ಹುಬ್ಬಳ್ಳಿಯಲ್ಲಿ ನೂತನ ಎಫ್​.ಎಸ್​.ಎಲ್ ಲ್ಯಾಬ್ ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಹಲವಾರು ಕೇಸ್ ಗಳನ್ನ ಹೈದ್ರಾಬಾದ್ ಗೆ ತೆಗದುಕೊಂಡು ಹೋಗೊ ಕಾಲ ಇತ್ತು. ಆದ್ರೆ ಇಂದು ಅದೆಲ್ಲವೂ ಬದಲಾಗಿದೆ. ಹೀಗಾಗೇ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಎಫ್. ಎಸ್. ಎಲ್ (FSL) ಆರಂಭಿಸಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೂತನ ಎಫ್. ಎಸ್. ಎಲ್ ಲ್ಯಾಬ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಅಪರಾಧ ಶೋಧನೆಯಲ್ಲಿ FSL ಮಹತ್ವದ ಘಟ್ಟವಹಿಸಿದೆ. ಕೋಟ್೯ ಗಳಲ್ಲಿ ಮಾನ್ಯತೆ ಬೇಕಾದ್ರೆ FSL ವರದಿ ಬೇಕು. ಕೇವಲ ಬೆಂಗಳೂರಿನಲ್ಲಿ ಈ […]

ಹುಬ್ಬಳ್ಳಿಯಲ್ಲಿ ನೂತನ ಎಫ್​.ಎಸ್​.ಎಲ್ ಲ್ಯಾಬ್ ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ನೂತನ ಎಫ್. ಎಸ್. ಎಲ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 06, 2022 | 1:49 PM

ಹುಬ್ಬಳ್ಳಿ: ಹಲವಾರು ಕೇಸ್ ಗಳನ್ನ ಹೈದ್ರಾಬಾದ್ ಗೆ ತೆಗದುಕೊಂಡು ಹೋಗೊ ಕಾಲ ಇತ್ತು. ಆದ್ರೆ ಇಂದು ಅದೆಲ್ಲವೂ ಬದಲಾಗಿದೆ. ಹೀಗಾಗೇ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಎಫ್. ಎಸ್. ಎಲ್ (FSL) ಆರಂಭಿಸಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೂತನ ಎಫ್. ಎಸ್. ಎಲ್ ಲ್ಯಾಬ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಅಪರಾಧ ಶೋಧನೆಯಲ್ಲಿ FSL ಮಹತ್ವದ ಘಟ್ಟವಹಿಸಿದೆ. ಕೋಟ್೯ ಗಳಲ್ಲಿ ಮಾನ್ಯತೆ ಬೇಕಾದ್ರೆ FSL ವರದಿ ಬೇಕು. ಕೇವಲ ಬೆಂಗಳೂರಿನಲ್ಲಿ ಈ ಕೇಂದ್ರ ಇತ್ತು. ವರದಿ ಬರೋದು ಮೂರು ತಿಂಗಳು ಆಗ್ತಿದೆ. ಬ್ಯಾಂಕಿಂಗ್ ಮೋಸ ಬಹಳ ಆಗ್ತಿದೆ. ಜಾರ್ಖಂಡ್ ನ ಒಂದು ಹಳ್ಳಿ ಸೈಬರ್ ಕ್ರೈಂಗೆ ಹೆಸರುವಾಸಿಯಾಗಿದೆ. ಕ್ಷಣಮಾತ್ರದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ. DNA, cyber, mobile audio, video ಸೆಕ್ಷನ್ ಇರಲಿಲ್ಲ. ಅವೆಲ್ಲಾ ಇಲ್ಲಿ ಕಾರ್ಯನಿವರ್ಹಿಸುತ್ತೆವೆ. ನಾಕೋಟಿಕ್ ಸೆಕ್ಷನ್ ಕೂಡಾ,ಕೆಲವೇ ದಿನಗಳಲ್ಲಿ ಅದನ್ನ ಕೂಡಾ ಮಾಡುತ್ತೇವೆ. ಅತೀ ಹೆಚ್ಚು ಕ್ರೈಂಗಳನ್ನ ನಮ್ಮ ಪೊಲೀಸರು ಶೋಧಿಸುತ್ತಿದ್ದಾರೆ. ಅವರ ಕೆಲಸಕ್ಕೆ ನನ್ನ ಅಭಿನಂದನೆ ಸಲ್ಲಿಸುತ್ತೆನೆ. ಜಯದೇವ ಸಂಸ್ಥೆಯನ್ನ ಹುಬ್ಬಳ್ಳಿಗೆ ತಂದಿದ್ದೆವೆ. ಇದು ಈ ಭಾಗದ ಜನರಿಗೆ ಒಳ್ಳೆಯ ಸೌಲಭ್ಯ ನೀಡುತ್ತೆ. ಯುವಕರಿಗೆ ಉದ್ಯೋಗ ನಿಡೋಕೆ ಎಫ್. ಎಂಸಿ ಕ್ಲಸ್ಟರ್ ಕೂಡಾ ಆದಷ್ಟು ಬೇಗ ಆರಂಭವಾಗುತ್ತೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಈ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.

ಸಿಎಂಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಭಿನಂದನೆ ಸಲಿಸಿದ್ದು, 36 ವರ್ಷದಿಂದ ನಾವು ಇದಕ್ಕಾಗಿಯೇ ಕಾಯುತ್ತಿದ್ದೆವು. ಇಂತಹ ಲ್ಯಾಬರೋಟರಿ ಕೇವಲ 2 ವರ್ಷದಲ್ಲಿ ಆಗಿದ್ದು ನಿಜಕ್ಕೂ ಖುಷಿ ವಿಚಾರ. ನೀವು ಗೃಹ ಸಚಿವರಿದ್ದಾಗಲೇ ಈ ಕನಸು ಕಂಡಿದ್ರಿ. ಅದು ಇಷ್ಟು ಬೇಗ ಆಗಿದ್ದು, ನಿಜಕ್ಕೂ ಖುಷಿ ತಂದಿದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರಪಾಟೀಲ ಮುನೇನಕೊಪ್ಪ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸಿದ್ದರು. ಜೊತೆಗೆ ಎ.ಪಿ.ಎಂ.ಸಿಯ ಮಹಾದ್ವಾರ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನೂತನವಾಗಿ ನಿರ್ಮಿಸಿದ ರೈತ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಇದೇ ವೇಳೆ ಜಾನುವಾರು ಮಾರುಕಟ್ಟೆ, ಈರುಳ್ಳಿ ಸಂಗ್ರಹಣಾ ಗೋದಾಮನ್ನು ಸಹ ಉದ್ಘಾಟಿಸಿದ್ದಾರೆ.

ಆಧುನಿಕ ಕ್ರೈಂಗಳು ಹೆಚ್ಚುತ್ತಿವೆ. ಹಿಗಾಗಿ ಅಂತಹ ಕ್ರೈಂ ಪ್ರಕರಣ ತಡೆಯಲು FSL ಕೇಂದ್ರಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ಹುಬ್ಬಳ್ಳಿಯ RFSL ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಈ ಪ್ರಯೋಗಲಾಯಕ್ಕೆ ಬೇಕಾದ ಎಲ್ಲ ಸಿಬ್ಬಂದಿಗಳನ್ನ ನೀಡಲಾಗಿದೆ. ಸಮಾಜ ಘಾತುಕ ಶಕ್ತಿಗಳನ್ನ ತ್ವರಿತ ಗತಿಯಲ್ಲಿ ಮಟ್ಟ ಹಾಕಲು ಎಸ್. ಎಸ್. ಎಲ್. ಸಹಕಾರಿಯಾಗಿದೆ. ಪೊಲೀಸ್ ಇಲಾಖೆಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಮಾದಕ ವಸ್ತು ನಮ್ಮ ಪಿಡುಗು ಆಗಿದೆ. ಅದನ್ನ ತೊಡಗುಸೋಕೆ ನಮ್ಮ ಸರ್ಕಾರ ಪಣ ತೊಟ್ಟಿದೆ ಎಂದು ಹೇಳಿದರು.

