ಮೋದಿ ಗುಜರಾತ್ ಸಿಎಂ ಆಗಿದ್ದಾಗ ಗುಜರಾತ್ನಲ್ಲಿ ಲಂಚ ನಿಲ್ಲಿಸಿದ್ದರು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಗುಜರಾತ್ನಲ್ಲಿ ಮೋದಿ ಸಿಎಂ‌ ಆಗಿದ್ದಾಗ 8 ಕೋಟಿ ಮಹಿಳೆಯರಿಗೆ ಸಿಲಿಂಡರ್ ಹಂಚುವ ಘೋಷಣೆ ಮಾಡಿದ್ದರು. ಅದರಂತೆ ಅವರು 8 ಕೋಟಿ ಮಹಿಳೆಯರಿಗೆ ಉಚಿತ ಅನಿಲ ಸಿಲಿಂಡರ್ ಕೊಟ್ಟರು. ಗುಜರಾತ್ನಲ್ಲಿ ಲಂಚ ಕೊಡೋದು, ಪಡೆಯೋದು ನಿಲ್ಲಿಸಿದ್ರು. ಪ್ರತೀ ಮನೆಗೂ ವಿದ್ಯುತ್, ನೀರು ಪೂರೈಕೆ ಮಾಡಲಾಯಿತು. ಇವೆಲ್ಲಾ ಅಲ್ಲಿ ಇವತ್ತಿಗೂ ಹಾಗೆಯೇ ಮುಂದುವರೆದಿವೆ. -ನಿರ್ಮಲಾ ಸೀತಾರಾಮನ್

ಮೋದಿ ಗುಜರಾತ್ ಸಿಎಂ ಆಗಿದ್ದಾಗ ಗುಜರಾತ್ನಲ್ಲಿ ಲಂಚ ನಿಲ್ಲಿಸಿದ್ದರು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Mar 08, 2022 | 3:35 PM

ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಬಿಜೆಪಿ ಘಟಕದಿಂದ ಆಯೋಜನೆಗೊಂಡ ಆತ್ಮನಿರ್ಭರ ಅರ್ಥವ್ಯವಸ್ಥೆ ಭಾರತ ಕುರಿತ ಸಂವಾದ ಕಾರ್ಯಕ್ರಮವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಭಾಗಿಯಾಗಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಬೆಂಗಳೂರಿನಲ್ಲಿ ನಡೆದ ಬಜೆಟ್ 2022 ಸಂವಾದದಲ್ಲಿ ಭಾಗಿಯಾಗಿದ್ದರು. ಸದ್ಯ ಮಾರ್ಚ್ 8ರ ಮಂಗಳವಾರದಂದು ಆತ್ಮನಿರ್ಭರ ಅರ್ಥವ್ಯವಸ್ಥೆ ಭಾರತ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಗುಜರಾತ್ನಲ್ಲಿ ಮೋದಿ ಸಿಎಂ‌ ಆಗಿದ್ದಾಗ 8 ಕೋಟಿ ಮಹಿಳೆಯರಿಗೆ ಸಿಲಿಂಡರ್ ಹಂಚುವ ಘೋಷಣೆ ಮಾಡಿದ್ದರು. ಅದರಂತೆ ಅವರು 8 ಕೋಟಿ ಮಹಿಳೆಯರಿಗೆ ಉಚಿತ ಅನಿಲ ಸಿಲಿಂಡರ್ ಕೊಟ್ಟರು. ಗುಜರಾತ್ನಲ್ಲಿ ಲಂಚ ಕೊಡೋದು, ಪಡೆಯೋದು ನಿಲ್ಲಿಸಿದ್ರು. ಪ್ರತೀ ಮನೆಗೂ ವಿದ್ಯುತ್, ನೀರು ಪೂರೈಕೆ ಮಾಡಲಾಯಿತು. ಇವೆಲ್ಲಾ ಅಲ್ಲಿ ಇವತ್ತಿಗೂ ಹಾಗೆಯೇ ಮುಂದುವರೆದಿವೆ. ಇವನ್ನೆಲ್ಲಾ ಸುಳ್ಳು ಅಂತ ತೋರಿಸಲು ಕೆಲವರು ಪ್ರಯತ್ನ ಪಟ್ಟರು. ಆದ್ರೆ ಆ ಪ್ರಯತ್ನದಲ್ಲಿ ಅವರು ಸೋತರು. ಕೊರೊನಾ ಸಂದರ್ಭವನ್ನು ಸಮರ್ಥವಾಗಿ ದೇಶ ಎದುರಿಸಿದೆ. ಕೋವಿಡ್ ವೇಳೆ ಆತ್ಮ ನಿರ್ಭರ ಭಾರತ ಸೃಷ್ಟಿಸಲಾಗಿತ್ತು. ಆತ್ಮ ನಿರ್ಭರ ಭಾರತದಿಂದ ಕೋವಿಡ್ ತುರ್ತುಸ್ಥಿತಿ ನಿರ್ವಹಣೆ ಮಾಡಿದ್ದೇವೆ. ಆರು ತಿಂಗಳೊಳಗೆ 5 ಲಕ್ಷ ಪಿಪಿಇ ಕಿಟ್ ತಯಾರಿಸಲಾಯಿತು. ಅದರ ಬಳಿಕ ಪಿಪಿಇ ಕಿಟ್ ಆಮದು ಸ್ಥಗಿತ ಮಾಡಲಾಯಿತು. ಆಮದು ಮೇಲಿನ ಸುಂಕ ಹೆಚ್ಚಳ ಬಗ್ಗೆ ಕೆಲವರು ಆಕ್ಷೇಪಿಸಿದ್ದಾರೆ.

