ಆಕ್ಸಿಜನ್ ಪ್ಲ್ಯಾಂಟ್ನಲ್ಲಿ ಏಕಾಏಕಿ ಸ್ಪೋಟ; ಮೂವರು ಕಾರ್ಮಿಕರಿಗೆ ಗಂಭೀರ ಗಾಯ
ಓರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬಳ್ಳಾರಿ: ಆಕ್ಸಿಜನ್ ಪ್ಲ್ಯಾಂಟ್ (Oxygen Plant) ನಲ್ಲಿ ಸ್ಫೋಟ ಸಂಭವಿಸಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ. ಬಳ್ಳಾರಿ ತಾಲೂಕಿನ ಕುಡತಿನಿ ಬಳಿಯ ಬಿಟಿಪಿಎಸ್ ಆಕ್ಸಿಜನ್ ಪ್ಲ್ಯಾಂಟ್ನಲ್ಲಿ ಘಟನೆ. ಆಕ್ಸಿಜನ್ ಫಿಲ್ ಮಾಡುವ ವೇಳೆ ದುರ್ಘಟನೆ ಸಂಭವಿಸಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾರ್ಮಿಕರ ಮೈಗೆಲ್ಲ ಹತ್ತಿಕೊಂಡಿದೆ. ಓರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಟೋಟಕ್ಕೆ ಕಾರಣ ಎನೆಂದು ಪರಿಶೀಲನೆಗೆ ಬಿಟಿಪಿಎಸ್ ಅಧಿಕಾರಿಗಳು ಮುಂದಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಡತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇತರೇ ಸುದ್ದಿಗಳು:
ಕೊಪ್ಪಳ: ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. 8909721 ರೂಪಾಯಿ ಅವ್ಯವಹಾರ ನಡೆದಿದ್ದು, ಅವ್ಯವಹಾರವೆಸಿಗಿದ ಇಬ್ಬರ ಮೇಲೆ ಕ್ರಿಮನಲ್ ಮೊಕದ್ದಮೆ ಹೂಡಲಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಬಾರ ಕಾರ್ಯದರ್ಶಿಯಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಬಸವರಾಜ ಹೊರಪ್ಯಾಟಿ, ಲೆಕ್ಕ ಪರಿಶೋಧಕ ಸುಧೀರಕುಮಾರ ಗೋನಾಳಮಠರ ಮೇಲೆ ಪ್ರಕರಣ ದಾಖಲಾಗಿದೆ. ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕರ ಸೂಚನೆಯ ಮೇರಿಗೆ ದೂರು ನೀಡಲಾಗಿದೆ. 2004 ರಿಂದ 2019ರವರೆಗಿನ ಸಹಕಾರ ಸಂಘದ ವ್ಯವಾಹಾರದಲ್ಲಿ ಅವ್ಯವಹಾರ ನಡೆದಿದೆ. ನಕಲಿ ದಾಖಲೆ, ಸೃಷ್ಠಿಸಿ ಹಣ ದುರುಪಯೋಗ ಆರೋಪ ಮಾಡಲಾಗಿದೆ. ಸಹಕಾರ ಇಲಾಖೆಯ ವಿಚಾರಣೆಯಲ್ಲಿ ಲೆಕ್ಕ ವ್ಯತ್ಯಾಸವಿರುವುದು ಸಾಬೀತಾಗಿದ್ದು, ಕುಷ್ಟಗಿ ಪೊಲೀಸ್ ಠಾಣೆಯಲ್ಲಿ 406,408,409,420 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಭಾರಿ ಗಾಳಿಯಿಂದಾಗಿ ಮನೆ ಮೇಲೆ ತೆಂಗಿನಮರ ಬಿದ್ದು, ನಾಲ್ವರು ಗಾಯಗೊಂಡಿರುವಂತಹ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಡಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮರ ಬಿದಿದ್ದು, ಹೊನ್ನಪ್ಪ ಕೃಷ್ಣ ನಾಯ್ಕ (40), ದಯಾನಂದ ಕೃಷ್ಣ ನಾಯ್ಕ (35), ಮಕ್ಕಳಾದ ಧವನ್ ದಯಾನಂದ ನಾಯ್ಕ (9), ಹಾಗೂ ಹೇಮಶ್ರೀ ಹೊನ್ನಪ್ಪ ನಾಯ್ಕ ( 7) ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೋಲಾರ: ಕ್ಲಾಕ್ ಟವರ್ ಮೇಲೆ ತ್ರಿವರ್ಣ ಹಾರಿಸುವ ವಿಚಾರ ಹಿನ್ನೆಲೆ ಜಿಲ್ಲಾಡಳಿತ ವತಿಯಿಂದ ಕ್ಲಾಕ್ ಟವರ್ಗೆ ಬಣ್ಣ ಬಳಿಯುವ ಕಾರ್ಯ ಪ್ರಾರಂಭಿಸಲಾಗಿದೆ. ಸ್ಥಳಿಯ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಕಾರ್ಯ ನಡೆದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬಣ್ಣ ಬಳಲಾಗುತ್ತಿದೆ. ಒಂದು ಧರ್ಮದ ಸಂಕೇತದ ಬಾವುಟವನ್ನು ತೆರವಿಗೊಳಿಸಿ ಟವರ್ಗೆ ರಾಷ್ಟ್ರ ದ್ವಜದ ಬಣ್ಣ ಬಳಿಯುವ ಕೆಲಸ ಮಾಡಲಾಗುತ್ತಿದೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜಾ ಎಸ್ಪಿ, ಡಿ.ದೇವರಾಜ್, ನಗರಸಭೆ ಆಯುಕ್ತ ಪ್ರಸಾದ್ ಮೊಕ್ಕಂ ಹೂಡಿದ್ದಾರೆ. ಸದ್ಯ ಕ್ಲಾಕ್ ಟವರ್ ವೃತ್ತದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಬೆಂಗಳೂರು: 200ಕ್ಕೂ ಹಚ್ಚು ಬೈಕ್ಗಳಿಂದ ಬೆಂಗಳೂರಿನ ಹೊರವಲಯದಲ್ಲಿ ಬೈಕ್ ವೀಲಿಂಗ್ ಮಾಡಲಾಗಿದೆ. ವೀಲಿಂಗ್ ಸದ್ದಿಗೆ ಸ್ಥಳೀಯರು ನಿದ್ದಿಗೆಟ್ಟಿದ್ದಾರೆ. ಹೊಸಕೋಟೆ ಮುಖ್ತರಸ್ತೆಯ ಅವಲಹಳ್ಳಿ ಬ್ರಿಡ್ಜ್ ನಲ್ಲಿ ರಾತ್ರಿ ಘಟನೆ ನಡೆದಿದ್ದು, ನೂರಾರು ಸಂಖ್ಯೆಯಲ್ಲಿ ಎಂಟ್ರಿ ಕೊಟ್ಟ ಬೈಕ್ಗಳು ಕರ್ಕಶ ಶಬ್ದದೊಂದಿಗೆ ಭಾರಿ ವೀಲಿಂಗ್ ಮಾಡಿದ್ದಾರೆ. ಸಿಟಿಯಿಂದ ತೆರಳಿದ ಯುವಕರಿಂದ ವೀಲಿಂಗ್ ಪುಂಡಾಟ ಮಾಡಲಾಗಿದೆ. ವೀಲಿಂಗ್ ಸದ್ದಿಗೆ ಹೊರಗೆ ಬಂದು ಪ್ರಶ್ನೆ ಮಾಡಿದ್ರು ಡೊಂಟ್ ಕೇರ್ ಎನ್ನಲಾಗಿದೆ. ಪೊಲೀಸರಿಗೆ ಮಾಹಿತಿ ಬೀಡಿದ್ರು ಸ್ಥಳೀಯರಿಂದ ಬೇಜವಾಬ್ದಾರಿಯ ಆರೋಪ ಕೇಳಿಬಂದಿದೆ. ಮಿಡ್ ನೈಟ್ 1 ರಿಂದ ಆರಂಭವಾದ ವಿಲೀಂಗ್ ಪುಂಡಾಟ ನಸುಕಿನ ಜಾವ ೪ ಗಂಟೆಯವರೆಗೂ ಮಾಡಲಾಗಿದೆ.
ತುಮಕೂರು: ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದೆ. ಜಿಲ್ಲೆ ಪಾವಗಡ ಪುರಸಭಾ ಇಲಾಖೆಯ ಕಸ ವಿಲೇವಾರಿ ಘಟಕದಲ್ಲಿ ನಾಶ ಮಾಡಲಾಗಿದೆ. ಜಿಲ್ಲೆಯ ಪಾವಗಡ ತಾಲೂಕಿನ ಅಬಕಾರಿ ಅಧಿಕಾರಿಗಳಿಂದ 3 ಲಕ್ಷ ಮೌಲ್ಯದ ಅಕ್ರಮ ಮದ್ಯ ನಾಶಪಡಿಸಲಾಗಿದೆ. 430 ಲೀಟರ್ ಮದ್ಯ, 103 ಲೀಟರ್ ಬಿಯರ್, 10 ಲೀಟರ್ ಸೆಂಧಿ, 15 ಲೀಟರ್ ಕಳ್ಳಬಟ್ಟಿ, ಹಾಗೂ 81 ಲೀಟರ್ ಬೆಲ್ಲದ ಕೋಡಾ, ನಾಶ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ನಾಶಪಡಿಸಿಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: