Doddaballapur: ದೊಡ್ಡಬಳ್ಳಾಪುರ ಬಳಿ ಮಹಿಳೆಯ ಸೀರೆ ಬಿಚ್ಚಿ, ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆರೋಪ

Doddaballapur: ಗಲಾಟೆಯ ವೇಳೆ ಪಕ್ಕದ ಮನೆಯ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಗ್ರಾಮದ ಮಧ್ಯಭಾಗದಲ್ಲಿ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂದು ಹಲ್ಲೆಗೊಳಗಾದ ಜಯಮ್ಮ ಮತ್ತು ಗ್ರಾಮದ ಮುಖಂಡ ಹೆಚ್.ಆರ್. ಮುನಿಶ್ಯಾಮಯ್ಯ ಆರೋಪಿಸಿದ್ದಾರೆ.

Doddaballapur: ದೊಡ್ಡಬಳ್ಳಾಪುರ ಬಳಿ ಮಹಿಳೆಯ ಸೀರೆ ಬಿಚ್ಚಿ, ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆರೋಪ
ದೊಡ್ಡಬಳ್ಳಾಪುರ ಬಳಿ ಮಹಿಳೆಯ ಸೀರೆ ಬಿಚ್ಚಿ, ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆರೋಪ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 08, 2022 | 4:19 PM

ದೊಡ್ಡಬಳ್ಳಾಪುರ: ರಾಜಧಾನಿ ಬೆಂಗಳೂರಿನ ಹೊರವಲಯಕ್ಕೆ ಅಂಟಿಕೊಂಡಂತಿರುವ ದೊಡ್ಡಬಳ್ಳಾಪುರದಿಂದ ವಿಶ್ವ ಮಹಿಳಾ ದಿನಾಚರಣೆಯಂದು ಕೆಟ್ಟ ಸುದ್ದಿಯೊಂದು ಕೇಳಿಬಂದಿದೆ. ಘಟನೆ ಇತ್ತೀಚೆಗೆ ನಡೆದಿದ್ದು, ಮಹಿಳೆಯ ಗೌರವಕ್ಕೆ ಚ್ಯುತಿ ಬರುವಂತೆ ಮಹಿಳೆಯೊಬ್ಬರ ಸೀರೆ ಬಿಚ್ಚಿ, ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮಹಿಳೆಯ ಮೇಲಿನ ದೌರ್ಜನ್ಯದ ಹೇಯ ಘಟನೆ ಫೆಬ್ರವರಿ 28 ರಂದು ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ನಡೆದಿದ್ದು, ತಡವಾಗಿ‌ ಬೆಳಕಿಗೆ ಬಂದಿದೆ (Womens Day 2022).

ಆಸ್ತಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಪತ್ನಿಯನ್ನ ಪತಿರಾಯ ಬಿಟ್ಟು ಹೋಗಿದ್ದಾನೆ. ಅದಕ್ಕೆ ಪಕ್ಕದ ಮನೆಯವರೆ ಕಾರಣ ಅಂತ ಅಕ್ರೋಶಗೊಂಡ ಹೆಂಡತಿ, ಪಕ್ಕದ್ಮನೆ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆಯನ್ನ ನಡೆಸಿದ್ದಾಳೆ ಅನ್ನೂ ಆರೋಪ ಕೇಳಿ‌ ಬಂದಿದೆ. ಗ್ರಾಮದ ಸುಧಮ್ಮ ಎಂಬುವರು ಜಯಮ್ಮ ಎಂಬುವರ ಸೀರೆ ಬಿಚ್ಚಿ ಅದೇ ಸೀರೆಯಿಂದ ಗ್ರಾಮದ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಸೀರೆ ಬಿಚ್ಚಿ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ನಮಗೆ ನ್ಯಾಯ ಕೊಡಿಸಿಲ್ಲ ಎಂದು ಹಲ್ಲೆಗೊಳಗಾದ ಜಯಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ. ಅಂದಹಾಗೆ ಮಲ್ಲೋಹಳ್ಳಿಯ ನಿವಾಸಿ ಸುಧಮ್ಮ, ಮುನಿರಾಜುಗೆ ಎರಡನೆ ಹೆಂಡತಿಯಾಗಿದ್ದು ಆಸ್ತಿ ಭಾಗದ ವಿಚಾರದಲ್ಲಿ ಗಲಾಟೆಯಾಗಿ ಗಂಡ ಪತ್ನಿಯಿಂದ ದೂರವಾಗಿದ್ದನಂತೆ.

ಹೀಗಾಗಿ ಪತಿರಾಯ ದೂರವಾಗಲು‌ ಪಕ್ಕದ ಮನೆ ನಿವಾಸಿ ಜಯಮ್ಮ ಮತ್ತು ಆಕೆಯ ಪತಿ ನಂಜಪ್ಪ ಕಾರಣ ಅಂತ ಕ್ಯಾತೆ ತೆಗೆದ ಸುಧಮ್ಮ ಮತ್ತು ಜಯಮ್ಮ ನಡುವೆ ಗಲಾಟೆ ಶುರುವಾಗಿದೆ. ಗಲಾಟೆಯ ವೇಳೆ ಪಕ್ಕದ ಮನೆಯ ಮಹಿಳೆಯ ಸೀರೆ ಬಿಚ್ಚಿ ಅದೇ ಸೀರೆಯಿಂದ ಗ್ರಾಮದ ಮಧ್ಯಭಾಗದಲ್ಲಿ ಹುಣಸೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂದು ಹಲ್ಲೆಗೊಳಗಾದ ಜಯಮ್ಮ ಮತ್ತು ಗ್ರಾಮದ ಮುಖಂಡ ಹೆಚ್.ಆರ್. ಮುನಿಶ್ಯಾಮಯ್ಯ ಆರೋಪಿಸಿದ್ದಾರೆ.

