Bajrang Dal activist: ಭಜರಂಗದಳ ಕಾರ್ಯಕರ್ತ ಹರ್ಷಾ ಮನೆಗೆ ಮಾಜಿ ಸಿಎಂ ಬಿಎಸ್ವೈ ಭೇಟಿ; 25 ಲಕ್ಷ ರೂ. ಪರಿಹಾರ
ಜಿಲ್ಲೆಯ ಬಿಜೆಪಿ ಕಚೇರಿಗೆ ಮಾಜಿ ಸಿಎಂ ಬಿಎಸ್ ವೈ ಭೇಟಿ ನೀಡಿದ್ದು, ಕಾರ್ಯಕರ್ತ ಸಭೆಯಲ್ಲಿ ಭಾಗವಹಿಸಿದ್ದಾರೆ. ಮುಂದಿನ ಚುನಾವಣೆ ತಾಲೀಮು ಆರಂಭಿಸಿದ ಬಿಎಸ್ ವೈ, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದಿದ್ದಾರೆ.
ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷಾ ( Bajrang Dal activist Harsha) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹರ್ಷಾ ಮನೆಗೆ ಮಾಜಿ ಸಿಎಂ ಬಿಎಸ್ ವೈ, ಸಚಿವ ಕೆ. ಎಸ್. ಈಶ್ವರಪ್ಪ ಸಂಸದ ಬಿ. ವೈ. ರಾಘವೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ 25 ಲಕ್ಷ ರೂಪಾಯಿ ಚೆಕ್ ಪರಿಹಾರವನ್ನು ಕುಟುಂಬಕ್ಕೆ ನೀಡಿದ್ದಾರೆ. ಭೇಟೆ ಬಳಿಕ ಮಾಜಿ ಸಿಎಂ ಬಿಎಸ್ ವೈ ಮಾತನಾಡಿದ್ದು, ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಮಾಡಿದ್ದಾರೆ. ಹರ್ಷ ಹುಲಿಯಂತೆ ಬಾಳಿ ಬದುಕಬೇಕಾಗಿತ್ತು. ಹರ್ಷ ಕೊಲೆ ಆರೋಪಿಗಳಿಗೆ ಮರಣದಂಡನೆ ಆಗಬೇಕಿದೆ. ಹರ್ಷ ಎಲ್ಲರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ. ಹಿಂದೂ ಯುವ ಮುಖಂಡರನಾಗಿ ಬೆಳೆಯುತ್ತಿದ್ದು, ಇದನ್ನು ಸಹಿಸದೇ ಆತನ ಕೊಲೆ ಮಾಡಿದ್ದಾರೆ. ನಮ್ಮ ಮತ್ತು ಮೋದಿ ಅಪೇಕ್ಷೆ ಎಲ್ಲರೂ ಒಟ್ಟಾಗಿ ಬಾಳಬೇಕು. ಎಲ್ಲರೂ ಶಾಂತಿ ನೆಲೆಸಲು ಗಮನ ಹರಿಸಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಸೇರಿ ಒಟ್ಟಾಗಿ ಬಾಳಬೇಕು. ಇಂತಹ ದುರ್ಘಟನೆ ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದ್ದು, ಎಲ್ಲರೂ ಒಂದೇ ತಾಯಿ ಮಕ್ಕಳ ಅಂತೆ ಬಾಳಬೇಕಾಗಿದೆ ಎಂದು ಹೇಳಿದರು.
ಜಿಲ್ಲೆಯ ಬಿಜೆಪಿ ಕಚೇರಿಗೆ ಮಾಜಿ ಸಿಎಂ ಬಿಎಸ್ ವೈ ಭೇಟಿ ನೀಡಿದ್ದು, ಕಾರ್ಯಕರ್ತ ಸಭೆಯಲ್ಲಿ ಭಾಗವಹಿಸಿದ್ದಾರೆ. ಮುಂದಿನ ಚುನಾವಣೆ ತಾಲೀಮು ಆರಂಭಿಸಿದ ಬಿಎಸ್ ವೈ, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ಅಕ್ಕಪಕ್ಕ ಜೆಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಪಡೆಯಿದೆ. ಭದ್ರಾವತಿ ಸೇರಿ ಎಲ್ಲ ಕ್ಷೇತ್ರ ಶಿವಮೊಗ್ಗ ಜಿಲ್ಲೆಯಲ್ಲಿ ಗೆಲ್ಲುವ ಟಾರ್ಗೇಟ್ನ್ನು ಬಿಎಸ್ವೈ ನೀಡಿದ್ದಾರೆ. ಬಿಜೆಪಿಗೆ ಭದ್ರಾವತಿ ಕ್ಷೇತ್ರ ಗೆಲ್ಲಲು ಸಾಧ್ಯ ಆಗಿಲ್ಲ. ಈ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಗೆಲ್ಲಬೇಕು. ಕಾಂಗ್ರೆಸ್ ಪಕ್ಷ ಈಗಾಗಲೇ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದಂತೆ ವರ್ತನೆ ಮಾಡುತ್ತಿದ್ದು, ಹಗಲು ಗನಸು ಕಾಣುತ್ತಿದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಎಂಎಲ್ ಸಿ ಭಾರತಿ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಮೇಘರಾಜ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:
ಭಾರತದ ಈ ವಿಚಿತ್ರ ಮಾರುಕಟ್ಟೆಗಳ ಬಗ್ಗೆ ನಿಮಗೆ ಗೊತ್ತಾ..! ಇಲ್ಲಿದೆ ಮಾಹಿತಿ
‘ಹೆಂಗೆ ನಾವು..’ ಅಂತ ಫೇಮಸ್ ಆದ ರಚನಾ ಇಂದರ್ಗೆ ಜನ್ಮದಿನ; ಇಲ್ಲಿವೆ ಸುಂದರ ಫೋಟೋಗಳು
Published On - 12:38 pm, Sun, 6 March 22