‘ಮೃತ ಯೋಧ ಅಲ್ತಾಫ್​ಗೆ ಪರಿಹಾರ ಘೋಷಿಸಿ; ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಕೊಡ್ತೀರಾ ಸೈನಿಕನಿಗೆ ಯಾಕೆ ಕೊಡಲ್ಲ?’

ಇದಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿದ್ದಾರೆ. ದೇಶ ಕಾಯೋ ಸೈನಿಕರಿಗೆ ನಮ್ಮ ಸರ್ಕಾರ ಗೌರವ ಕೊಡುತ್ತೆ. ಪರಿಹಾರ ಕೊಡುವ ಕೆಲಸ ಮಾಡುತ್ತೆ ಎಂದು ಭರವಸೆ ನೀಡಿದ್ದಾರೆ.

‘ಮೃತ ಯೋಧ ಅಲ್ತಾಫ್​ಗೆ ಪರಿಹಾರ ಘೋಷಿಸಿ; ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಕೊಡ್ತೀರಾ ಸೈನಿಕನಿಗೆ ಯಾಕೆ ಕೊಡಲ್ಲ?’
ಸಿ.ಎಂ ಇಬ್ರಾಹಿಂ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Mar 08, 2022 | 1:01 PM

ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಹಿಮಗಡ್ಡೆಯಲ್ಲಿ ಸಿಲುಕಿ ಮೃತನಾದ ಯೋಧ ಅಲ್ತಾಫ್ ಅಹಮದ್​ಗೆ ಕರ್ನಾಟಕ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು. ಹರ್ಷನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಕೊಡ್ತೀರ. ದೇಶ ಕಾಯೋ ಸೈನಿಕನಿಗೆ ಯಾಕೆ ಪರಿಹಾರ ಕೊಡಲ್ಲ. ಅವರಿಗೆ ಜಿಲ್ಲಾಧಿಕಾರಿ, ಉಸ್ತುವಾರಿ ಮಂತ್ರಿಯೂ ಅಂತಿಮ ನಮನ ಸಲ್ಲಿಕೆ ಮಾಡಲಿಲ್ಲ. ಕೂಡಲೇ ಪರಿಹಾರ ಕೊಡಿ. ಆತನ ಕುಟುಂಬಕ್ಕೆ ಮನೆ ಇಲ್ಲ. ಆ ಕುಟುಂಬಕ್ಕೆ ನಿವೇಶನ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಇಂದು (ಮಾರ್ಚ್ 8) ಹೇಳಿದ್ದಾರೆ. ಶೂನ್ಯವೇಳೆಯಲ್ಲಿ ಕಾಂಗ್ರೆಸ್​ನ ಇಬ್ರಾಹಿಂ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದಾರೆ.

ಇದಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿದ್ದಾರೆ. ದೇಶ ಕಾಯೋ ಸೈನಿಕರಿಗೆ ನಮ್ಮ ಸರ್ಕಾರ ಗೌರವ ಕೊಡುತ್ತೆ. ಪರಿಹಾರ ಕೊಡುವ ಕೆಲಸ ಮಾಡುತ್ತೆ ಎಂದು ಭರವಸೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಭಜರಂಗದಳ ಕಾರ್ಯಕರ್ತ ಹರ್ಷಾ ( Bajrang Dal activist Harsha) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹರ್ಷಾ ಮನೆಗೆ ಮಾಜಿ ಸಿಎಂ ಬಿಎಸ್ ವೈ, ಸಚಿವ ಕೆ. ಎಸ್. ಈಶ್ವರಪ್ಪ ಸಂಸದ ಬಿ. ವೈ. ರಾಘವೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಜೊತೆಗೆ 25 ಲಕ್ಷ ರೂಪಾಯಿ ಚೆಕ್ ಪರಿಹಾರವನ್ನು ಕುಟುಂಬಕ್ಕೆ ನೀಡಿದ್ದರು. ಅಲ್ಲದೆ, ವಿವಿಧ ರಾಜಕೀಯ ಮುಖಂಡರು ಹರ್ಷ ಮನೆಗೆ ಭೇಟಿ ನೀಡಿದ್ದರು.

ಇತ್ತ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿ ಯೋಧ ಅಲ್ತಾಫ್ ಅಹ್ಮದ್(Althaf Ahmed) ಅವರ ಪಾರ್ಥಿವ ಶರೀರ ಫೆಬ್ರವರಿ 26 ರಂದು ಕೊಡಗು ಜಿಲ್ಲೆಯ ವಿರಾಜಪೇಟೆಗೆ ತರಲಾಗಿತ್ತು. ಶ್ರೀನಗರದಲ್ಲಿ ಹುತಾತ್ಮರಾಗಿದ್ದ ಯೋಧ ಅಲ್ತಾಫ್ ಅಹ್ಮದ್ (37) ಪಾರ್ಥಿವ ಶರೀರ ಅವರ ಹುಟ್ಟುರಾದ ಕೊಡಗು ಜಿಲ್ಲೆಯ ವಿರಾಜಪೇಟೆಗೆ ತರಲಾಗಿತ್ತು. ವಿರಾಜಪೇಟೆ ತಾಲ್ಲೂಕು ಕೇಂದ್ರದ ಮೈದಾನದಲ್ಲಿ ಅಂತಿಮ‌ ಕಾರ್ಯಕ್ರಮ ನಡೆಸಲಾಗಿತ್ತು. ಫೆಬ್ರವರಿ 23 ರಂದು ಹುತಾತ್ಮರಾದ ವೀರ ಯೋಧ ಅಲ್ತಾಫ್ ಅಹ್ಮದ್ ಅವರಿಗೆ ಸರ್ಕಾರಿ ಮತ್ತು ಸೇನಾ ಗೌರಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ಇದನ್ನೂ ಓದಿ: Bajrang Dal activist: ಭಜರಂಗದಳ ಕಾರ್ಯಕರ್ತ ಹರ್ಷಾ ಮನೆಗೆ ಮಾಜಿ ಸಿಎಂ ಬಿಎಸ್​ವೈ ಭೇಟಿ; 25 ಲಕ್ಷ ರೂ. ಪರಿಹಾರ

ಇದನ್ನೂ ಓದಿ: ಹರ್ಷ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ, ಸಂಚಿನ ತನಿಖೆ ನಡೆಯುತ್ತಿದೆ: ಈಶ್ವರಪ್ಪ

Published On - 12:54 pm, Tue, 8 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