ಪೊಲೀಸರು ನೆಮ್ಮದಿಯಿಂದ ಕೆಲಸ‌ ಮಾಡಬೇಕು ಅಂದ್ರೆ ಔರಾದಕರ್ ವರದಿ ಜಾರಿ‌ ಮಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಎಫ್. ಎಸ್. ಎಲ್. ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವರದಿಯ ಎಲ್ಲಾ ಅಂಶಗಳನ್ನ ಜಾರಿ ಮಾಡೋಕೆ ಆಗಲ್ಲ. ಅಟ್ ಲಿಸ್ಟ್ ಬೇಸಿಕ್ ಅಂಶಗಳನ್ನಾದ್ರು ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿಕೊಂಡರು. ವಿಜ್ಞಾನ ಅಭಿವೃದ್ಧಿ ಆಗುತ್ತಿದ್ದಂತೆ ಆಡಳಿತ ಅಪರಾಧಿಗಳು ಬಳಕೆ ಮಾಡುತ್ತಾರೆ. ಎಫ್. ಎಸ್. ಎಲ್ ಕೇಂದ್ರ ಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇದ್ದಿದ್ದನ್ನು ಬೇರೆ ಭಾಗದಲ್ಲಿ ಮಾಡಿದ್ದಾರೆ. ಹುಬ್ಬಳ್ಳಿಗೆ ಒಂದು ಕಲ್ಪನೆ ಮಾಡಿ ಅದಕ್ಕೆ ಅನುಮತಿ ಕೊಟ್ಟಿದ್ರು, ಇದೀಗ ಅದು ಪ್ರಾರಂಭವಾಗಿದೆ. ಅಪರಾಧಗಳು ಮೊದಲು ಕಡಿಮೆಯಿತ್ತು. ಆಗ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈಗ ಜಗತ್ತಿನಲ್ಲಿ ಅಪರಾಧ ಸಂಖ್ಯೆ ಜಾಸ್ತಿ ಆಗಿದೆ‌. ದೇಶದಲ್ಲಿ ಅಪರಾಧ ಪ್ರಕರಣಗಳು ಸಹ ಹೆಚ್ಚಾಗಿದೆ. ಇದನ್ನ ಮನಗಂಡ ಪ್ರಧಾನಿ 2009ರಲ್ಲಿ ಗುಜರಾತ್ ನಲ್ಲಿ ವಿಧಿ ವಿಜ್ಞಾನ ವಿವಿ ಪ್ರಾರಂಭ ಮಾಡಿದರು. ಇಲ್ಲಿರುವ ಕೆಲವು ಕಾಲೇಜು, ವಿವಿಯಲ್ಲಿ ಸಹ ವಿಧಿ ವಿಜ್ಞಾನ ಕಲಿಯುವ ಹೊಸ ಯೋಜನೆ ತರಬೇಕು. ಹುಬ್ಬಳ್ಳಿಯ ವಿಧಿವಿಜ್ಞಾನ ಕೇಂದ್ರವನ್ನು ಹೈದರಾಬಾದ್ ಬೆಂಗಳೂರು ಲೇವಲ್ ಗೆ ತೆಗೆದುಕೊಂಡು ಹೋಗಿ. ರಾಜ್ಯ ಸರ್ಕಾರ ಕಟ್ಟಡ ಕೊಟ್ಟರೇ ತಂತ್ರಜ್ಞಾನವನ್ನು ಭಾರತ ಸರ್ಕಾರ ನಿರ್ಭಯಾ ಫಂಡ್ ನಲ್ಲಿ ನೀಡಲಾಗುವುದು.

ಇದನ್ನೂ ಓದಿ:

ಪುಣೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ, ಮೆಟ್ರೊ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ

Published On - 1:48 pm, Sun, 6 March 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?