Tax On EPF: ಇಪಿಎಫ್ ಉಳಿತಾಯಕ್ಕೆ ಹೊಸ ತೆರಿಗೆ ಲೆಕ್ಕಾಚಾರದ ಬಗ್ಗೆ 7 ಅಂಶಗಳಲ್ಲಿ ವಿವರಣೆ
ಹೊಸ ತೆರಿಗೆ ನಿಯಮಾವಳಿ ಅಡಿಯಲ್ಲಿ ಇಪಿಎಫ್ ಉಳಿತಾಯಕ್ಕೆ ತೆರಿಗೆ ಹಾಕುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಈ ತಿಂಗಳ ಆರಂಭದಲ್ಲಿ 2021-22ನೇ ಸಾಲಿನ ಹಣಕಾಸು ವರ್ಷಕ್ಕೆ ಇಪಿಎಫ್ ಅಥವಾ ಸದಸ್ಯರ ಖಾತೆಗಳಲ್ಲಿನ ಉದ್ಯೋಗಿ ಭವಿಷ್ಯ ನಿಧಿ ಸಂಗ್ರಹಗಳ ಮೇಲೆ ಶೇ 8.1ರ ಬಡ್ಡಿದರ ಘೋಷಿಸಿತು. ಇದು ಹಿಂದಿನ ವರ್ಷದಲ್ಲಿ ಇದ್ದ ಶೇ 8.5ಕ್ಕಿಂತ ಕಡಿಮೆಯಾಗಿದೆ. 2021ರ ಬಜೆಟ್‌ನಲ್ಲಿ ಬದಲಾವಣೆಗಳನ್ನು ಪರಿಚಯಿಸುವವರೆಗೆ ಇಪಿಎಫ್ ಮೇಲಿನ ಬಡ್ಡಿಯು ಭವಿಷ್ಯ ನಿಧಿ ಕೊಡುಗೆದಾರರ ಕೈಯಲ್ಲಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿತ್ತು. ನಿರ್ದಿಷ್ಟ ಮಿತಿಯನ್ನು ಮೀರಿದ ಇಪಿಎಫ್ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಇದು ಏಪ್ರಿಲ್ 1, 2021ರಿಂದ ಜಾರಿಗೆ ಬಂದಿದೆ. ಲೆಕ್ಕಾಚಾರದ ಸಲುವಾಗಿ, 2021-2022ರಿಂದ ಪ್ರಾರಂಭಿಸಿ ಮತ್ತು ನಂತರದ ಎಲ್ಲ ವರ್ಷಗಳಲ್ಲಿ ತೆರಿಗೆಗೆ ಒಳಪಡುವ ಕೊಡುಗೆ ಮತ್ತು ವ್ಯಕ್ತಿಯು ಮಾಡಿದ ತೆರಿಗೆಗೆ ಒಳಪಡದ ಕೊಡುಗೆಗಾಗಿ ಭವಿಷ್ಯ ನಿಧಿ ಖಾತೆಯೊಳಗೆ ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಲಾಗುತ್ತದೆ ಎಂದು ತೆರಿಗೆ ತಜ್ಞರು ಹೇಳುತ್ತಾರೆ. ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಭವಿಷ್ಯ ನಿಧಿ ಕಚೇರಿ ಅಥವಾ ಉದ್ಯೋಗಿ ಪಿಎಫ್ ಟ್ರಸ್ಟ್ ಈ ಉದ್ದೇಶಕ್ಕಾಗಿ ಎರಡು ಖಾತೆಗಳನ್ನು ನಿರ್ವಹಿಸುತ್ತದೆ: ಒಂದು ಮಿತಿಯೊಳಗಿನ ಕೊಡುಗೆ ಮತ್ತು ಇನ್ನೊಂದು (ಎರಡನೆಯದು) ಮಿತಿಯ ಮೇಲಿನ ಕೊಡುಗೆಗಾಗಿ.
ಇಪಿಎಫ್ ಬಡ್ಡಿಯ ಮೇಲೆ ಹೊಸ ಆದಾಯ ತೆರಿಗೆ ನಿಯಮಗಳು ಹೇಗೆ ಅನ್ವಯಿಸುತ್ತವೆ?
- ಹೊಸ ನಿಯಮಗಳ ಪ್ರಕಾರ, ಉದ್ಯೋಗಿಯ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡಲಾದ ಯಾವುದೇ ಬಡ್ಡಿಯು ಪ್ರತಿ ವರ್ಷ 2.50 ಲಕ್ಷದವರೆಗಿನ ಕೊಡುಗೆಗೆ ಮಾತ್ರ ತೆರಿಗೆ ಮುಕ್ತವಾಗಿರುತ್ತದೆ. ಮತ್ತು 2.50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನೌಕರರ ಕೊಡುಗೆಯ ಮೇಲಿನ ಯಾವುದೇ ಬಡ್ಡಿಗೆ ಉದ್ಯೋಗಿ ಕೈಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಅದು ಕೂಡ ವರ್ಷದಿಂದ ವರ್ಷಕ್ಕೆ. ಉದ್ಯೋಗದಾತರು ಉದ್ಯೋಗಿಯ ಭವಿಷ್ಯ ನಿಧಿಗೆ ದೇಣಿಗೆ ನೀಡದಿದ್ದಲ್ಲಿ ಆ ಉದ್ಯೋಗಿಯ ಕೊಡುಗೆಯ ಮಿತಿಯು ರೂ. 5 ಲಕ್ಷ ಆಗಿರುತ್ತದೆ ಎಂದು ತೆರಿಗೆ ತಜ್ಞ ಬಲವಂತ ಜೈನ್ ಹೇಳುತ್ತಾರೆ.
- ರೂ. 5 ಲಕ್ಷದ ಮಿತಿಯು ಇಪಿಎಫ್‌ಒ ಚಂದಾದಾರರಾಗಿರುವ ಸುಮಾರು ಶೇ 93ರಷ್ಟು ಜನರನ್ನು ಒಳಗೊಂಡಿದೆ. ಅವರು ಪ್ರತಿ ವರ್ಷ ಇಪಿಎಫ್‌ಒ ಪ್ರಕಟಿಸುವ ಬಡ್ಡಿ ದರದ ಪ್ರಕಾರ ಖಚಿತವಾದ ತೆರಿಗೆ-ಮುಕ್ತ ಬಡ್ಡಿ ಪಡೆಯುವುದನ್ನು ಮುಂದುವರಿಸುತ್ತಾರೆ.
- ಉದ್ಯೋಗದಾತರು ಮೂಲ ವೇತನದ ಮತ್ತು ತುಟ್ಟಿಭತ್ಯೆಯ ಶೇ 12ರಷ್ಟು ಇಪಿಎಫ್ಗೆ ಕೊಡುಗೆ ನೀಡುತ್ತಾರೆ. ಉದ್ಯೋಗಿಯ ಸಂಬಳದಿಂದ ಶೇ 12ರಷ್ಟು ಕಡಿತಗೊಳಿಸುತ್ತಾರೆ. ಉದ್ಯೋಗದಾತರ ಕೊಡುಗೆಯ ಶೇ 8.33ರಷ್ಟು ಉದ್ಯೋಗಿಗಳ ಪಿಂಚಣಿ ಯೋಜನೆಗೆ (ಇಪಿಎಸ್) ಹೋಗುತ್ತದೆ. ಅದು ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ.
- “ದಯವಿಟ್ಟು ಗಮನಿಸಿ, ಹೆಚ್ಚುವರಿ ಕೊಡುಗೆಯ ಮೇಲಿನ ಬಡ್ಡಿಯು ತೆರಿಗೆಗೆ ಒಳಪಡುತ್ತದೆ ಮತ್ತು ಕೊಡುಗೆಯಲ್ಲ. ಹೆಚ್ಚುವರಿ ಕೊಡುಗೆಗೆ ತೆರಿಗೆ ವಿಧಿಸಲಾಗುವುದಿಲ್ಲ. ಏಕೆಂದರೆ ಉದ್ಯೋಗಿ ಪಡೆಯುವ ಸಂಬಳದಿಂದ ಈಗಾಗಲೇ ತೆರಿಗೆಯನ್ನು ಹಾಕಲಾಗಿರುತ್ತದೆ,” ಎಂದು ಜೈನ್ ಸೇರಿಸಿದ್ದಾರೆ.
- 31ನೇ ಮಾರ್ಚ್ 2021ರಂತೆ ಉದ್ಯೋಗಿಯ ಕ್ರೆಡಿಟ್‌ಗೆ ಬಾಕಿ ಉಳಿದಿರುವಂತೆ, ಈ ತೆರಿಗೆಗೆ ಒಳಪಡದ ಖಾತೆಯ ಮೇಲಿನ ಬಡ್ಡಿಯು ತೆರಿಗೆ ಮುಕ್ತವಾಗಿ ಉಳಿಯುತ್ತದೆ.
- ಇದು ಎರಡನೇ ಖಾತೆಗೆ (ತೆರಿಗೆಗೆ ಒಳಪಡುವ) ಬಡ್ಡಿಯಾಗಿದ್ದು, ಪ್ರತಿ ವರ್ಷ ತೆರಿಗೆ ವಿಧಿಸಲಾಗುತ್ತದೆ.
- ಎರಡನೇ ಖಾತೆಗೆ (ತೆರಿಗೆ ವಿಧಿಸಬಹುದಾದ) ಇದು ಕೊಡುಗೆಯ ವರ್ಷಕ್ಕೆ ಮಾತ್ರವಲ್ಲದೆ ನಂತರದ ಎಲ್ಲ ವರ್ಷಗಳಿಗೂ ಬಡ್ಡಿಯು ತೆರಿಗೆಗೆ ಒಳಪಡುತ್ತದೆ ಎಂದು ಜೈನ್ ಹೇಳುತ್ತಾರೆ.
ಇದನ್ನೂ ಓದಿ: ಪಿಎಫ್ ಪರಿಷ್ಕೃತ ಬಡ್ಡಿ ದರವು ಇಂದಿನ ವಾಸ್ತವ ಸ್ಥಿತಿಯನ್ನು ಪ್ರತಿನಿಧಿಸುತ್ತದೆ: ನಿರ್ಮಲಾ ಸೀತಾರಾಮನ್
Published On - 9:11 pm, Tue, 22 March 22