ಧಾರವಾಡದಲ್ಲಿ 8 ಮನೆಗಳ ಬಾಗಿಲಿಗೆ ಹೊರಗಡೆಯಿಂದ ಬೀಗ ಹಾಕಿದ ದುಷ್ಕರ್ಮಿಗಳು! ವಿಚಿತ್ರ ಘಟನೆಗೆ ಬೆಚ್ಚಿಬಿದ್ದ ಸ್ಥಳೀಯರು

ಧಾರವಾಡ ನಗರದ ಕೆಸಿಡಿ ವೃತ್ತದ ಬಳಿ ಇರುವ ಆಕಾಶವಾಣಿ ವಸತಿ ಸಮುಚ್ಛಯದಲ್ಲಿ ಒಟ್ಟು 46 ಮನೆಗಳಿವೆ. ಈ ಪೈಕಿ 8 ಮನೆಗಳ ಜನರು ಇಂದು (ಜ.31) ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಲು ಹೊರಟಾಗ ಮನೆ ಬಾಗಿಲು ಬಂದ್ ಆಗಿರುವುದು ತಿಳಿದುಬಂದಿದೆ.

ಧಾರವಾಡದಲ್ಲಿ 8 ಮನೆಗಳ ಬಾಗಿಲಿಗೆ ಹೊರಗಡೆಯಿಂದ ಬೀಗ ಹಾಕಿದ ದುಷ್ಕರ್ಮಿಗಳು! ವಿಚಿತ್ರ ಘಟನೆಗೆ ಬೆಚ್ಚಿಬಿದ್ದ ಸ್ಥಳೀಯರು
ಬಾಗಿಲಿಗೆ ಕೀಲಿ ಹಾಕಿದ್ದಾರೆ ಮತ್ತು ಗಾಡಿ ಟೈಯರ್​ನಿಂದ ಗಾಳಿ ತೆಗೆದಿದ್ದಾರೆ
Follow us
TV9 Web
| Updated By: sandhya thejappa

Updated on:Jan 31, 2022 | 10:55 AM

ಧಾರವಾಡ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆ ಕಳ್ಳತನ, ಬೈಕ್ ಕಳ್ಳತನ ನಡೆಯುತ್ತಲೇ ಇವೆ. ಇದೇ ವೇಳೆ ನಗರದ ವಸತಿ ಗೃಹದಲ್ಲಿ ನಡೆದ ಘಟನೆಯೊಂದು ಜನರನ್ನು ಮತ್ತಷ್ಟು ಬೆಚ್ಚಿ ಬೀಳಿಸಿದೆ. ಎಂದಿನಂತೆ ಬೆಳಿಗ್ಗೆ ಎದ್ದು ಮನೆಯಿಂದ ಹೊರ ಬರಬೇಕು ಅಂದುಕೊಂಡ ಜನರಿಗೆ ಶಾಕ್ ಆಗಿದೆ. ಸುಮಾರು ಎಂಟು ಮನೆಗಳಿಗೆ (Homes) ದುಷ್ಕರ್ಮಿಗಳು (Perpetrators) ಹೊರಗಡೆಯಿಂದ ಕೀಲಿ (Key) ಹಾಕಿದ್ದು, ಜನರು ಮನೆಯಿಂದ ಹೊರಬರದಂತೆ ಮಾಡಿದ್ದರು.

ಆಕಾಶವಾಣಿ ವಸತಿಗೃಹದ ಜನರಿಗೆ ಆತಂಕ: ಧಾರವಾಡ ನಗರದ ಕೆಸಿಡಿ ವೃತ್ತದ ಬಳಿ ಇರುವ ಆಕಾಶವಾಣಿ ವಸತಿ ಸಮುಚ್ಛಯದಲ್ಲಿ ಒಟ್ಟು 46 ಮನೆಗಳಿವೆ. ಈ ಪೈಕಿ 8 ಮನೆಗಳ ಜನರು ಇಂದು (ಜ.31) ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಲು ಹೊರಟಾಗ ಮನೆ ಬಾಗಿಲು ಬಂದ್ ಆಗಿರುವುದು ತಿಳಿದುಬಂದಿದೆ. ಪೇಪರ್, ಹಾಲು ಹಾಕುವ ಹುಡುಗರನ್ನು ಕರೆದು ಕೇಳಿದಾಗ ಹೊರಗಡೆಯಿಂದ ಕೀಲಿಯನ್ನು ಹಾಕಲಾಗಿದೆ ಎಂದು ತಿಳಿದುಬಂತು.

