Murder: ಮನೆಯೊಳಗೆ ಮಗ, ಸೊಸೆ, ಮೊಮ್ಮಕ್ಕಳನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೃದ್ಧ

ಕುಟುಂಬಸ್ಥರು ರಾತ್ರಿ ಮಲಗಿದ್ದಾಗ ಮನೆಯಿಂದ ಹೊರಗೆ ಬಂದ 79 ವರ್ಷದ ಹಮೀದ್ ಫೈಝಲ್ ತನ್ನ ಮಗ, ಮೊಮ್ಮಕ್ಕಳು ಮಲಗುವ ಕೋಣೆಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾನೆ

Murder: ಮನೆಯೊಳಗೆ ಮಗ, ಸೊಸೆ, ಮೊಮ್ಮಕ್ಕಳನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೃದ್ಧ
ಇಡುಕ್ಕಿಯಲ್ಲಿ ಕೊಲೆಯಾದ ಕುಟುಂಬ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 19, 2022 | 1:30 PM

ಇಡುಕ್ಕಿ: ಕೇರಳದ ತೊಡುಪುಳದ ಚೀನಿಕುಜಿಯಲ್ಲಿ ವೃದ್ಧನೊಬ್ಬ ತನ್ನ ಮನೆಗೆ ಹೊರಗಿನಿಂದ ಬೀಗ ಹಾಕಿ, ಮಗ ಹಾಗೂ ಆತನ ಇಡೀ ಕುಟುಂಬವನ್ನು ಸುಟ್ಟು ಹಾಕಿದ್ದಾನೆ. ಮನೆಯಿಂದ ಯಾರೂ ಹೊರಗೆ ಬರಬಾರದು ಎಂಬ ಕಾರಣಕ್ಕೆ ಮನೆಯ ಹೊರಗೆ ಬಾಗಿಲಿಗೆ ಬೀಗ ಹಾಕಿದ್ದ. ಇದರಿಂದಾಗಿ ವೃದ್ಧನ ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಿಕ್ಕುಜಿಯ ಅಲಿಯಕ್ಕುನ್ನೆಲ್‌ನ ಹಮೀದ್ ಎಂಬ 79 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯೊಳಗೆ ನಲ್ಲಿಯಲ್ಲಿ ನೀರು ಬಾರದಂತೆ ಪೈಪ್ ಸಂಪರ್ಕವನ್ನು ಕಟ್ ಮಾಡಿದ ವೃದ್ಧ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆತ ಮಗನ ವಿರುದ್ಧ ಕೋಪಗೊಂಡು ಆತನ ಇಡೀ ಕುಟುಂಬವನ್ನು ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ತಿ ವಿಚಾರಕ್ಕೆ ಅಪ್ಪ- ಮಗನ ನಡುವೆ ಜಗಳ ನಡೆದು, ಅಪ್ಪ ಮಗನನ್ನು ಕೊಲ್ಲಲು ನಿರ್ಧರಿಸಿದ್ದಾನೆ. ಮನೆಗೆ ಬೆಂಕಿ ಹಚ್ಚಿ ಹೊರಗೆ ನಿಂತಿದ್ದ ಆ ವೃದ್ಧನನ್ನು ಅಕ್ಕಪಕ್ಕದ ಮನೆಯವರು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಮೊಹಮ್ಮದ್ ಫೈಝಲ್ (49), ಅವರ ಪತ್ನಿ ಶೀಬಾ (39), ಪುತ್ರಿಯರಾದ ಮೆಹರು (16) ಮತ್ತು ಅಸ್ನಾ (13) ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೊಡುಪುಳ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಆಸ್ತಿ ವಿವಾದ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೆರೆಹೊರೆಯವರ ಪ್ರಕಾರ, ಕುಟುಂಬಸ್ಥರು ರಾತ್ರಿ ಮಲಗಿದ್ದಾಗ ಅಲ್ಲಿಗೆ ಬಂದ 79 ವರ್ಷದ ಹಮೀದ್ ಫೈಝಲ್ ಮಗ ಮಲಗುವ ಕೋಣೆಗೆ ಪೆಟ್ರೋಲ್ ಸುರಿದಿದ್ದಾನೆ. ಮನೆಯವರು ಹೊರಗೆ ಓಡಿಬಂದು ಪಾರಾಗುವುದನ್ನು ತಡೆಯಲು ಹೊರಗಿನಿಂದ ಬಾಗಿಲು ಹಾಕಿಕೊಂಡು ನೀರಿನ ತೊಟ್ಟಿಯಿಂದ ಮನೆಯೊಳಗೆ ನೀರು ಹೋಗದಂತೆ ಪೈಪ್ ಸಂಪರ್ಕ ಕಟ್ ಮಾಡಿದ್ದಾನೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದಂತೆ ಅವರ ಮಗ ಎಚ್ಚರಗೊಂಡು ಸಹಾಯಕ್ಕಾಗಿ ನೆರೆಹೊರೆಯವರಿಗೆ ಕರೆ ಮಾಡಿದರೂ, ಹಮೀದ್ ಮನೆಗೆ ಬಂದವರಿಗೂ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ನೆರೆಹೊರೆಯವರು ಮುಂದೆ ಹೋಗಲಾಗದೆ ಪೊಲೀಸರಿಗೆ ಮಾಹಿತಿ ನೀಡಿದರಾದರೂ ರಕ್ಷಣಾ ತಂಡ ಬರುವಷ್ಟರಲ್ಲಿ ತಡವಾಗಿತ್ತು. ಹಮೀದ್ ಕಳೆದ ಹಲವು ವರ್ಷಗಳಿಂದ ತನ್ನ ಎರಡನೇ ಪತ್ನಿಯೊಂದಿಗೆ ವಾಸವಾಗಿದ್ದ. ಇತ್ತೀಚೆಗಷ್ಟೇ ತನ್ನ ಎರಡನೇ ಪತ್ನಿ ಆತನನ್ನು ಬಿಟ್ಟು ಹೋದ ನಂತರ ಮಗನೊಂದಿಗೆ ಇರಲು ಮನೆಗೆ ಮರಳಿದ್ದ.

