AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಳುಬಿದ್ದ ಜಮೀನನ್ನೇ ಸುಂದರ ಉದ್ಯಾನವನ ಮಾಡಿದ ಸಿಇಒ; ಮನ್ರೇಗಾ ಯೋಜನೆಯಡಿ ವಸತಿಗೃಹದ ಮುಂದೆಯೇ ಪಾರ್ಕ್​

ಪಾಳುಬಿದ್ದ ಜಮೀನು ಈಗ ಮಿನಿ ಲಾಲ್‌ಬಾಗ್‌ನಂತೆ ಆಗಿದ್ದು, 17 ಗುಂಟೆ ಜಮೀನಿನಲ್ಲಿ ಉದ್ಯಾನವನ ತಲೆ ಎತ್ತಿ ನಿಂತಿದೆ. ಇಲ್ಲಿ ವಾಕಿಂಗ್ ಲೇನ್‌ಗಳು, ಕುಳಿತುಕೊಳ್ಳಲು ಹಟ್‌ಗಳು, ನೀರಿನ ಕಾರಂಜಿ, ಗಾರ್ಡನ್, ವೆಜಿಟೇಬಲ್ ಗಾರ್ಡನ್, ರೋಸ್ ಗಾರ್ಡನ್ ಸೇರಿದಂತೆ ವಿನೂತನ ಮಾದರಿಯ ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ.

ಪಾಳುಬಿದ್ದ ಜಮೀನನ್ನೇ ಸುಂದರ ಉದ್ಯಾನವನ ಮಾಡಿದ ಸಿಇಒ; ಮನ್ರೇಗಾ ಯೋಜನೆಯಡಿ ವಸತಿಗೃಹದ ಮುಂದೆಯೇ ಪಾರ್ಕ್​
ಮನೆಯ ಮುಂದೆ ಮಿನಿ ಲಾಲ್‌ಬಾಗ್ ನಿರ್ಮಿಸಿದ್ದಾರೆ
TV9 Web
| Edited By: |

Updated on:Feb 16, 2022 | 10:17 AM

Share

ಚಿಕ್ಕಬಳ್ಳಾಪುರ: ಮನಸ್ಸಿದ್ದಲ್ಲಿ ಮಾರ್ಗ ಎನ್ನುವ ಹಾಗೆ ಇಲ್ಲೊಬ್ಬರು ಅಧಿಕಾರಿ ಮನೆಯ ಸುತ್ತಮುತ್ತಲೂ ಪಾಳುಬಿದ್ದಿದ್ದ ಸರ್ಕಾರಿ ಜಮೀನನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಡಿ ಸುಂದರ ಉದ್ಯಾನವನವನ್ನಾಗಿ ಮಾಡಿ ಮನೆಯ ಮುಂದೆ ಮಿನಿ ಲಾಲ್‌ಬಾಗ್(Lalbagh) ನಿರ್ಮಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ(CEO) ಪಿ.ಶಿವಶಂಕರ್. ತಮ್ಮ ಸರ್ಕಾರಿ ವಸತಿಗೃಹದ ಬಳಿ ಇದ್ದ ಸರ್ಕಾರಿ ಜಮೀನನ್ನು ಉದ್ಯಾನವನವನ್ನಾಗಿ ಮಾಡಿದ್ದಾರೆ. ಗುತ್ತಿಗೆದಾರರು ವಸತಿಗೃಹ ನಿರ್ಮಿಸಿದರೆ, ಸರ್ಕಾರಿ ವಸತಿಗೃಹಕ್ಕೆ ಬಂದ ಶಿವಶಂಕರ್ ಮನೆಯ ಸುತ್ತಮುತ್ತ ಕೋರಕಲು ಬಿದ್ದ ಜಮೀನನ್ನು ಸುಂದರ ಉದ್ಯಾನವನ (Garden)  ಮಾಡಿದ್ದಾರೆ.

