ಕಾಂಗ್ರೆಸ್‌ಗೆ ಕಂಟಕ: ಮತ್ತೊಬ್ಬ ಓವೈಸಿ ಆಗ್ತಾರಾ ಸಿಎಂ ಇಬ್ರಾಹಿಂ?
ಎಲೆಕ್ಷನ್ಗೆ ಇನ್ನೇನು ಒಂದು ವರ್ಷ ಸಮಯ ಬಾಕಿಯಿದೆ. ಈ ಮಧ್ಯದಲ್ಲಿ ಕಾಂಗ್ರೆಸ್‌ಗೆ ಆಂತರಿಕ ಕಲಹ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಹಿರಿಯ ನಾಯಕ, ಮಾತಿನ ಮಲ್ಲ ಸಿಎಂ ಇಬ್ರಾಹಿಂ ಸದ್ಯ ಕೈ ನಾಯಕರ ವಿರುದ್ದ ಕೆರಳಿ ಕೆಂಡವಾಗಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂಗೂ ಹುಬ್ಬಳ್ಳಿಗೂ ಭಾವನಾತ್ಮಕ ನಂಟಿದೆ. ಇದಕ್ಕೆ ಕಾರಣ ಹುಬ್ಬಳ್ಳಿಯ ಈದ್ಗಾ ವಿವಾದ. ಕೇವಲ ಹುಬ್ಬಳ್ಳಿ ಮಾತ್ರವಲ್ಲ ದೇಶಾದ್ಯಂತ ವಿವಾದ ಎಬ್ಬಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಈದ್ಗಾ ವಿವಾದ ಬಗೆಹರಿಸಿದ ಶ್ರೇಯಸ್ಸು ಸಿಎಂ ಇಬ್ರಾಹಿಂ ಅವರದ್ದು. ಆದ್ರೆ ಅದೇ ಇಬ್ರಾಹಿಂ ಈಗ ಹುಬ್ಬಳ್ಳಿಯಲ್ಲೇ ಕಣ್ಣೀರು ಹಾಕಿದ್ದಾರೆ. ಇದು ಈಗ ತಳಮಳಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌ಗೆ ಒಳೇಟು ಕೊಡೊಕೆ ಇಬ್ರಾಹಿಂ ತಂತ್ರ
ಎಲೆಕ್ಷನ್ಗೆ ಇನ್ನೇನು ಒಂದು ವರ್ಷ ಸಮಯ ಬಾಕಿಯಿದೆ. ಈ ಮಧ್ಯದಲ್ಲಿ ಕಾಂಗ್ರೆಸ್‌ಗೆ ಆಂತರಿಕ ಕಲಹ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಹಿರಿಯ ನಾಯಕ, ಮಾತಿನ ಮಲ್ಲ ಸಿಎಂ ಇಬ್ರಾಹಿಂ ಸದ್ಯ ಕೈ ನಾಯಕರ ವಿರುದ್ದ ಕೆರಳಿ ಕೆಂಡವಾಗಿದ್ದಾರೆ. ಯಾವಾಗ ಪರಿಷತ್ನ ವಿಪಕ್ಷ ಸ್ಥಾನ ಕೈ ತಪ್ಪಿತೋ ಅಂದೇ ಕಾಂಗ್ರೆಸ್ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಎಂಎಲ್‌ಸಿ ಮಾಡಿದ್ದೀನಿ ಎನ್ನೋ ಸಿದ್ದರಾಮಯ್ಯ ಹೇಳಿಕೆಗೆ ತೀರುಗೇಟು ನೀಡಿರುವ ಇಬ್ರಾಹಿಂ ಸಿದ್ದರಾಮಯ್ಯಗೆ ಸವಾಲ್ ಹಾಕಿದ್ದಾರೆ. ನಾಳೆಯೇ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಲಿ ಯಾರು ಗೆಲ್ತಾರೋ ನೋಡೋಣ ಅಂತಾ ತೊಡೆ ತಟ್ಟಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಇಬ್ರಾಹಿಂ ಸಿದ್ದರಾಮಯ್ಯನವರ ಅಹಿಂದ ಅಸ್ತ್ರಕ್ಕೆ ಪ್ರತ್ಯಸ್ತ್ರವಾಗಿ ಅಲಿಂಗ ಅಂದ್ರೆ ಅಲ್ಪಸಂಖ್ಯಾತ ಲಿಂಗಾಯತ ಸಮಾವೇಶ ಮಾಡೋದಾಗಿ ಗುಡುಗಿದ್ದಾರೆ. ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರೋ ಕೈ ಪಾರ್ಟಿಗೆ ಇಬ್ರಾಹಿಂ ಅಲಿಂಗ ಮೂಲಕ ಶಾಕ್ ಕೊಡೊಕೆ ರೆಡಿಯಾಗಿದ್ದಾರೆ.ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಎಸ್.ಆರ್ ಪಾಟೀಲ್ ಜೊತೆ ಸಭೆ ನಡೆಸಿದ ಇಬ್ರಾಹಿಂ, ಮುಂದಿನ ತಮ್ಮ ನಡೆ ಹಾಗೂ ರಾಜಕೀಯ ಲೆಕ್ಕಚಾರದ ಬಗ್ಗೆ ಚರ್ಚೆ ನಡೆಸಿದ್ರು. ಒಂದು ಹಂತದಲ್ಲಿ ಎಸ್ ಆರ್ ಪಾಟೀಲ್ರನ್ನ ಕೂಡಾ ಪಕ್ಷದಿಂದ ಹೊರತಂದು ಕೈ ಹೈಕಮಾಂಡ್ ಗೆ ಎಚ್ಚರಿಕೆ ಸಂದೇಶ ರವಾನಿಸೋ ಫ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಇಬ್ರಾಹಿಂ ನಡೆಯಿಂದ ಅಲ್ಪಸಂಖ್ಯಾತರ ಸಿಟ್ಟಿಗೆ ಗುರಿಯಾಗದಂತೆ ಡ್ಯಾಮೇಜ್ ಕಂಟ್ರೋಲ್ ಮಾಡಿರೋ ಕೈ ಪಡೆ, ವಿಧಾನಸಭೆ ವಿಪಕ್ಷ ಉಪನಾಯಕ ಸ್ಥಾನಕ್ಕೆ U.T.ಖಾದರ್ ಆಯ್ಕೆ ಮಾಡಿದೆ.
ಈ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಸ್ಥಾನಮಾನ ಸಿಕ್ತಿಲ್ಲ ಅಂತಾ ಸಿಟ್ಟಾಗಿರೋ ಅಲ್ಪಸಂಖ್ಯಾತ ಮುಖಂಡರು ನಿನ್ನೆ ಸಭೆ ನಡೆಸಿದ್ರು. ಮುಸ್ಲಿಂ ಸಮುದಾಯ ಕಡೆಗಣಿಸದಂತೆ ಎಚ್ಚರಿಕೆ ಸಂದೇಶ ರವಾನಿಸಿದ್ರು.