ಬೆಳ್ಳಂಬೆಳಗ್ಗೆ ತಮ್ಮ ಮನೆಯ ಬಾಗಿಲಿಗೆ ಹೊರಗಿಂದ ಕೀಲಿ ಹಾಕಿರುವುದನ್ನು ಕಂಡ ಜನರು ಆತಂಕಗೊಂಡಿದ್ದಾರೆ. ಕೆಲವರು ಫೋನ್ ಮಾಡಿ ಕೀಲಿ ಒಡೆಸಿಕೊಂಡು ಹೊರಗೆ ಬಂದರೆ, ಮತ್ತೆ ಕೆಲವರು ಆತಂಕದಿಂದ ಮನೆಯಲ್ಲಿಯೇ ಉಳಿದುಕೊಳ್ಳಬೇಕಾಯಿತು. ಈ ವಸತಿಗೃಹ ನಿರ್ಮಿಸಿ 36 ವರ್ಷಗಳೇ ಆಗಿವೆ. ಅವತ್ತಿನಿಂದ ಇವತ್ತಿನವರೆಗೆ ಇಂತಹ ಘಟನೆಗಳು ನಡೆದಿರಲಿಲ್ಲ. ಈಗ ನಡೆದಿರುವ ಘಟನೆಯ ಹಿಂದೆ ಏನಾದರೂ ದುಷ್ಕೃತ್ಯದ ಸಂಚಿದೆಯಾ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ.

ವಿದ್ಯುತ್ ಸಂಪರ್ಕ ಕಟ್: ವಸತಿಗೃಹಗಳಲ್ಲಿ ಸುಮಾರು 250 ಜನರು ವಾಸಿಸುತ್ತಿದ್ದಾರೆ. ಬೆಳಗಿನ ಜಾವ ಸುಮಾರು ಜನರು ಕೆಲಸಕ್ಕೆ, ವಾಕಿಂಗ್ ಹೋಗುತ್ತಾರೆ. ಆದರೆ ಇಂದು ಬೆಳಗಿನ ಜಾವ ಸುಮಾರು 3:30 ಕ್ಕೆ ವಿದ್ಯುತ್ ಸಂಪರ್ಕ ಬಂದ್ ಆಗಿತ್ತಂತೆ. ಇದೇ ವೇಳೆ ದುಷ್ಕರ್ಮಿಗಳು ಈ ಕೃತ್ಯವೆಸಗಿರಬಹುದಾ ಅನ್ನೋ ಅನುಮಾನ ಮೂಡಿದೆ. ಆವರಣದಲ್ಲಿ ನಿಲ್ಲಿಸಿರುವ ಪಲ್ಸರ್ ಬೈಕ್ ಹಾಗೂ ಕ್ರೂಸರ್ ವಾಹನಗಳ ಟೈಯರ್​ ಗಾಳಿಯನ್ನು ಕೂಡ ದುಷ್ಕರ್ಮಿಗಳು ತೆಗೆದಿದ್ದಾರೆ. ಸದ್ಯ ಘಟನೆ ಬಗ್ಗೆ ಮಾಹಿತಿ ಪಡೆದ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಾಹಿತಿಯನ್ನು ಕಲೆ ಹಾಕಿದರು.

