ಪಿಎಫ್ ಪರಿಷ್ಕೃತ​ ಬಡ್ಡಿ ದರವು ಇಂದಿನ ವಾಸ್ತವ ಸ್ಥಿತಿಯನ್ನು ಪ್ರತಿನಿಧಿಸುತ್ತದೆ: ನಿರ್ಮಲಾ ಸೀತಾರಾಮನ್

ಪ್ರತಿವರ್ಷವೂ ಇಪಿಎಫ್​ಒ ಸಂಘಟನೆಯ ಕೇಂದ್ರೀಯ ಮಂಡಳಿಯು ಪಿಎಫ್​ ನಿಧಿಯ ಮೇಲೆ ನೀಡಬೇಕಾದ ಬಡ್ಡಿಯ ಪ್ರಮಾಣವನ್ನು ನಿರ್ಧರಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಪಿಎಫ್ ಪರಿಷ್ಕೃತ​ ಬಡ್ಡಿ ದರವು ಇಂದಿನ ವಾಸ್ತವ ಸ್ಥಿತಿಯನ್ನು ಪ್ರತಿನಿಧಿಸುತ್ತದೆ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 21, 2022 | 8:24 PM

ದೆಹಲಿ: ಕಾರ್ಮಿಕರ ಭವಿಷ್ಯ ನಿಧಿಯ (Emplyoees Provident Fund Organisation – EPFO) ಬಡ್ಡಿಯನ್ನು ಪ್ರಸಕ್ತ ಸಾಲಿಗೆ ಶೇ 8.1ರಷ್ಟು ನಿಗದಿಪಡಿಸಲಾಗಿದೆ. ಇದು ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಉತ್ತಮ ಬಡ್ಡಿಯಾಗಿದೆ. ಪ್ರತಿವರ್ಷವೂ ಇಪಿಎಫ್​ಒ ಸಂಘಟನೆಯ ಕೇಂದ್ರೀಯ ಮಂಡಳಿಯು ಪಿಎಫ್​ ನಿಧಿಯ ಮೇಲೆ ನೀಡಬೇಕಾದ ಬಡ್ಡಿಯ ಪ್ರಮಾಣವನ್ನು ನಿರ್ಧರಿಸುತ್ತದೆ. ಇದು ಆಯಾ ವರ್ಷಗಳ ಆರ್ಥಿಕ ಸ್ಥಿತಿಗತಿಯನ್ನು ಪ್ರತಿನಿಧಿಸುತ್ತವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದರು. ರಾಜ್ಯಸಭೆಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಇತ್ತೀಚಿನ ವರ್ಷಗಳಲ್ಲಿ ಪಿಎಫ್ ಮೇಲಿನ ಬಡ್ಡಿದರಗಳು ಬದಲಾವಣೆ ಆಗಿರಲಿಲ್ಲ. ಈ ಬಾರಿ ಬಡ್ಡಿ ಪರಿಷ್ಕರಿಸಲು ಪಿಎಫ್ ಮಂಡಳಿ ನಿರ್ಧರಿಸಿದೆ ಎಂದು ಹೇಳಿದರು.

ಇಪಿಎಫ್​ಒ ಮಂಡಳಿಯಲ್ಲಿ ವಿವಿಧ ವಲಯಗಳ ಪ್ರತಿನಿಧಿಗಳು ಇರುತ್ತಾರೆ. ಅವರು ವಿವಿಧ ಆಯಾಮಗಳನ್ನು ವಿಶ್ಲೇಷಿಸಿದ ನಂತರವೇ ಬಡ್ಡಿದರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರಸಕ್ತ ಸಾಲಿನಲ್ಲಿ ಪಿಎಫ್​ ಬಡ್ಡಿ ದರವನ್ನು ಶೇ 8.1ಕ್ಕೆ ಸೀಮಿತಗೊಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನಾ (ಶೇ 7.6), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಶೇ 7.4) ಮತ್ತು ಪಿಪಿಎಫ್ (ಶೇ 7.1) ಯೋಜನೆಗಳಿಗೆ ಹೋಲಿಸಿದರೆ ಈ ದರವು ಹೆಚ್ಚೇ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

‘ಇವೆಲ್ಲವೂ ಪ್ರಸ್ತುತ ಜಾರಿಯಲ್ಲಿರುವ ಉಳಿತಾಯ ಯೋಜನೆಗಳ ಬಡ್ಡಿದರಗಳು. ಇವುಗಳಿಗೆ ಹೋಲಿಸಿದರೆ ಪಿಎಫ್ ಬಡ್ಡಿದರವು ಆಕರ್ಷಕವಾಗಿಯೇ ಕಾನಿಸುತ್ತದೆ. ಕಳೆದ 40 ವರ್ಷಗಳಿಂದ ಪಿಎಫ್ ಬಡ್ಡಿದರಗಳನ್ನು ಬದಲಿಸಿರಲಿಲ್ಲ. ಆದರೆ ಇಂದಿನ ವಾಸ್ತವಗಳು ಬದಲಾಗಿರುವುದರಿಂದ ಪಿಎಫ್ ಬಡ್ಡಿದರವನ್ನು ಪರಿಷ್ಕರಿಸಲೇಬೇಕಾಗಿದೆ’ ಎಂದು ತಿಳಿಸಿದರು. ಪಿಎಫ್ ಆಡಳಿತ ಮಂಡಳಿಯು 2021-22ರ ಆರ್ಥಿಕ ವರ್ಷಕ್ಕೆ ಬಡ್ಡಿದರವನ್ನು ಶೇ 8.1ಕ್ಕೆ ಸೀಮಿತಗೊಳಿಸುವ ಪ್ರಸ್ತಾವ ಸಲ್ಲಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಅಂದರೆ 2020-21ರ ಸಾಲಿನಲ್ಲಿ ಪಿಎಫ್ ಬಡ್ಡಿದರಗಳು ಶೇ 8.5 ಇದ್ದವು.

ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ಐಪಿಒಗೂ ಮೊದಲಿನ ಅಂದಾಜು ವೈಜ್ಞಾನಿಕವಾಗಿಯೇ ಮಾಡಲಾಗಿದೆ. ಕಂಪನಿಯ ಮೌಲ್ಯವನ್ನು ಸಮರ್ಪಕ ರೀತಿಯಲ್ಲಿ, ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ. ಸೆಬಿಗೆ ಸಲ್ಲಿಸಿರುವ ಕರಡು ಐಪಿಒ ಪ್ರಸ್ತಾವದಲ್ಲಿಯೂ ಇದನ್ನೇ ಹೇಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ಕೋರಿರುವುದನ್ನು ಸಮರ್ಥಿಸಿಕೊಂಡ ಅವರು, ಸರ್ಕಾರವು ಯೂರಿಯಾಕ್ಕೆ ಹೆಚ್ಚುವರಿ ಸಹಾಯಧನ ನೀಡುತ್ತಿದೆ. ಬೆಲೆ ಏರಿಕೆಯನ್ನು ರೈತರಿಗೆ ವರ್ಗಾಯಿಸಿಲ್ಲ ಎಂದರು.

ಕೇಂದ್ರ ತೆರಿಗೆಗಳಲ್ಲಿ ರಾಜ್ಯಗಳ ಪಾಲು 2022-23ರ ಸಾಲಿನಲ್ಲಿ ₹ 8.17 ಲಕ್ಷ ಕೋಟಿ ಇದೆ. 2021-22ರ ಸಾಲಿನ ಪರಿಷ್ಕೃತ ಅಂದಾಜು ₹ 7.45 ಲಕ್ಷ ಕೋಟಿಯಿತ್ತು. ಈ ಮೊತ್ತವನ್ನು ಈಗಾಗಲೇ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಸರ್ಕಾರ ನಿರ್ವಹಿಸುತ್ತಿರುವ ವಿಮಾ ಕಂಪನಿಗಳಿಗೆ ಬಂಡವಾಳ ಹೆಚ್ಚಿಸುವ ದೃಷ್ಟಿಯಿಂದ ₹ 5000 ಕೋಟಿಗೆ ಅನುಮೋದನೆ ನೀಡಬೇಕು ಎಂದು ಹಣಕಾಸು ಸಚಿವರು ಪೂರಕ ಬೇಡಿಕೆಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ: ಮೋದಿ ಗುಜರಾತ್ ಸಿಎಂ ಆಗಿದ್ದಾಗ ಗುಜರಾತ್​ನಲ್ಲಿ ಲಂಚ ನಿಲ್ಲಿಸಿದ್ದರು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: ವಿಶ್ವ ವಿಜ್ಞಾನ ಕಲಿಕೆಗೆ ಮುನ್ನುಡಿ ಬರೆದ ಮೈಸೂರು ವಿಶ್ವವಿದ್ಯಾನಿಲಯ; ರಾಜ್ಯದ ಪ್ರಥಮ ಕಾಸ್ಮಾಸ್ ಕೇಂದ್ರಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಿಲಾನ್ಯಾಸ

Published On - 8:23 pm, Mon, 21 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್