಲ್ಲಿ ಆಕೆ ಅನೇಕರಿಗೆ ಸಹಾಯ ಮಾಡಿದ್ದಳು. ಸಬಿತಾ ಯಾರಿಗೂ ಕೆಟ್ಟದ್ದನ್ನು ಬಯಸಲಿಲ್ಲ. ಏಕೆಂದರೆ ಅವಳ ಹೃದಯದಲ್ಲಿ ಯಾವುದೇ ಕೆಟ್ಟತನವಿರಲಿಲ್ಲ ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ.
ಇದನ್ನೂ ಓದಿ: Murder: ಮನೆಯೊಳಗೆ ಮಗ, ಸೊಸೆ, ಮೊಮ್ಮಕ್ಕಳನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೃದ್ಧ
Murder: ಹೆಂಡತಿಗೆ ಹೊಡೆದು ಕೊಂದು, ಆಕಸ್ಮಿಕವಾಗಿ ಬಿದ್ದು ಸತ್ತಿದ್ದಾಳೆಂದು ಕತೆ ಕಟ್ಟಿದ ಗಂಡ
Published On - 7:21 pm, Mon, 21 March 22