Women‘s Day 2022: ‘ನಂಬಿಕೆ ಬಾರದೆ ಜವಾಬ್ದಾರಿ ಹೇಗೆ ತಗೋಳೋದು?’ 

Hampi Express : ಆ ನಂಬರ್‌ ಟ್ರ್ಯೂ ಕಾಲರ್​ನಲ್ಲಿ ‘ಭಾವನಾʼ ಅಂತ ಬಂತು, ಅದಕ್ಕೆ ತನ್ನ ತಂಗಿ ಹೆಸರೆಂದು ಹೇಳಿದಳು. ಆದರೆ ಆಕಡೆಯಿಂದ ಯಾರೂ ಆ ಕಾಲ್​ನ ರಿಸೀವ್‌ ಮಾಡಲಿಲ್ಲ. ಮತ್ತೆ ಅದೆ ಅನುಮಾನ! ಇದೊಂದು ಲೂಪ್‌ ಇರಬಹುದಾ?

Women‘s Day 2022: ‘ನಂಬಿಕೆ ಬಾರದೆ ಜವಾಬ್ದಾರಿ ಹೇಗೆ ತಗೋಳೋದು?’ 
ಪ್ರಾತಿನಿಧಿಕ ಚಿತ್ರ, ಸೌಜನ್ಯ : ಡಾ. ನಿಸರ್ಗ | ಲೇಖಕಿ: ಡಾ. ಜ್ಯೋತಿ ಸಾಮಂತ್ರಿ
Follow us
ಶ್ರೀದೇವಿ ಕಳಸದ
|

Updated on:Mar 08, 2022 | 4:01 PM

Women’s Day 2022 : ಅಷ್ಟರಲ್ಲಾಗಲೇ, ಸ್ಟೇಷನ್​ನ ಪೇದೆಗಳಿಂದ ವಿಷಯ ತಿಳಿದ ಮತ್ತೊಬ್ಬ ಪೊಲೀಸ್, ನಮ್ಮ ಮುಂದೆ ಮೂರುನಾಲ್ಕು ಸಲ ಓಡಾಡಿ, ಇವಳೇ ಎಂಬುದನ್ನ ಖಾತ್ರಿಪಡಿಸಿಕೊಂಡು ಬಂದು ನಮ್ಮನ್ನು ವಿಚಾರಿಸಿದರು. ಅವಳನ್ನು ಕುರಿತು ಕೆಲವು ಪ್ರಶ್ನೆಗಳನ್ನು ಕೇಳುತ್ತ ನನ್ನ ಬಗ್ಗೆಯೂ ಕೇಳಿದರು. ಅದಕ್ಕೆ ಆಕೆ, ‘ನನ್ನ ಫ್ರೆಂಡ್’ ಎಂದುಬಿಟ್ಟಳು. ಹೆಸರು? ಎಂದು ಕೇಳಿದಾಗ, ತುಸು ಯೋಚಿಸಿ ಭಾವನಾ ಎಂದಳು. ಆಗ ಪೊಲೀಸ್, ನನ್ನ ಬಗ್ಗೆ ಹೆಚ್ಚು ವಿಚಾರಿಸದೆ, ನಾನು ಯಾವ ಊರಿಗೆ ಹೊರಟಿದ್ದೇನೆ ಎಂದಷ್ಟೇ ಕೇಳಿ ಹೊರಟರು. ನಾನು ಎದ್ದವಳೇ ಅವರನ್ನೇ ಹಿಂಬಾಲಿಸಿದೆ. ಅವರನ್ನು ತಡೆದು, ಸೂಕ್ಷ್ಮವಾಗಿ ಎಲ್ಲ ವಿಚಾರವನ್ನೂ ತಿಳಿಸಿದೆ. ಅಷ್ಟೇ ಅಲ್ಲ, ನನಗಿನ್ನೂ ಆ ಹುಡುಗಿಯ ಮೇಲೆ ನಂಬಿಕೆ ಬಾರದ ಕಾರಣ ಬೇರೆ ಎಲ್ಲಾದರೂ ಅವಳಿಗೆ ಸೀಟ್‌ ವ್ಯವಸ್ಥೆ ಮಾಡಿಕೊಡಬಹುದಾ ಎಂದು ಕೇಳಿದೆ. ಡಾ. ಜ್ಯೋತಿ ಸಾಮಂತ್ರಿ, ಬಳ್ಳಾರಿ (Dr. Jyothi Samantri

*

(ಭಾಗ 2)

ನಾನು: ನಿಮ್‌ ಹಸ್ಬೆಂಡ್‌ ಏನ್‌ ಮಾಡ್ತಾರೆ, ಅವರ ಹೆಸರು? ಅವಳು: ಅದೆಲ್ಲ ಕೇಳ್ಬೇಡಿ. ನಾನು: ನೋಡಿ, ನೀವ್‌ ಏನು ಹೇಳಿಲ್ಲ ಅಂದ್ರೆ ನಿಮ್ಮನ್ನ ನಂಬೋದಾದ್ರು ಹೇಗೆ? ಈಗಿನ ಕಾಲದಲ್ಲಿ ಸುಳ್ಳು ಹೇಳಿ ಮೋಸ ಮಾಡೋರೇ ಜಾಸ್ತಿ, ಅಂಥದ್ರಲ್ಲಿ, ಬರಿ ಹೀಗಾಯ್ತು ಅಂತ ಹೇಳಿದ್ರೆ ಹೇಗೆ? ಈ ಥರ ಹತ್ತು ಕಥೆ ಹೇಳ್ಬಹುದು. ಅವಳು: ನಿಜ ನಿಜ… ನಂಬೇಡಿ. ಆದ್ರೆ, ನಾನ್ ಹೇಳೋ ಪರಿಸ್ಥಿತೀಲಿ ಇಲ್ವಲ್ಲ. ಅದೆಲ್ಲ ಅವ್ರಿಗೆ ಗೊತ್ತಾದ್ರೆ ನಮ್ಮಪ್ಪ ಅಮ್ಮನ್‌ ದೂರ್ತಾರೆ, ಅವ್ರಿಗೆ ಅವಮಾನ ಮಾಡ್ತಾರೆ. ನಾನು: ನಾನು ಅದನ್ನೆಲ್ಲ ಯಾರಿಗೆ ಹೇಳಳಿ? ನಿಮ್‌ ಮೇಲೆ ನಂಬಿಕೆ ಬಂದ್ರೆ ಏನಾದ್ರೂ ಸಹಾಯ ಮಾಡ್ಬಹುದು, ನನ್‌ ಜಾಗದಲ್ಲಿ ನೀವಿದ್ದಿದ್ರೆ ಏನ್‌ ಮಾಡ್ತಿದ್ರಿ? ಸುಮ್ನೆ ನಾನ್ಯಾಕೆ ರಿಸ್ಕ್‌ ತಗೊಳ್ಳಿ?

ಆಗ ಆಕೆ ನನ್ನ ಮೊಬೈಲ್‌ ತಗೊಂಡು ಒಂದ್‌ ನಂಬರ್‌ ಡಯಲ್‌ ಮಾಡಿ ಕೊಟ್ಟಳು.

ಅವಳು: ನಮ್ಮಮ್ಮನ ನಂಬರ್‌, ಅವ್ರತ್ರ ನನ್‌ ತಂಗಿ ನಂಬರ್‌ ಇಸ್ಕೊಂಡ್‌ ಮಾತಾಡಿ, ಅವಳೇ ನಿಮಗೆ ಎಲ್ಲ ಹೇಳ್ತಾಳೆ.

ಆ ನಂಬರ್‌ ಟ್ರ್ಯೂ ಕಾಲರ್​ನಲ್ಲಿ ‘ಭಾವನಾʼ ಅಂತ ಬಂತು, ಅದಕ್ಕೆ ತನ್ನ ತಂಗಿ ಹೆಸರೆಂದು ಹೇಳಿದಳು. ಆದರೆ ಆಕಡೆಯಿಂದ ಯಾರೂ ಆ ಕಾಲ್​ನ ರಿಸೀವ್‌ ಮಾಡಲಿಲ್ಲ. ಮತ್ತೆ ಅದೆ ಅನುಮಾನ! ಇದೊಂದು ಲೂಪ್‌ ಇರಬಹುದಾ?

ಇದನ್ನೂ ಓದಿ : No Delete Option: ‘ಯಾವಳೇ ಅವಳು ಅಷ್ಟೊಂದ್ ಧೈರ್ಯ ಎಲ್ಲಿಂದ ಬಂತು ನಿಮಗೆ!’ ವಾರ್ಡನ್ ರೌದ್ರಾವತಾರ

ಪೇದೆ ಮತ್ತೆ ಬಂದು, “ಎಸ್‌ 4 ನಲ್ಲಿ 2 ಸೀಟ್‌ ಖಾಲಿ ಇವೆ, ನೀವ್‌ ಅಲ್ಲಿ ಹೋಗ್ಬಹುದು” ಎಂದ.

ನಾನು: ಅವರು ಮಾತ್ರ ಹೋಗ್ತಾರೆ, ನಾನು ಇಲ್ಲೆ ಇರ್ತೀನಿ. ಅವಳು: ಪ್ಲೀಸ್‌, ನಾನು ಕೂಡ ಇಲ್ಲೇ ಇರ್ತೀನಿ. ಹೀಗೆ ಒಂದ್‌ ಮೂಲೇಲಿ ಕೂತ್ಕೊತೀನಿ, ನೀವ್‌ ಮಲ್ಕೊಳಿ. ನಾನು: ಬೇಡ, ಸುಸ್ತಾಗಿದ್ದೀರಿ, ಆರಾಮಾಗಿ ನಿದ್ದೆ ಮಾಡಿ, ನಾಳೆ ಬೆಳಿಗ್ಗೆ ಮಾತಾಡುವಾ.

ಅವಳು ಅಸಹಾಯಕಳಂತೆ ಮೌನ ವಹಿಸಿದಳು.

ಪೇದೆ: ನಿಮ್‌ ಫ್ರೆಂಡ್‌ ಅಂತೀರಾ, ಜೊತಿಗಿರಿ, ಅವರಿಗೂ ಒಂದ್‌ ಧೈರ್ಯ ಇರುತ್ತೆ. ನಾನು: ನಂಬಿಕೆ ಬಾರದೆ ಜವಾಬ್ದಾರಿ ಹೇಗ್‌ ಸರ್‌ ತಗೋಳೋದು? ಪೇದೆ: ನಿಮ್ಮಿಷ್ಟ.

ಹೋಗುವ ಮುಂಚೆ ಅವಳು, “ಬೆಳಿಗ್ಗೆ ಆ ನಂಬರ್​ಗೆ ಫೋನ್‌ ಮಾಡಿ ತಂಗಿ ನಂಬರ್‌ ತಗೊಳ್ಳಿ, ಅವ್ಳ ಜೊತೆ ಮಾತಾಡಿ ನಂಬಿಕೆ ಬಂದ್ರೆ ನಾನ್‌ ಇರೋ ಕಡೆ ಬನ್ನಿ ಇಲ್ಲಾಂದ್ರೆ ಬೇಡ. ತುಂಬಾ ಥ್ಯಾಂಕ್ಸ್”‌ ಎಂದಳು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Women’s Day 2022: ‘ತಾಳೀಗೀಳಿ ಎಲ್ಲ ಒಡವೇನೂ ಅವನ ಮುಖಕ್ಕೆ ಎಸೆದು ಬಂದುಬಿಟ್ಟೆ’

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/dr-jyothi-samantri

Published On - 12:42 pm, Tue, 8 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್