ನಮ್ಮಲ್ಲಿ ತಯಾರಾಗುವ ವಸ್ತುಗಳನ್ನು ಇಲ್ಲಿಯವರು ಖರೀದಿಸಬೇಕು. ನಮ್ಮ ವಸ್ತುಗಳನ್ನು ಖರೀದಿಸದೇ ವಿದೇಶಗಳ ಮೇಲೆ ಹಲವರು ಅವಲಂಬಿತರಾಗಿದ್ದಾರೆ. ಹಾಗಾಗಿ ಆಮದು ಮೇಲೆ ಸುಂಕ ಹೆಚ್ಚಿಸಲಾಯ್ತು. ಇಲ್ಲೇ ತಯಾರಾಗಿರುವ ಉತ್ಪನ್ನಗಳ ಮೇಲೆ ಸುಂಕ ಕಡಿಮೆ ಮಾಡಿದ್ದೇವೆ ಎಂದರು.

ಇನ್ನು ರಷ್ಯಾ-ಉಕ್ರೇನ್ ಯುದ್ಧ ಹಲವು ಸವಾಲುಗಳನ್ನೊಡ್ಡಿದೆ. ಯುದ್ಧದಿಂದಾಗಿ ಗೋಧಿ ರಷ್ಯಾದಿಂದ ಪೂರೈಕೆ ಆಗುತ್ತಿಲ್ಲ. ಭಾರತದ ರೈತರೇ ಸಾಕಷ್ಟು ಗೋಧಿ ಉತ್ಪಾದಿಸ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಾವು ಜಾಗತಿಕ ದೃಷ್ಟಿಕೋನದಿಂದ ಈ ಸವಾಲನ್ನು ಸ್ವೀಕರಿಸಬೇಕಿದೆ. ನಾವು ಜಗತ್ತಿಗೇ ಗೋಧಿ ಪೂರೈಸುವಲ್ಲೂ ಆತ್ಮ ನಿರ್ಭರ ಭಾರತ ಸಾಧಿಸುತ್ತೇವೆ. ಭಾರತದಲ್ಲಿ ಮಾತ್ರ ಕೋ ವಿನ್ ಆಪ್ ಮೂಲಕ‌ ಲಸಿಕೆ ಬಗ್ಗೆ ದಾಖಲಾತಿ‌ ಮಾಡಿಕೊಳ್ಳಲಾಗುತ್ತದೆ. ಈ ವ್ಯವಸ್ಥೆ ಬೇರೆ ದೇಶಗಳಲ್ಲಿಲ್ಲ ಎಂದಿದ್ದಾರೆ. ಯುದ್ಧದಿಂದಾಗಿ ತೈಲ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಅವರು, ಉಕ್ರೇನ್-ರಷ್ಯಾ ಯುದ್ಧ ಭಾರತದ ಮೇಲೂ‌ ಪರಿಣಾಮ ಬೀರಿದೆ. ಕಚ್ಛಾ ತೈಲಗಳ ದರ ಹೆಚ್ಚಳ ಆಗಿದೆ. ಭಾರತ 80% ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಪೆಟ್ರೋಲಿಯಂ ಕಂಪನಿಗಳು ತೈಲ ದರ ನಿರ್ಧರಿಸಲಿವೆ. ಪರ್ಯಾಯ ಮೂಲಗಳಿಂದ ತೈಲ ಆಮದು ಬಗ್ಗೆ ಚಿಂತನೆ ನಡೆಯುತ್ತಿದೆ. ಬಜೆಟ್ನಲ್ಲಿ ತೈಲ ಬೆಲೆಯ ಏರುಪೇರು ತಡೆಯಲು ಕೆಲವು ಅಂಶಗಳನ್ನು ಸೇರಿಸಲಾಗಿದೆ. ಆದರೆ ಈಗ ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಈ ಬಗ್ಗೆ ನಾವು ಗಮನ ಹರಿಸಿದ್ದೇವೆ. ಯುದ್ಧದ ವ್ಯತಿರಿಕ್ತ ಪರಿಣಾಮ ಖಂಡಿತವಾಗಿಯೂ ಆಗಲಿದೆ. ಇದು ಎಲ್ಲಾ ದೇಶಗಳಿಗೆ ಅನ್ವಯವಾಗಲಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಜಿಯೋ ಫೈಬರ್ ಕೇಬಲ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಂಜಿನಿಯರ್ ಸಾವು; ಪರಿಹಾರಕ್ಕೆ ಆಗ್ರಹ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ರೈತ ಮಹಿಳೆ ಆತ್ಮಹತ್ಯೆ ಪ್ರಕರಣ; ಗದಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣ

Published On - 3:32 pm, Tue, 8 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