ಜಿಯೋ ಫೈಬರ್ ಕೇಬಲ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಂಜಿನಿಯರ್ ಸಾವು; ಪರಿಹಾರಕ್ಕೆ ಆಗ್ರಹ

Belagavi: ಮೃತ ಮಹೇಶ್ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು, ಸಂಬಂಧಿಕರು, ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯಲ್ಲಿರುವ ಕ್ವೇಸ್‌ ಕಾರ್ಫ್ ಲಿಮಿಟೆಡ್ ಕಂಪನಿ ಕಚೇರಿ ಮುತ್ತಿಗೆಗೆ ಯತ್ನ ನಡೆದಿದೆ.

ಜಿಯೋ ಫೈಬರ್ ಕೇಬಲ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಂಜಿನಿಯರ್ ಸಾವು; ಪರಿಹಾರಕ್ಕೆ ಆಗ್ರಹ
ಜಿಯೋ ಫೈಬರ್ ಕೇಬಲ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಂಜಿನಿಯರ್ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 08, 2022 | 4:19 PM

ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ (electrocution) ಕರ್ತವ್ಯನಿರತ ಇಂಜಿನಿಯರ್ ಸಾವಿಗೀಡಾದ ಘಟನೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ನಡೆದಿದೆ. ಕಾಕತಿ ನಿವಾಸಿ ಮಹೇಶ್ ಮುತ್ನಾಳಕರ್ ಸಾವನ್ನಪ್ಪಿದ ದುರ್ದೈವಿ. ಇಂಜಿನಿಯರ್ ಮಹೇಶ್ ಮುತ್ನಾಳಕರ್ ಜಿಯೋ ಫೈಬರ್ ಕೇಬಲ್ ಅಳವಡಿಸುತ್ತಿದ್ದ ವೇಳೆ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ (Jio Fiber engineer Kakati Mahesh). ಸಾವಿಗೀಡಾದ ಮಹೇಶ್ ಕ್ವೇಸ್ ಕಾರ್ಫ್ ಲಿಮಿಟೆಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುರಕ್ಷಾ ಸಾಧನ ನೀಡದ ಹಿನ್ನೆಲೆ ಮಹೇಶ್ ಸಾವು ಸಂಭವಿಸಿದೆ. ಹಾಗಾಗಿ ಮೃತ ಮಹೇಶ್ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕುಟುಂಬಸ್ಥರು, ಸಂಬಂಧಿಕರು, ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆದಿದೆ. ಬೆಳಗಾವಿಯಲ್ಲಿರುವ ಕ್ವೇಸ್‌ ಕಾರ್ಫ್ ಲಿಮಿಟೆಡ್ ಕಂಪನಿ ಕಚೇರಿ ಮುತ್ತಿಗೆಗೆ ಯತ್ನ ನಡೆದಿದೆ. ಈ ವೇಳೆ ಪೊಲೀಸರ ಜೊತೆ ರೈತ ಮುಖಂಡರು ವಾಗ್ವಾದ ನಡೆಸಿದ್ದಾರೆ (Belagavi).

ಹಳ್ಳಿಗಾಡಿನಲ್ಲಿ ಕುಡಿತದ ಚಟಕ್ಕೆ ಚಟ್ಟಕಟ್ಟಲು ಇನ್ನೂ ಎಷ್ಟು ಗೃಹಿಣಿಯರು ಪ್ರಾಣ ತೆರಬೇಕೋ… ವಿಜಯನಗರ: ಒಂದು ಕಡೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮದಿಂದ ನಡೆದಿದೆ. ಆದರೆ ಇತ್ತ ನೂತನ ಜಿಲ್ಲೆ ವಿಜಯನಗರದಲ್ಲಿ ಸೂತಕದ ಛಾಯೆ ಆವರಿಸಿದೆ. ಪುರಾತನ ಕುಡಿತದ ಚಟ ಬಿಡಿಸುವ ಯತ್ನದಲ್ಲಿ ಮಹಿಳೆಯೊಬ್ಬರು ಜೀವತೆತ್ತಿದ್ದಾರೆ. ಭಾರತದ ಹಳ್ಳಿಗಾಡಿನಲ್ಲಿ ಇನ್ನೂ ಅದೆಷ್ಟೋ ಗೃಹಿಣಿಯರು ಹೀಗೆ ಪ್ರಾಣ ತೆರಬೇಕೋ ಈ ಕುಡಿತದ ಚಟಕ್ಕೆ ಚಟ್ಟಕಟ್ಟಲು.