36 ವರ್ಷಗಳಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ರಾತ್ರಿ 12 ರವರೆಗೆ ಜನರು ಮನೆಗೆ ಬರುತ್ತಲೇ ಇರುತ್ತಾರೆ. ಬೆಳಿಗ್ಗೆ 4 ಗಂಟೆಗೆ ಕೆಲಸಕ್ಕೆ ಹೋಗುವವರು ಸಾಕಷ್ಟು ಜನರಿದ್ದಾರೆ. ಆದರೆ ಈ ಅವಧಿಯ ನಡುವೆ ದುಷ್ಕರ್ಮಿಗಳು ಇಂಥ ಕೃತ್ಯ ಎಸಗಿದ್ದು ಅಚ್ಚರಿ ಜತೆಗೆ ಆತಂಕವನ್ನೂ ಸೃಷ್ಟಿಸಿದೆ. ಮುಖ್ಯ ರಸ್ತೆಯಲ್ಲಿಯೇ ಈ ಕಟ್ಟಡವಿದ್ದರೂ ಇಂಥದ್ದೊಂದು ಘಟನೆ ನಡೆದಿದೆ. ಪೊಲೀಸರು ಕೂಡ ಒಳಗಡೆ ಬಂದು, ನಿತ್ಯವೂ ರೌಂಡ್ಸ್ ಮಾಡಿದರೆ ನಮಗೆ ನೆಮ್ಮದಿ ಸಿಗುತ್ತದೆ ಅಂತ ನಿವಾಸಿ ಡಾ.ಚೇತನ್ ನಾಯಕ್ ಹೇಳಿದರು.

ಟಿವಿ9 ಡಿಜಿಟಲ್ ಜತೆಗೆ ಮಾತನಾಡಿದ ಸ್ಥಳೀಯ ನಿವಾಸಿ ರಜಿನಿ ಕುಲಕರ್ಣಿ, ನಾನು ಎಂದಿನಂತೆ ಬೆಳಿಗ್ಗೆ ಬಾಗಿಲು ತೆರೆಯಲು ಹೋದೆ. ಆದರೆ ಅದು ಓಪನ್ ಆಗಲಿಲ್ಲ. ಕೂಡಲೇ ನನ್ನ ಮಗಳಿಗೆ ಹಿಂದಿನ ಬಾಗಿಲಿನಿಂದ ಹೋಗಿ ನೋಡಿಕೊಂಡು ಬರುವಂತೆ ಹೇಳಿದಾಗ, ಹೊರಗಡೆಯಿಂದ ಹೊಸದೊಂದು ಕೀಲಿ ಹಾಕಲಾಗಿತ್ತು. ಇದೇ ರೀತಿ ಅನೇಕರ ಮನೆಗಳಿಗೆ ಕೀಲಿ ಹಾಕಲಾಗಿತ್ತು. ಕೀಲಿ ಹಾಕಿದವರ ಮನೆಗಳಲ್ಲಿನ ಜನರು ಹೊರಗೆ ಬಾರದೇ ಪರದಾಡುವಂತಾಯಿತು. ನಾವು ಇಲ್ಲಿ 25 ವರ್ಷಗಳಿಂದ ನೆಲೆಸಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ. ನಮಗೆಲ್ಲಾ ಇದರಿಂದಾಗಿ ಭಾರೀ ಆತಂಕವುಂಟಾಗಿದೆ. ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಅಂತಾ ಒತ್ತಾಯಿಸಿದರು..

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ

ಹಿಂದೂ ಧರ್ಮದ ಬಗ್ಗೆ ಸ್ನಾತಕೋತ್ತರ ಕೋರ್ಸ್ ಆರಂಭಿಸಿದ ಬನಾರಸ್ ಹಿಂದೂ ವಿವಿ; ಮೊದಲ ಬ್ಯಾಚ್​ಗೆ 45 ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆ

ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಕ್ರೂಸರ್ ಮೇಲೆ ಕುಳಿತು ಬೆಂಕಿ ಹಚ್ಚಿಕೊಂಡ ಮಾಲಿಕ; ಓನರ್ ಬಚಾವ್, ವಾಹನ ಸುಟ್ಟುಕರಕಲು

Published On - 10:48 am, Mon, 31 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