ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ; ಸಚಿವ ವಿ.ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ನಾವು ಅಧಿಕಾರದಲ್ಲಿ ಇದ್ದಿದ್ದರೆ ಬಡವರಿಗೆ ಮನೆ ನೀಡುತ್ತಿದ್ದೆವು. 1 ಲಕ್ಷ ಮನೆಗಳನ್ನು ಬಡವರಿಗಾಗಿ ನೀಡುತ್ತಿದ್ದೆವು. ಆದ್ರೆ ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ(V Somanna) ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ( Siddaramaiah) ವಾಗ್ದಾಳಿ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ(Rice) ನೀಡುತ್ತೇವೆ. ಕಾಂಗ್ರೆಸ್ಗೆ ಓಟು ಹಾಕಿದರೆ ನನಗೇ ಓಟು ಹಾಕಿದಂತೆ ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಕಲಬುರಗಿ: ಪ್ರಾದೇಶಿಕ ಅಸಮತೋಲನ ಖಂಡಿಸಿ ಕಾಂಗ್ರೆಸ್‌ನಿಂದ ಕಲ್ಯಾಣ ಕರ್ನಾಟಕ ಯಾತ್ರೆ: ಈಶ್ವರ ಖಂಡ್ರೆ
ಪ್ರಾದೇಶಿಕ ಅಸಮತೋಲನ ಖಂಡಿಸಿ ಕಲ್ಯಾಣ ಕರ್ನಾಟಕ ಯಾತ್ರೆ ನಡೆಸಲಾಗುವುದು. ಕಾಂಗ್ರೆಸ್‌ನಿಂದ ಕಲ್ಯಾಣ ಕರ್ನಾಟಕ ಯಾತ್ರೆ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಯಾತ್ರೆಗೆ ರೂಪರೇಷೆ ಸಿದ್ಧಗೊಳಿಸುತ್ತಿದ್ದೇವೆ. ಈಗಾಗಲೇ ಈ ಬಗ್ಗೆ 2 ಬಾರಿ ಸಭೆ ಕರೆದು ಚರ್ಚೆ ಮಾಡಿದ್ದೇವೆ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭಾನುವಾರ ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರು ಕೋಮ ಸೌಹರ್ದಾತೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಪ್ರಾದೇಶಿಕ ಅಸಮತೋಲನ ಖಂಡಿಸಿ ಕಲ್ಯಾಣ ಕರ್ನಾಟಕ ಯಾತ್ರೆ ನಡೆಸುತ್ತೇವೆ. ಬರುವ ಏಪ್ರೀಲ್ನಲ್ಲಿ ಯಾತ್ರೆ ನಡೆಸೋ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಈ ಬಗ್ಗೆ ಎರಡು ಬಾರಿ ಸಭೆ ಕರೆದು ಚರ್ಚೆ ಮಾಡಿದ್ದೇವೆ ಎಂದು ಕಲಬುರಗಿ ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬಿಜೆಪಿ ಸರ್ಕಾರದಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಬಜೆಟ್ ನಲ್ಲಿ ಮೂರು ಸಾವಿರ ಕೋಟಿ ನೀಡಿದ್ದಾರೆ. ಆದ್ರೆ ಈ ಹಿಂದೆ ನೀಡಿದ್ದ ಹಣವನ್ನೇ ಇನ್ನು ಖರ್ಚು ಮಾಡಿಲ್ಲ. ಹಣ ನೀಡಿರೋದು ಟ್ರಜರಿಯಲ್ಲಿಟ್ಟು ಪೂಜೆ ಮಾಡಲಿಕ್ಕಾ? ಬಿಜೆಪಿಯವರು ಕೇವಲ ತುಟಿಗೆ ತುಪ್ಪ ಹಚ್ಚೋ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಖಂಡ್ರೆ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಿಂದ ಸರ್ಕಾರ ಕೋಟಿ ರೂಪಾಯಿ ನೀಡಿದೆ. ಹೆಚ್.ಡಿ ಕುಮಾರಸ್ವಾಮಿ ಅವರು ಹೊಟ್ಟೆಕಿಚ್ಚಿನಿಂದ ಮಾತಾಡ್ತಿದ್ದಾರೆ ಎಂದು ಪಾದಯಾತ್ರೆ ಹಾಗೂ ಮೇಕೆದಾಟು ಯೋಜನೆ ಬಗ್ಗೆ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ‘ಸುಡುಗಾಡು ಸಿದ್ದ’ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ; ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ಕಿಡಿ
Published On - 2:32 pm, Sun, 6 March 22