ಕುಡಿತ ಬಿಡಲು ಪತಿ ಒಪ್ಪಲಿಲ್ಲವೆಂದು ಪತ್ನಿ ನೇಣಿಗೆ ಶರಣಾಗಿದ್ದಾರೆ. ಕೂಡ್ಲಗಿ ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ಈ ಅತಿರೇಕದ ಘಟನೆ ನಡೆದಿದೆ. ಶೃತಿ (22) ಮನೆಯಲ್ಲಿ ನೇಣಿಗೆ ಶರಣಾದ ಗೃಹಿಣಿ. ಪತಿ ಶಶಿಧರ ಕುಡಿತದ ಚಟಕ್ಕೆ ದಾಸನಾಗಿದ್ದಾನೆ. ಗುಡೇಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 ಸಾವಿರ ಲಂಚ ಕೇಳಿ, 5 ಸಾವಿರ ರೂ ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಎಸ್‌ಐ ಬಳ್ಳಾರಿ: ಸಮರ್ಪಕ ನೋಂದಣಿ ದಾಖಲೆ ಇಲ್ಲದ ಬೈಕ್ ಬಿಡಲು 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಪರಾಧ ವಿಭಾಗದ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​​ (ಪಿಎಸ್‌ಐ) ಬಸಪ್ಪ ಲಮಾಣಿ ಎಸಿಬಿ ಬಲೆಗೆ ಬಿದ್ದ ಪೊಲೀಸ್​ ಅಧಿಕಾರಿ. ಲಂಚ ನೀಡದಿದ್ದರೆ ಬೈಕ್ ಸೀಜ್ ಮಾಡುವುದಾಗಿ ಪಿಎಸ್‌ಐ ಬಸಪ್ಪ ಬೆದರಿಸಿದ್ದರು. ಆ ಬಾಬತ್ತಿನಲ್ಲಿ, 5 ಸಾವಿರ ರೂಪಾಯಿ ಹಣ ಸ್ವೀಕರಿಸುವ ವೇಳೆ ಪಿಎಸ್ಐ ಬಲೆಗೆ ಬಿದ್ದಿದ್ದಾರೆ. ಕಂಪ್ಲಿಯ ನಾರಾಯಣಸ್ವಾಮಿ ಎಂಬುವರ ದೂರಿನ ಮೇರೆಗೆ ಎಸಿಬಿ ದಾಳಿ ನಡೆದಿತ್ತು. ಎಸಿಬಿ DySp ಹರಿಬಾಬು ನೇತೃತ್ವದಲ್ಲಿ ದಾಳಿ ನಡೆದಿತ್ತು. ಎಸಿಬಿ ಅಧಿಕಾರಿಗಳು ತದನಂತರ ಪಿಎಸ್‌ಐ ಬಸಪ್ಪ ಲಮಾಣಿ ವಿಚಾರಣೆ ನಡೆಸ್ತಿದ್ದಾರೆ.

ದೊಡ್ಡಬಳ್ಳಾಪುರ ಬಳಿ ಮಹಿಳೆಯ ಸೀರೆ ಬಿಚ್ಚಿ, ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆರೋಪ ದೊಡ್ಡಬಳ್ಳಾಪುರ: ರಾಜಧಾನಿ ಬೆಂಗಳೂರಿನ ಹೊರವಲಯಕ್ಕೆ ಅಂಟಿಕೊಂಡಂತಿರುವ ದೊಡ್ಡಬಳ್ಳಾಪುರದಿಂದ ವಿಶ್ವ ಮಹಿಳಾ ದಿನಾಚರಣೆಯಂದು ಕೆಟ್ಟ ಸುದ್ದಿಯೊಂದು ಕೇಳಿಬಂದಿದೆ. ಘಟನೆ ಇತ್ತೀಚೆಗೆ ನಡೆದಿದ್ದು, ಮಹಿಳೆಯ ಗೌರವಕ್ಕೆ ಚ್ಯುತಿ ಬರುವಂತೆ ಮಹಿಳೆಯೊಬ್ಬರ ಸೀರೆ ಬಿಚ್ಚಿ, ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮಹಿಳೆಯ ಮೇಲಿನ ದೌರ್ಜನ್ಯದ ಹೇಯ ಘಟನೆ ಫೆಬ್ರವರಿ 28 ರಂದು ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ನಡೆದಿದ್ದು, ತಡವಾಗಿ‌ ಬೆಳಕಿಗೆ ಬಂದಿದೆ (Womens Day 2022).

ಆಸ್ತಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಪತ್ನಿಯನ್ನ ಪತಿರಾಯ ಬಿಟ್ಟು ಹೋಗಿದ್ದಾನೆ. ಅದಕ್ಕೆ ಪಕ್ಕದ ಮನೆಯವರೆ ಕಾರಣ ಅಂತ ಅಕ್ರೋಶಗೊಂಡ ಹೆಂಡತಿ, ಪಕ್ಕದ್ಮನೆ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆಯನ್ನ ನಡೆಸಿದ್ದಾಳೆ ಅನ್ನೂ ಆರೋಪ ಕೇಳಿ‌ ಬಂದಿದೆ. ಗ್ರಾಮದ ಸುಧಮ್ಮ ಎಂಬುವರು ಜಯಮ್ಮ ಎಂಬುವರ ಸೀರೆ ಬಿಚ್ಚಿ ಅದೇ ಸೀರೆಯಿಂದ ಗ್ರಾಮದ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಸೀರೆ ಬಿಚ್ಚಿ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ನಮಗೆ ನ್ಯಾಯ ಕೊಡಿಸಿಲ್ಲ ಎಂದು ಹಲ್ಲೆಗೊಳಗಾದ ಜಯಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ. ಅಂದಹಾಗೆ ಮಲ್ಲೋಹಳ್ಳಿಯ ನಿವಾಸಿ ಸುಧಮ್ಮ, ಮುನಿರಾಜುಗೆ ಎರಡನೆ ಹೆಂಡತಿಯಾಗಿದ್ದು ಆಸ್ತಿ ಭಾಗದ ವಿಚಾರದಲ್ಲಿ ಗಲಾಟೆಯಾಗಿ ಗಂಡ ಪತ್ನಿಯಿಂದ ದೂರವಾಗಿದ್ದನಂತೆ.

ಹೀಗಾಗಿ ಪತಿರಾಯ ದೂರವಾಗಲು‌ ಪಕ್ಕದ ಮನೆ ನಿವಾಸಿ ಜಯಮ್ಮ ಮತ್ತು ಆಕೆಯ ಪತಿ ನಂಜಪ್ಪ ಕಾರಣ ಅಂತ ಕ್ಯಾತೆ ತೆಗೆದ ಸುಧಮ್ಮ ಮತ್ತು ಜಯಮ್ಮ ನಡುವೆ ಗಲಾಟೆ ಶುರುವಾಗಿದೆ. ಗಲಾಟೆಯ ವೇಳೆ ಪಕ್ಕದ ಮನೆಯ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಗ್ರಾಮದ ಮಧ್ಯಭಾಗದಲ್ಲಿ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂದು ಹಲ್ಲೆಗೊಳಗಾದ ಜಯಮ್ಮ ಮತ್ತು ಗ್ರಾಮದ ಮುಖಂಡ ಹೆಚ್.ಆರ್. ಮುನಿಶ್ಯಾಮಯ್ಯ ಆರೋಪಿಸಿದ್ದಾರೆ.

Also Read: ಶಾಸಕರು ಮಾಡಬೇಕಾದ ಕೆಲಸಗಳನ್ನ ನಾನು ಮಾಡ್ತಿದ್ದೇನೆ: ಜೆಡಿಎಸ್ ಶಾಸಕರತ್ತ ಚಾಟಿ ಬೀಸಿದ ಸಂಸದೆ ಸುಮಲತಾ

Also Read: Doddaballapur: ದೊಡ್ಡಬಳ್ಳಾಪುರ ಬಳಿ ಮಹಿಳೆಯ ಸೀರೆ ಬಿಚ್ಚಿ, ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆರೋಪ

Published On - 3:23 pm, Tue, 8 March 22

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