ಆದರೆ, ಅವರ ಮಗ ಹಾಗೂ ಆತನ ನಡುವೆ ಆಸ್ತಿ ಪಾಲು ಕೊಡುವ ವಿಚಾರದಲ್ಲಿ ಬಹಳ ದಿನಗಳಿಂದ ಜಗಳ ನಡೆದಿತ್ತು. ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಸ್ಥಳೀಯ ಮಸೀದಿ ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರು ಮಾತುಕತೆ ನಡೆಸಿದರೂ ವ್ಯರ್ಥವಾಯಿತು. ಹೀಗಾಗಿ, ಮಗನ ಮೇಲೆ ಕೋಪಗೊಂಡಿದ್ದ ಹಮೀದ್ ಶುಕ್ರವಾರ ರಾತ್ರಿ ಮೊಹಮ್ಮದ್ ಫೈಝಲ್ ಮತ್ತು ಅವನ ಹೆಂಡತಿ, ಮಕ್ಕಳು ಮಲಗಿದ್ದಾಗ ಮನೆಯ ಬಾಗಿಲನ್ನು ಲಾಕ್ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಬೆಂಕಿ ನಂದಿಸಲು ಮೊಹಮ್ಮದ್ ಫೈಝಲ್ ಮತ್ತು ಆತನ ಮನೆಯವರು ಬಾತ್​ರೂಂನಿಂದ ನೀರು ತರಲು ನೋಡಿದರೂ ನಲ್ಲಿಗಳಲ್ಲಿ ನೀರು ಬರುತ್ತಿರಲಿಲ್ಲ. ಹೀಗಾಗಿ, ಅವರೆಲ್ಲರೂ ಬಚ್ಚಲುಮನೆಯಲ್ಲೇ ಉಸಿರುಗಟ್ಟಿ, ಅರೆಬರೆ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ನಂತರ ಕರಿಮನ್ನೂರು ಪೊಲೀಸ್ ಠಾಣೆಯ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಬೆಂಕಿಯನ್ನು ನಂದಿಸಿದರು. ಬಳಿಕ ನಾಲ್ವರ ಹೆಣಗಳನ್ನು ಹೊರಗೆ ತರಲಾಯಿತು.

ಇದನ್ನೂ ಓದಿ: Murder: ಮಗಳನ್ನೇ ಕೊಂದು ಆಕೆಯ ಶವದ ಮೇಲೆ ಅತ್ಯಾಚಾರ ನಡೆಸಿದ ಅಪ್ಪ!

Murder: ಮರುಮದುವೆಯಾಗಲು ಮುಂದಾದ 80 ವರ್ಷದ ತಂದೆಯನ್ನು ಕೊಚ್ಚಿ ಕೊಂದ ಮಗ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