ಹಳ್ಳಿಗಾಡಿನಲ್ಲಿ ಕುಡಿತದ ಚಟಕ್ಕೆ ಚಟ್ಟಕಟ್ಟಲು ಇನ್ನೂ ಎಷ್ಟು ಗೃಹಿಣಿಯರು ಪ್ರಾಣ ತೆರಬೇಕೋ… ವಿಜಯನಗರ: ಒಂದು ಕಡೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮದಿಂದ ನಡೆದಿದೆ. ಆದರೆ ಇತ್ತ ನೂತನ ಜಿಲ್ಲೆ ವಿಜಯನಗರದಲ್ಲಿ ಸೂತಕದ ಛಾಯೆ ಆವರಿಸಿದೆ. ಪುರಾತನ ಕುಡಿತದ ಚಟ ಬಿಡಿಸುವ ಯತ್ನದಲ್ಲಿ ಮಹಿಳೆಯೊಬ್ಬರು ಜೀವತೆತ್ತಿದ್ದಾರೆ. ಭಾರತದ ಹಳ್ಳಿಗಾಡಿನಲ್ಲಿ ಇನ್ನೂ ಅದೆಷ್ಟೋ ಗೃಹಿಣಿಯರು ಹೀಗೆ ಪ್ರಾಣ ತೆರಬೇಕೋ ಈ ಕುಡಿತದ ಚಟಕ್ಕೆ ಚಟ್ಟಕಟ್ಟಲು.

ಕುಡಿತ ಬಿಡಲು ಪತಿ ಒಪ್ಪಲಿಲ್ಲವೆಂದು ಪತ್ನಿ ನೇಣಿಗೆ ಶರಣಾಗಿದ್ದಾರೆ. ಕೂಡ್ಲಗಿ ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ಈ ಅತಿರೇಕದ ಘಟನೆ ನಡೆದಿದೆ. ಶೃತಿ (22) ಮನೆಯಲ್ಲಿ ನೇಣಿಗೆ ಶರಣಾದ ಗೃಹಿಣಿ. ಪತಿ ಶಶಿಧರ ಕುಡಿತದ ಚಟಕ್ಕೆ ದಾಸನಾಗಿದ್ದಾನೆ. ಗುಡೇಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 ಸಾವಿರ ಲಂಚ ಕೇಳಿ, 5 ಸಾವಿರ ರೂ ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಎಸ್‌ಐ ಬಳ್ಳಾರಿ: ಸಮರ್ಪಕ ನೋಂದಣಿ ದಾಖಲೆ ಇಲ್ಲದ ಬೈಕ್ ಬಿಡಲು 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಪರಾಧ ವಿಭಾಗದ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​​ (ಪಿಎಸ್‌ಐ) ಬಸಪ್ಪ ಲಮಾಣಿ ಎಸಿಬಿ ಬಲೆಗೆ ಬಿದ್ದ ಪೊಲೀಸ್​ ಅಧಿಕಾರಿ. ಲಂಚ ನೀಡದಿದ್ದರೆ ಬೈಕ್ ಸೀಜ್ ಮಾಡುವುದಾಗಿ ಪಿಎಸ್‌ಐ ಬಸಪ್ಪ ಬೆದರಿಸಿದ್ದರು. ಆ ಬಾಬತ್ತಿನಲ್ಲಿ, 5 ಸಾವಿರ ರೂಪಾಯಿ ಹಣ ಸ್ವೀಕರಿಸುವ ವೇಳೆ ಪಿಎಸ್ಐ ಬಲೆಗೆ ಬಿದ್ದಿದ್ದಾರೆ. ಕಂಪ್ಲಿಯ ನಾರಾಯಣಸ್ವಾಮಿ ಎಂಬುವರ ದೂರಿನ ಮೇರೆಗೆ ಎಸಿಬಿ ದಾಳಿ ನಡೆದಿತ್ತು. ಎಸಿಬಿ DySp ಹರಿಬಾಬು ನೇತೃತ್ವದಲ್ಲಿ ದಾಳಿ ನಡೆದಿತ್ತು. ಎಸಿಬಿ ಅಧಿಕಾರಿಗಳು ತದನಂತರ ಪಿಎಸ್‌ಐ ಬಸಪ್ಪ ಲಮಾಣಿ ವಿಚಾರಣೆ ನಡೆಸ್ತಿದ್ದಾರೆ.

Also Read: ಗೋವಾದಲ್ಲಿ ನಿಮ್ಮ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತಾ? ಉಸ್ತುವಾರಿ ನಾಯಕ ಡಿ.ಕೆ. ಶಿವಕುಮಾರ್ ಏನಂದರು? Also Read: Women‘s Day 2022: ‘ನಂಬಿಕೆ ಬಾರದೆ ಜವಾಬ್ದಾರಿ ಹೇಗೆ ತಗೋಳೋದು?’ 

Published On - 2:34 pm, Tue, 8 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