ಈ ಮೊದಲು ವಸತಿಗೃಹದ ಮುಂದೆ ಇದ್ದ ಪಾಳು ಬಿದ್ದ ಜಾಗದಿಂದಾಗಿ ಹಾವು-ಚೇಳುಗಳು ಹಾಗೂ ಹುಳ-ಹಪ್ಪಟೆಗಳು ಮನೆಯ ಒಳಗೆ ಬರುತ್ತಿದ್ದವು. ಇದರಿಂದ ಎದೆಗುಂದದ ಶಿವಶಂಕರ್, ಮನ್ರೇಗಾ ಯೋಜನೆೆಯಡಿ ಪಾಳು ಬಿದ್ದ ಜಮೀನನ್ನು ಉದ್ಯನವನವನ್ನಾಗಿ ಮಾಡಿಕೊಂಡಿದ್ದಾರೆ.

ಪಾಳುಬಿದ್ದ ಜಮೀನು ಈಗ ಮಿನಿ ಲಾಲ್‌ಬಾಗ್‌ನಂತೆ ಆಗಿದ್ದು, 17 ಗುಂಟೆ ಜಮೀನಿನಲ್ಲಿ ಉದ್ಯಾನವನ ತಲೆ ಎತ್ತಿ ನಿಂತಿದೆ. ಇಲ್ಲಿ ವಾಕಿಂಗ್ ಲೇನ್‌ಗಳು, ಕುಳಿತುಕೊಳ್ಳಲು ಹಟ್‌ಗಳು, ನೀರಿನ ಕಾರಂಜಿ, ಗಾರ್ಡನ್, ವೆಜಿಟೇಬಲ್ ಗಾರ್ಡನ್, ರೋಸ್ ಗಾರ್ಡನ್ ಸೇರಿದಂತೆ ವಿನೂತನ ಮಾದರಿಯ ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ. ಸತಃ ಶಿವಶಂಕರ್ ತಾಯಿ ಮಹದೇವಮ್ಮ ಅವರೇ ಮಗನ ಉದ್ಯಾನವನದಲ್ಲಿ ವಿಹರಿಸಿ ನೆಮ್ಮದಿ ಪಡೆಯುತ್ತಿದ್ದಾರೆ.

ಪಾಳುಬಿದ್ದ ಸರ್ಕಾರಿ ಜಮೀನನ್ನು ಸುಂದರ ಉದ್ಯಾಾನವನವನ್ನಾಗಿ ಮಾಡಿಲು 12 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇದರಲ್ಲಿ 8 ಲಕ್ಷ ರೂಪಾಯಿ ಜಾಬ್‌ಕಾರ್ಡ್ ಹೋಲ್ಡರ್‌ಸ್‌‌ಗೆ ಕೂಲಿ ಹಾಗೂ 4 ಲಕ್ಷ ರೂಪಾಯಿಯ ಸಾಮಗ್ರಿ ಖರೀದಿ ಮಾಡಲಾಗಿದೆ. ಉದ್ಯಾನವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಪಡೆಯದೆ ಮನ್ರೇಗಾ ಯೋಜನೆಯಡಿ ನಿರ್ಮಾಣ ಮಾಡಿದ್ದು ಇತರರಿಗೆ ಮಾದರಿಯಾಗಿದೆ.

ವರದಿ: ಭೀಮಪ್ಪ ಪಾಟೀಲ್

ಇದನ್ನೂ ಓದಿ: ಸುಂದರ ಉದ್ಯಾನವನದೊಂದಿಗೆ ಕಂಗೋಳಿಸುತ್ತಿದೆ ಡಂಪಿಂಗ್ ಯಾರ್ಡ್; ರಾಜ್ಯಕ್ಕೆ ಮಾದರಿಯಾದ ಸ್ವಚ್ಛ ಸಂಕೀರ್ಣ

ಲಾಕ್​ಡೌನ್​ ನಡುವೆಯೂ ಲಾಭ ಗಳಿಸಿದ ಪ್ರವಾಸಿ ತಾಣ; ಬನ್ನೇರುಘಟ್ಟ ಉದ್ಯಾನವನ‌ದಲ್ಲಿ ಕೋಟ್ಯಾಂತರ ರೂ. ಹಣ ಸಂಗ್ರಹ

Published On - 9:52 am, Wed, 16 February 22

ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