ಹಿಂದೂ ಧರ್ಮದ ಬಗ್ಗೆ ಸ್ನಾತಕೋತ್ತರ ಕೋರ್ಸ್ ಆರಂಭಿಸಿದ ಬನಾರಸ್ ಹಿಂದೂ ವಿವಿ; ಮೊದಲ ಬ್ಯಾಚ್​ಗೆ 45 ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆ

ಈ ಕೋರ್ಸ್ ಹಿಂದೂ ಧರ್ಮದ ಅನೇಕ ಅಪರಿಚಿತ ಅಂಶಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸುತ್ತದೆ ಮತ್ತು ಈ ಕೋರ್ಸ್​ನ ಬೋಧನೆಯು ಹೆಚ್ಚಿನ ಜನರಿಗೆ ಹಿಂದೂ ಧರ್ಮವನ್ನು ತಲುಪಿಸಲು ಸಹಾಯ ಮಾಡುತ್ತದೆ. ಸದ್ಯ ಈ ಕೋರ್ಸ್​ನ ಮೊದಲ ಬ್ಯಾಚ್‌ಗೆ ವಿದೇಶಿ ವಿದ್ಯಾರ್ಥಿ ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಪ್ರೊ.ಶುಕ್ಲಾ ಹೇಳಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಸ್ನಾತಕೋತ್ತರ ಕೋರ್ಸ್ ಆರಂಭಿಸಿದ ಬನಾರಸ್ ಹಿಂದೂ ವಿವಿ; ಮೊದಲ ಬ್ಯಾಚ್​ಗೆ 45 ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆ
ಬನಾರಸ್ ಹಿಂದೂ ವಿವಿ
Follow us
TV9 Web
| Updated By: preethi shettigar

Updated on:Jan 31, 2022 | 9:03 AM

ನವದೆಹಲಿ: ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಹೊಸ ಕೋರ್ಸ್ ಅನ್ನು ಪ್ರಾರಂಭಿಸಿದೆ.  ಹಿಂದೂ ಧರ್ಮದ ಬಗ್ಗೆ ವಿದ್ಯಾರ್ಥಿಗಳಿಗೆ(Students) ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ಎಂಎ ಕೋರ್ಸ್​ನಲ್ಲಿ(Course) ಹಿಂದೂ ಅಧ್ಯಯನ ಎಂಬ ಹೊಸ ಕೋರ್ಸ್​ ಪ್ರಾರಂಭಿಸಿದ್ದಾರೆ. ಉತ್ತರ ಪ್ರದೇಶದ ಬಿಹೆಚ್​ಯು ಪ್ರಕಾರ, ಸ್ನಾತಕೋತ್ತರ ಕೋರ್ಸ್​ನಲ್ಲಿ ಈ ರೀತಿಯ ಬದಲಾವಣೆ ಇದೇ ಮೊದಲು ಎಂದು ತಿಳಿಸಿದ್ದಾರೆ.

ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮುಖ್ಯಸ್ಥ ವಿ.ಕೆ. ಶುಕ್ಲಾ ಈ ಕೋರ್ಸ್ ಅನ್ನು ಉದ್ಘಾಟಿಸಿದರು ಮತ್ತು ಇದು ರಾಷ್ಟ್ರೀಯ ಶಿಕ್ಷಣ ನೀತಿ, 2020ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಅಂತರಶಿಸ್ತೀಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಜತೆಗೆ ಈ ಕಾರ್ಯಕ್ರಮವನ್ನು ಭಾರತ್ ಅಧ್ಯಯನ ಕೇಂದ್ರ, ತತ್ವಶಾಸ್ತ್ರ ಮತ್ತು ಧರ್ಮ ಇಲಾಖೆ, ಸಂಸ್ಕೃತ ಇಲಾಖೆ ಮತ್ತು ಪ್ರಾಚೀನ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆ, ಕಲಾ ವಿಭಾಗದ ಅಡಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಈ ಕೋರ್ಸ್ ಹಿಂದೂ ಧರ್ಮದ ಅನೇಕ ಅಪರಿಚಿತ ಅಂಶಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸುತ್ತದೆ ಮತ್ತು ಈ ಕೋರ್ಸ್​ನ ಬೋಧನೆಯು ಹೆಚ್ಚಿನ ಜನರಿಗೆ ಹಿಂದೂ ಧರ್ಮವನ್ನು ತಲುಪಿಸಲು ಸಹಾಯ ಮಾಡುತ್ತದೆ. ಸದ್ಯ ಈ ಕೋರ್ಸ್​ನ ಮೊದಲ ಬ್ಯಾಚ್‌ಗೆ ವಿದೇಶಿ ವಿದ್ಯಾರ್ಥಿ ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಪ್ರೊ.ಶುಕ್ಲಾ ಹೇಳಿದ್ದಾರೆ.

ಬಳಿಕ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್‌ನ ನಿರ್ದೇಶಕ ಡಾ.ವಿಜಯ್ ಶಂಕರ್ ಶುಕ್ಲಾ, ಹಿಂದೂ ಅಧ್ಯಯನದ ಬಗ್ಗೆ ಇಂತಹ ಕೋರ್ಸ್‌ನ ಅಗತ್ಯವನ್ನು ಮತ್ತಷ್ಟು ಮನವರಿಕೆ ಮಾಡುವಂತೆ ವಿವರಣೆ ನೀಡಿದರು.

ಬಳಿಕ ಪ್ರೊ.ರಾಕೇಶ್ ಉಪಾಧ್ಯಾಯ ಮಾತನಾಡಿ, ಸನಾತನ ಜೀವನ ಮೌಲ್ಯಗಳ ನಿರ್ಮಾಣಕ್ಕೆ ಈ ಕೋರ್ಸ್ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಪ್ರಸಕ್ತ ಸಾಲಿನಿಂದ ಐಟಿಐಗೆ 6 ಹೊಸ ಕೋರ್ಸ್ ಸೇರ್ಪಡೆ: ಅಶ್ವತ್ಥ್ ನಾರಾಯಣ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ

2022-23ನೇ‌ ಸಾಲಿನಿಂದ ಇಂಜಿನಿಯರಿಂಗ್ ಸೇರಿ ಎಲ್ಲಾ ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡದಲ್ಲೇ ಕಲಿಕೆಗೆ ಅವಕಾಶ

Published On - 8:51 am, Mon, 31 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್